7 ವರ್ಷಗಳ ಡೇಟಿಂಗ್‌ನಲ್ಲಿ ನಮಗೆ ಯಾವತ್ತೂ ಧರ್ಮ ಅಡ್ಡಿಯಾಗಲಿಲ್ಲ; ಜಹೀರ್‌ ಜತೆಗಿನ ಮದುವೆ ಬಗ್ಗೆ ಸೋನಾಕ್ಷಿ ಸಿನ್ಹಾ ಮಾತು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  7 ವರ್ಷಗಳ ಡೇಟಿಂಗ್‌ನಲ್ಲಿ ನಮಗೆ ಯಾವತ್ತೂ ಧರ್ಮ ಅಡ್ಡಿಯಾಗಲಿಲ್ಲ; ಜಹೀರ್‌ ಜತೆಗಿನ ಮದುವೆ ಬಗ್ಗೆ ಸೋನಾಕ್ಷಿ ಸಿನ್ಹಾ ಮಾತು

7 ವರ್ಷಗಳ ಡೇಟಿಂಗ್‌ನಲ್ಲಿ ನಮಗೆ ಯಾವತ್ತೂ ಧರ್ಮ ಅಡ್ಡಿಯಾಗಲಿಲ್ಲ; ಜಹೀರ್‌ ಜತೆಗಿನ ಮದುವೆ ಬಗ್ಗೆ ಸೋನಾಕ್ಷಿ ಸಿನ್ಹಾ ಮಾತು

ಜಹೀರ್‌ ಇಕ್ಬಾಲ್‌ ಜತೆಗಿನ ಮದುವೆ ಬಗ್ಗೆ ನಟಿ ಸೋನಾಕ್ಷಿ ಸಿನ್ಹಾ ಮಾತನಾಡಿದ್ದಾರೆ. ಸುದೀರ್ಘ 7 ವರ್ಷಗಳ ಕಾಲ ಈ ಜೋಡಿ ಡೇಟಿಂಗ್‌ ಮಾಡಿದೆ. ಆ ಏಳು ವರ್ಷದ ಅವಧಿಯಲ್ಲಿ ಒಂದು ಬಾರಿಯೂ ನಾವು ನಮ್ಮ ಧರ್ಮದ ಬಗ್ಗೆ ಯೋಚಿಸಿಲ್ಲ ಎಂದಿದ್ದಾರೆ.

ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್‌ ಅಂತರ್ಜಾತೀಯ ವಿವಾಹದ ಬಗ್ಗೆ ಬಾಲಿವುಡ್‌ ಅಂಗಳದಲ್ಲಿ ಬಗೆಬಗೆ ಗಾಸಿಪ್‌ಗಳು ಸದ್ದು ಮಾಡಿದ್ದವು. ಆದಾಗ್ಯೂ, ಈ ಬಗ್ಗೆ ಸೋನಾಕ್ವಿಯಾಗಲಿ, ಜಹೀರ್‌ ಆಗಲಿ ಮಾತನಾಡಿರಲಿಲ್ಲ. ಇದೀಗ ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಸೋನಾಕ್ಷಿ, ಆ ಬಗ್ಗೆ ನನಗೆ ನಂಬಿಕೆ ಇಲ್ಲ. ಜೀವನದಲ್ಲಿ ಉತ್ತಮ ಮನುಷ್ಯನಾಗಿರುವುದೇ ನಿರ್ಣಾಯಕ ಎಂದಿದ್ದಾರವರು.   
icon

(1 / 6)

ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್‌ ಅಂತರ್ಜಾತೀಯ ವಿವಾಹದ ಬಗ್ಗೆ ಬಾಲಿವುಡ್‌ ಅಂಗಳದಲ್ಲಿ ಬಗೆಬಗೆ ಗಾಸಿಪ್‌ಗಳು ಸದ್ದು ಮಾಡಿದ್ದವು. ಆದಾಗ್ಯೂ, ಈ ಬಗ್ಗೆ ಸೋನಾಕ್ವಿಯಾಗಲಿ, ಜಹೀರ್‌ ಆಗಲಿ ಮಾತನಾಡಿರಲಿಲ್ಲ. ಇದೀಗ ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಸೋನಾಕ್ಷಿ, ಆ ಬಗ್ಗೆ ನನಗೆ ನಂಬಿಕೆ ಇಲ್ಲ. ಜೀವನದಲ್ಲಿ ಉತ್ತಮ ಮನುಷ್ಯನಾಗಿರುವುದೇ ನಿರ್ಣಾಯಕ ಎಂದಿದ್ದಾರವರು.   (Sunil Khandare)

ನಾವು ಚೆನ್ನಾಗಿದ್ದೇವೆ. ಚೆನ್ನಾಗಿಯೇ ಇರುತ್ತೇವೆ. ನಿಜ ಹೇಳಬೇಕೆಂದರೆ ನಮ್ಮಿಬ್ಬರ ಮನಸ್ಥಿತಿ ಒಂದೇ ರೀತಿಯಲ್ಲಿದೆ. ಹಾಗಾಗಿಯೇ ನಮ್ಮಿಬ್ಬರ ಕೆಮಿಸ್ಟ್ರಿಯೂ ಸಿಂಕ್‌ ಆಗಿದೆ ಎಂದಿದ್ದಾರೆ ಸೋನಾಕ್ಷಿ. 
icon

(2 / 6)

ನಾವು ಚೆನ್ನಾಗಿದ್ದೇವೆ. ಚೆನ್ನಾಗಿಯೇ ಇರುತ್ತೇವೆ. ನಿಜ ಹೇಳಬೇಕೆಂದರೆ ನಮ್ಮಿಬ್ಬರ ಮನಸ್ಥಿತಿ ಒಂದೇ ರೀತಿಯಲ್ಲಿದೆ. ಹಾಗಾಗಿಯೇ ನಮ್ಮಿಬ್ಬರ ಕೆಮಿಸ್ಟ್ರಿಯೂ ಸಿಂಕ್‌ ಆಗಿದೆ ಎಂದಿದ್ದಾರೆ ಸೋನಾಕ್ಷಿ. (Sunil Khandare)

ನಮ್ಮ ತಂದೆ ತಾಯಿ ನಮಗೆ ಉತ್ತಮ ಮನುಷ್ಯರಾಗಿ ಇರಲು ಹೇಳಿಕೊಟ್ಟಿದ್ದಾರೆ. ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಟ್ಟಿದ್ದಾರೆ. ದೇವರ ಮೇಲೆ ನಂಬಿಕೆ ಇಡುವಂತೆಯೂ ಹೇಳಿದ್ದಾರೆ. ಅದೇ ರೀತಿ ನಾವು ಉತ್ತಮ ಮೌಲ್ಯಗಳ ಜತೆಗೆ ಬೆಳೆದಿದ್ದೇವೆ.  
icon

(3 / 6)

ನಮ್ಮ ತಂದೆ ತಾಯಿ ನಮಗೆ ಉತ್ತಮ ಮನುಷ್ಯರಾಗಿ ಇರಲು ಹೇಳಿಕೊಟ್ಟಿದ್ದಾರೆ. ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಟ್ಟಿದ್ದಾರೆ. ದೇವರ ಮೇಲೆ ನಂಬಿಕೆ ಇಡುವಂತೆಯೂ ಹೇಳಿದ್ದಾರೆ. ಅದೇ ರೀತಿ ನಾವು ಉತ್ತಮ ಮೌಲ್ಯಗಳ ಜತೆಗೆ ಬೆಳೆದಿದ್ದೇವೆ.  (Sunil Khandare)

ಅದೇ ರೀತಿ ‌ ಜಹೀರ್‌ ಸಹ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಮತ್ತು ಸೋನಾಕ್ಷಿ ಸಾವಿರ ಸಾವಿರ  ವಿಷಯಗಳಲ್ಲಿ ಭಿನ್ನಾಭಿಪ್ರಾಯ ಹೊಂದಿರಬಹುದು. ಆದರೆ ಅದು ಎಂದಿಗೂ ಧರ್ಮವಾಗುವುದಿಲ್ಲ. ಸಲೀಂ ಅಂಕಲ್ (ಸಲ್ಮಾನ್ ಅವರ ತಂದೆ ಸಲೀಂ ಖಾನ್) ಒಮ್ಮೆ ಮದುವೆಯ ಸಮಯದಲ್ಲಿ ಸಲ್ಮಾ ಆಂಟಿಯ ಪೋಷಕರಿಗೆ ಇದೇ ವಿಷಯವನ್ನು ಹೇಳಿದ್ದರು ಎಂದು ಜಹೀರ್ ನೆನಪಿಸಿಕೊಂಡರು.
icon

(4 / 6)

ಅದೇ ರೀತಿ ‌ ಜಹೀರ್‌ ಸಹ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಮತ್ತು ಸೋನಾಕ್ಷಿ ಸಾವಿರ ಸಾವಿರ  ವಿಷಯಗಳಲ್ಲಿ ಭಿನ್ನಾಭಿಪ್ರಾಯ ಹೊಂದಿರಬಹುದು. ಆದರೆ ಅದು ಎಂದಿಗೂ ಧರ್ಮವಾಗುವುದಿಲ್ಲ. ಸಲೀಂ ಅಂಕಲ್ (ಸಲ್ಮಾನ್ ಅವರ ತಂದೆ ಸಲೀಂ ಖಾನ್) ಒಮ್ಮೆ ಮದುವೆಯ ಸಮಯದಲ್ಲಿ ಸಲ್ಮಾ ಆಂಟಿಯ ಪೋಷಕರಿಗೆ ಇದೇ ವಿಷಯವನ್ನು ಹೇಳಿದ್ದರು ಎಂದು ಜಹೀರ್ ನೆನಪಿಸಿಕೊಂಡರು.(PTI)

"ಈ ಏಳು ವರ್ಷಗಳ ಡೇಟಿಂಗ್‌ನಲ್ಲಿ, ನಮ್ಮ ಧರ್ಮಗಳು ನಮ್ಮ ಮಾತುಕತೆಯಲ್ಲಿ ಎಂದಿಗೂ ಬರಲಿಲ್ಲ. ನಾವಿಬ್ಬರೂ ಪರಸ್ಪರರ ಧರ್ಮವನ್ನು ಗೌರವಿಸುತ್ತೇವೆ. ಇದು ಎಂದಿಗೂ ಚರ್ಚೆಯ ವಿಷಯವಾಗಿರಲಿಲ್ಲ. ಇಡೀ ಚರ್ಚೆ ಹೊರಗಿನವರಿಂದ ಬಂದಿತೇ ಹೊರತು ನಮ್ಮಿಂದಲ್ಲ. ಎಂದಿದ್ದಾರೆ ಸೋನಾಕ್ಷಿ ಹೇಳಿದರು. 
icon

(5 / 6)

"ಈ ಏಳು ವರ್ಷಗಳ ಡೇಟಿಂಗ್‌ನಲ್ಲಿ, ನಮ್ಮ ಧರ್ಮಗಳು ನಮ್ಮ ಮಾತುಕತೆಯಲ್ಲಿ ಎಂದಿಗೂ ಬರಲಿಲ್ಲ. ನಾವಿಬ್ಬರೂ ಪರಸ್ಪರರ ಧರ್ಮವನ್ನು ಗೌರವಿಸುತ್ತೇವೆ. ಇದು ಎಂದಿಗೂ ಚರ್ಚೆಯ ವಿಷಯವಾಗಿರಲಿಲ್ಲ. ಇಡೀ ಚರ್ಚೆ ಹೊರಗಿನವರಿಂದ ಬಂದಿತೇ ಹೊರತು ನಮ್ಮಿಂದಲ್ಲ. ಎಂದಿದ್ದಾರೆ ಸೋನಾಕ್ಷಿ ಹೇಳಿದರು. (PTI)

ಧರ್ಮಕ್ಕಿಂತ ಹೆಚ್ಚಾಗಿ ನಮ್ಮ ಪಾಲಿಗೆ ಪ್ರೀತಿ ಮುಖ್ಯ. ನಾವು ಸೆಲೆಬ್ರಿಟಿ ಆಗಿರುವುದರಿಂದ ಎಲ್ಲರ ದೃಷ್ಟಿ ನಮ್ಮ ಮೇಲಿರುತ್ತದೆ. ನಾವು ಎಲ್ಲರಿಗೂ ಸೇರಿದವರು ಎಂದಿದ್ದಾರೆ.
icon

(6 / 6)

ಧರ್ಮಕ್ಕಿಂತ ಹೆಚ್ಚಾಗಿ ನಮ್ಮ ಪಾಲಿಗೆ ಪ್ರೀತಿ ಮುಖ್ಯ. ನಾವು ಸೆಲೆಬ್ರಿಟಿ ಆಗಿರುವುದರಿಂದ ಎಲ್ಲರ ದೃಷ್ಟಿ ನಮ್ಮ ಮೇಲಿರುತ್ತದೆ. ನಾವು ಎಲ್ಲರಿಗೂ ಸೇರಿದವರು ಎಂದಿದ್ದಾರೆ.(PTI)


ಇತರ ಗ್ಯಾಲರಿಗಳು