ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Maidaan Ott: ಸದ್ದಿಲ್ಲದೆ ಒಟಿಟಿಗೆ ಎಂಟ್ರಿ ಕೊಟ್ಟ ಅಜಯ್‌ ದೇವಗನ್‌ ನಟನೆಯ ಮೈದಾನ್‌ ಸಿನಿಮಾ; ವೀಕ್ಷಣೆ ಎಲ್ಲಿ? ಹೀಗಿದೆ ಮಾಹಿತಿ

Maidaan OTT: ಸದ್ದಿಲ್ಲದೆ ಒಟಿಟಿಗೆ ಎಂಟ್ರಿ ಕೊಟ್ಟ ಅಜಯ್‌ ದೇವಗನ್‌ ನಟನೆಯ ಮೈದಾನ್‌ ಸಿನಿಮಾ; ವೀಕ್ಷಣೆ ಎಲ್ಲಿ? ಹೀಗಿದೆ ಮಾಹಿತಿ

  • Maidaan OTT:: ಬಾಲಿವುಡ್ ನಟ ಅಜಯ್ ದೇವಗನ್ ನಟನೆಯ ಮೈದಾನ ಸಿನಿಮಾ ಏಪ್ರಿಲ್‌ 11ರ ಈದ್ ಹಬ್ಬದ ಸಂದರ್ಭದಲ್ಲಿ  ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಅಕ್ಷಯ್‌ ಕುಮಾರ್‌ ಅವರ ಬಡೇ ಮಿಯಾ ಚೋಟೆ ಮಿಯಾ ಸಿನಿಮಾ ಎದುರು ತೆರೆಕಂಡಿತ್ತು. ಈ ಎರಡೂ ಸಿನಿಮಾಗಳು ಹೆಚ್ಚು ಸದ್ದು ಮಾಡಿರಲಿಲ್ಲ. ಆ ಪೈಕಿ ಇದೀಗ ದಿಢೀರ್‌ ಒಟಿಟಿಗೆ ಎಂಟ್ರಿ ಕೊಟ್ಟಿದೆ ಮೈದಾನ್‌ ಸಿನಿಮಾ.

ಏಪ್ರಿಲ್ 11 ರಂದು ಅಜಯ್‌ ದೇವಗನ್‌ ನಾಯಕನಾಗಿ ನಟಿಸಿದ ನೈಜ ಘಟನೆ ಆಧರಿತ ಮೈದಾನ್ ಸಿನಿಮಾ‌ ಬಿಡುಗಡೆ ಆಗಿತ್ತು. ಇದೀಗ ಇದೇ ಚಿತ್ರ 40 ದಿನಗಳ ಬಳಿಕ ಒಟಿಟಿಗೆ ಎಂಟ್ರಿಕೊಟ್ಟಿದೆ. 
icon

(1 / 6)

ಭಾರತೀಯ ಫುಟ್ಬಾಲ್ ಕೋಚ್ ಸೈಯದ್ ಅಬ್ದುಲ್ ರಹೀಮ್ ಅವರ ಜೀವನ ಆಧರಿತ ಮೈದಾನ್‌ ಸಿನಿಮಾವನ್ನು 235 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿತ್ತು. ಬಿಡುಗಡೆ ಬಳಿಕ ಕೇವಲ 67 ಕೋಟಿ ಗಳಿಕೆ ಕಂಡು ಬಾಕ್ಸ್‌ ಆಫೀಸ್‌ನಲ್ಲಿ ಹೀನಾಯ ಸೋಲು ಕಂಡಿತ್ತು ಮೈದಾನ್. 
icon

(2 / 6)

ಇದೀಗ ಇದೇ ಸಿನಿಮಾ ಒಟಿಟಿಗೆ ಎಂಟ್ರಿ ಕೊಟ್ಟಿದೆ. ಭಾರತೀಯ ಫುಟ್‌ಬಾಲ್‌ನ ಸುವರ್ಣ ಯುಗವನ್ನು ತೋರಿಸುವ ಕಥೆ ಮೈದಾನ್‌ ಚಿತ್ರದ್ದು. 
icon

(3 / 6)

ಈ ಸಿನಿಮಾ ಮೇ 22ರಿಂದ ಅಮೆಜಾನ್‌ ಪ್ರೈಂ ಒಟಿಟಿಯಲ್ಲಿ ಬಿಡುಗಡೆ ಆಗಿದೆ. ಹಾಗಂತ ಉಚಿತವಾಗಿ ಈ ಸಿನಿಮಾ ವೀಕ್ಷಣೆ ಸಾಧ್ಯವಿಲ್ಲ. ಸದ್ಯ ರೆಂಟ್‌ ಆಧಾರದ ಮೇಲೆ ಮೈದಾನ್‌ ಸಿನಿಮಾವನ್ನು ವೀಕ್ಷಣೆ ಮಾಡಬಹುದಾಗಿದೆ. 
icon

(4 / 6)

ಪ್ರೈಮ್ ವಿಡಿಯೋದಲ್ಲಿ ಚಂದಾದಾರರು 349 ರೂಪಾಯಿ ಪಾವತಿಸಿ ಮನೆಯಲ್ಲಿ ಕುಳಿತು ಮೈದಾನ್ ಚಿ ಚಿತ್ರವನ್ನು ಆನಂದಿಸಬಹುದು. 
icon

(5 / 6)

ಚಿತ್ರವನ್ನು ಅಮಿತ್ ರವೀಂದ್ರನಾಥ್ ಶರ್ಮಾ ನಿರ್ದೇಶಿಸಿದ್ದಾರೆ. ಆಕಾಶ್ ಚಾವ್ಲಾ, ಅರುಣವ್ ಜಾಯ್ ಸೇನ್‌ಗುಪ್ತಾ, ಬೋನಿ ಕಪೂರ್ ಮತ್ತು ಜೀ ಸ್ಟುಡಿಯೋಸ್ ಜಂಟಿಯಾಗಿ ನಿರ್ಮಿಸಿದೆ. ಚಿತ್ರದಲ್ಲಿ ಅಜಯ್ ದೇವಗನ್ ಜೊತೆಗೆ ನಟಿ ಪ್ರಿಯಾಮಣಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 
icon

(6 / 6)

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು