Hipster Saree: ರೂಢಿಗತ ಶೈಲಿ ಬಿಟ್ಟು ಹಿಪ್‌ಸ್ಟೆರ್ ಸೀರೆಯನ್ನು ಭಿನ್ನವಾಗಿ ಉಟ್ಟ ಉರ್ಫಿ ಜಾವೇದ್, ಹೊಸ ರಿಯಾಲಿಟಿ ಶೋಗೆ ತಯಾರಿ
- ಬಾಲಿವುಡ್ ನಟಿ ಮತ್ತು ಸೋಷಿಯಲ್ ಮೀಡಿಯಾದ ಜನಪ್ರಿಯ ಇನ್‌ಫ್ಲೂಯೆನ್ಸರ್ ಉರ್ಫಿ ಜಾವೇದ್ ಉಟ್ಟ ಸೀರೆಯ ಶೈಲಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಂದಹಾಗೆ, ಇದು ಅಮೆಜಾನ್ ಇಂಡಿಯಾದ ಹೊಸ ರಿಯಾಲಿಟಿ ಸರಣಿಗಾಗಿ ನಡೆಸಿದ ಫೋಟೋಶೂಟ್. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.
- ಬಾಲಿವುಡ್ ನಟಿ ಮತ್ತು ಸೋಷಿಯಲ್ ಮೀಡಿಯಾದ ಜನಪ್ರಿಯ ಇನ್‌ಫ್ಲೂಯೆನ್ಸರ್ ಉರ್ಫಿ ಜಾವೇದ್ ಉಟ್ಟ ಸೀರೆಯ ಶೈಲಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಂದಹಾಗೆ, ಇದು ಅಮೆಜಾನ್ ಇಂಡಿಯಾದ ಹೊಸ ರಿಯಾಲಿಟಿ ಸರಣಿಗಾಗಿ ನಡೆಸಿದ ಫೋಟೋಶೂಟ್. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.
(1 / 7)
ಉರ್ಫಿ ಜಾವೆದ್ ಅವರು ಅಮೆಜಾನ್ ಇಂಡಿಯಾದ ಹೊಸ ರಿಯಾಲಿಟಿ ಸರಣಿಯ ಶೂಟಿಂಗ್‌ಗಾಗಿ ಅಬು ಜಾನಿ ಸಂದೀಪ್ ಖೋಸ್ಲಾ ವಿನ್ಯಾಸದ ಕಸ್ಟಮ್ ಉಡುಗೆ ತೊಟ್ಟಿದ್ದಾರೆ. ಈ ಸೀರೆಯನ್ನು ಸಾಂಪ್ರದಾಯಕ ವಿಧಾನಕ್ಕಿಂತ ಭಿನ್ನವಾಗಿ ಉಟ್ಟಿದ್ದಾರೆ.
(2 / 7)
ಹಿಪ್‌ಸ್ಟೆರ್ ಸೀರೆಯನ್ನು ಉರ್ಫಿ ಜಾವೇದ್ ರೂಢಿಗತ ಶೈಲಿ ಬಿಟ್ಟು ಬೇರೆ ರೀತಿ ಉಟ್ಟಿದ್ದಾರೆ. ಈ ಸೀರೆಯಲ್ಲಿ ತನ್ನ ತೊಡೆ ಕಾಣಿಸುವಂತೆ ಉಟ್ಟಿದ್ದಾರೆ. ಅಮೆಜಾನ್ ಇಂಡಿಯಾದ ಹೊಸ ವೆಬ್ ಸರಣಿ ಕುರಿತು ಸದ್ಯ ಮಾಹಿತಿ ಲಭ್ಯವಿಲ್ಲ. ಆದರೆ, ಈ ಒಟಿಟಿ ವೆಬ್ ಸರಣಿಯಲ್ಲಿ ಉರ್ಫಿ ಜಾವೇದ್ ಡಿಫರೆಂಟ್ ಆಗಿ ಕಾಣಿಸಿಕೊಳ್ಳುವುದು ಪಕ್ಕಾ ಆಗಿದೆ.
(3 / 7)
ಹಿಪ್‌ಸ್ಟೆರ್ ಸೀರೆ ಎಂದರೇನು?: ಇದು ಮಿನಿ ಸೀರೆ. 1960ರ ಆಸುಪಾಸಿನಲ್ಲಿ ಶ್ರೀಲಂಕಾದಲ್ಲಿ ಜನಪ್ರಿಯತೆ ಪಡೆದಿತ್ತು. ಇಂತಹ ಮಿನಿ ಸೀರೆಗಳು ಈಗ ಫ್ಯಾಷನ್ ಹೆಸರಲ್ಲಿ ವೈವಿಧ್ಯಮಯವಾಗಿ ಆಗಮಿಸಿವೆ. ಇದೇ ಹಿಪ್‌ಸ್ಟೆರ್ ಸೀರೆಯನ್ನು ಉರ್ಫಿ ಜಾವೇದ್ ರೂಢಿಗತ ವಿಧಾನಕ್ಕಿಂತ ಬೇರೆ ರೀತಿ ಉಟ್ಟಿದ್ದಾರೆ.
(4 / 7)
ಬಾಲಿವುಡ್ ನಟಿ ಉರ್ಫಿ ಜಾವೇದ್ ತನ್ನ ಇನ್‌ಸ್ಟಾಗ್ರಾಂನಲ್ಲಿ ವೈವಿಧ್ಯಮಯ ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ವಿಶೇಷ ಉಡುಪು ಧರಿಸಿ ಪೋಸ್ ನೀಡುತ್ತಾರೆ. ವಿವಿಧ ಮೆಟಿರಿಯಲ್‌ಗಳನ್ನೇ ಉಡುಪಾಗಿಸಿ ಪೋಸ್ ನೀಡುತ್ತಾರೆ. ಆದರೆ, ಈಗಿನ ಹಿಪ್‌ಸ್ಟಾರ್ ಉಡುಗೆ ತೊಟ್ಟಿರುವುದು ಹೊಸ ರಿಯಾಲಿಟಿ ಸರಣಿಗಾಗಿ.
(5 / 7)
ಉರ್ಫಿ ಜಾವೇದ್ 1997ರ ಅಕ್ಟೋಬರ್ 15ರಂದು ಲಖನೌನ ಮುಸ್ಲಿಂ ಕುಟುಂಬದಲ್ಲಿ ಜನಿಸಿದರು. ಕಿರುತೆರೆ ನಟಿಯಾಗಿ ಮತ್ತು ಸೋಷಿಯಲ್ ಮೀಡಿಯಾ ಪರ್ಸನಾಲಿಟಿಯಾಗಿ ಜನಪ್ರಿಯತೆ ಪಡೆದಿದ್ದಾರೆ.
(6 / 7)
2021ರಲ್ಲಿ ವೂಟ್‌ನಲ್ಲಿ ಬಿಗ್ ಬಾಸ್ ಒಟಿಟಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಗಮನ ಸೆಳೆದಿದ್ದರು. ಅಮೆಜಾನ್ ಇಂಡಿಯಾದ ಹೊಸ ರಿಯಾಲಿಟಿ ಸರಣಿ ಯಾವ ರೀತಿಯದ್ದು ಎನ್ನುವ ವಿವರವಿಲ್ಲ. ಆದರೆ, ಇದು ಹೊಸ ಬಗೆಯ ಫ್ಯಾಷನ್ ಲೋಕವನ್ನು ತೆರೆದಿಡುವ ಸೂಚನೆಯಿದೆ.
ಇತರ ಗ್ಯಾಲರಿಗಳು