Sky Force OTT: ಅಕ್ಷಯ್ ಕುಮಾರ್ ನಟನೆಯ ಸ್ಕೈಫೋರ್ಸ್‌ ಸಿನಿಮಾವನ್ನು'ಉಚಿತ'ವಾಗಿ ನೋಡಿ; ಭಾರತದ ಮೊದಲ ಏರ್‌ಸ್ಟೈಕ್‌ ಕಥೆ ಕಣ್ತುಂಬಿಕೊಳ್ಳಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sky Force Ott: ಅಕ್ಷಯ್ ಕುಮಾರ್ ನಟನೆಯ ಸ್ಕೈಫೋರ್ಸ್‌ ಸಿನಿಮಾವನ್ನು'ಉಚಿತ'ವಾಗಿ ನೋಡಿ; ಭಾರತದ ಮೊದಲ ಏರ್‌ಸ್ಟೈಕ್‌ ಕಥೆ ಕಣ್ತುಂಬಿಕೊಳ್ಳಿ

Sky Force OTT: ಅಕ್ಷಯ್ ಕುಮಾರ್ ನಟನೆಯ ಸ್ಕೈಫೋರ್ಸ್‌ ಸಿನಿಮಾವನ್ನು'ಉಚಿತ'ವಾಗಿ ನೋಡಿ; ಭಾರತದ ಮೊದಲ ಏರ್‌ಸ್ಟೈಕ್‌ ಕಥೆ ಕಣ್ತುಂಬಿಕೊಳ್ಳಿ

  • Sky Force OTT: ಅಕ್ಷಯ್ ಕುಮಾರ್ ಮತ್ತು ವೀರ್ ಪಹರಿಯಾ ನಟನೆಯ ಸ್ಕೈಫೋರ್ಸ್‌ ಸಿನಿಮಾ ಈಗ ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಚಂದಾದಾರರಿಗೆ ಉಚಿತ ವೀಕ್ಷಣೆಗೆ ಲಭ್ಯವಿದೆ. ಇಲ್ಲಿಯವರೆಗೆ ಈ ಸಿನಿಮಾವನ್ನು ಬಾಡಿಗೆ ಹಣ ನೀಡಿ ನೋಡಬಹುದಿತ್ತು. ಈ ಸಿನಿಮಾವನ್ನು ರೆಂಟ್‌ ಇಲ್ಲದೆ ಇಂದಿನಿಂದ ನೋಡಬಹುದು.

Sky Force OTT:  ಅಕ್ಷಯ್ ಕುಮಾರ್ ಮತ್ತು ವೀರ್ ಪಹರಿಯಾ ನಟನೆಯ ಸ್ಕೈಫೋರ್ಸ್‌ ಸಿನಿಮಾ ಈಗ ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಚಂದಾದಾರರಿಗೆ ಉಚಿತ ವೀಕ್ಷಣೆಗೆ ಲಭ್ಯವಿದೆ. ಇಲ್ಲಿಯವರೆಗೆ ಈ ಸಿನಿಮಾವನ್ನು ಬಾಡಿಗೆ ಹಣ ನೀಡಿ ನೋಡಬಹುದಿತ್ತು. ಈ ಸಿನಿಮಾವನ್ನು ರೆಂಟ್‌ ಇಲ್ಲದೆ ಇಂದಿನಿಂದ ನೋಡಬಹುದು. ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ಈ ಸಿನಿಮಾ ಕೇವಲ ಹಿಂದಿ ಭಾಷೆಯಲ್ಲಿ ಲಭ್ಯವಿದೆ. ಇಂಗ್ಲಿಷ‌ ಸಬ್‌ಟೈಟಲ್‌ನಲ್ಲಿ ನೋಡಬಹುದು. ಜನವರಿ 24, 2025 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ ಬಾಲಿವುಡ್‌ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಮತ್ತು ವೀರ್ ಪಹರಿಯಾ ನಟಿಸಿದ ಸಿನಿಮಾ ಇದಾಗಿದೆ.
icon

(1 / 8)

ಭಾರತದ ಐತಿಹಾಸಿಕ ಮೊದಲ ವಾಯುದಾಳಿಯ ಕುರಿತು ಮಾಡಿದ ಸಿನಿಮಾ ಇದಾಗಿದ್ದು, ಅಕ್ಷಯ್ ಕುಮಾರ್ ಮತ್ತು ವೀರ್ ಪಹರಿಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಈ ಚಿತ್ರವು 1965 ರ ಇಂಡೋ-ಪಾಕಿಸ್ತಾನಿ ಯುದ್ಧದ ಸಮಯದಲ್ಲಿ ಪಾಕಿಸ್ತಾನದ ಸರ್ಗೋಧಾ ವಾಯುನೆಲೆಯ ಮೇಲೆ ಮಾಡಿದ ದಾಳಿಯನ್ನು ಆಧರಿಸಿದೆ.
icon

(2 / 8)

ಜನವರಿ 24, 2025ರಂದು ಬಿಡುಗಡೆಯಾದ ಈ ಸಿನಿಮಾವನ್ನು ನೀವು ಅಮೆಜಾನ್‌ ಪ್ರೈಂ ವಿಡಿಯೋದಲ್ಲಿ ವೀಕ್ಷಿಸಬಹುದು. ಈ ಚಿತ್ರವು ಪ್ರಸ್ತುತ ಹಿಂದಿಯಲ್ಲಿ ಮಾತ್ರ ಲಭ್ಯವಿದೆ.
icon

(3 / 8)

ಭಾರತೀಯ ವಾಯುಪಡೆಯು ಪಾಕಿಸ್ತಾನದ ಮೇಲೆ ನಡೆಸಿದ ನೈಜ ಘಟನೆ ಆಧರಿತ, ಮೊದಲ ವೈಮಾನಿಕ ದಾಳಿಯ ಕಥೆಯನ್ನು ಈ ಸಿನಿಮಾ ಹೊಂದಿದೆ. ಈ ಕಾರ್ಯಾಚರಣೆಯಲ್ಲಿ ವೀರ್ ಪಹಾಡಿಯಾ ನಾಪತ್ತೆಯಾಗುತ್ತಾನೆ. ನಾಪತ್ತೆಯಾದ ಸೈನಿಕನನ್ನು ಹುಡುಕುವುದೇ ಈ ಸಿನಿಮಾದ ಪ್ರಮುಖಾಂಶ.
icon

(4 / 8)

1965ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧದ ನೈಜ ಘಟನೆಯನ್ನು ಆಧರಿಸಿ ಚಿತ್ರದ ಕಥೆಯನ್ನು ನಿರ್ಮಿಸಲಾಗಿದೆ. ಇದರಲ್ಲಿ ಪಾಕಿಸ್ತಾನದ ಸರ್ಗೋಧಾ ವಾಯುನೆಲೆಯ ಮೇಲೆ ಭಾರತೀಯ ವಾಯುಸೇನೆ ವೈಮಾನಿಕ ದಾಳಿ ನಡೆಸಿತು. ಇದು ಭಾರತೀಯ ವಾಯುಪಡೆಯ ಮೊದಲ ಮತ್ತು ಅತ್ಯಂತ ಮಾರಣಾಂತಿಕ ದಾಳಿ ಎಂದು ಪರಿಗಣಿಸಲಾಗಿದೆ.
icon

(5 / 8)

ಅಕ್ಷಯ್‌ ಕುಮಾರ್‌ ನಟಿಸಿದ ಈ ಸ್ಕೈ ಫೋರ್ಸ್‌ ಸಿನಿಮಾದಲ್ಲಿ ದೇಶಪ್ರೇಮದ ಜತೆಗೆ ಸಾಹಸವೂ ಇದೆ. ಈ ಸಿನಿಮಾದ ಮೂಲಕ ವೀರ್ ಪಹಾಡಿಯಾ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದಾರೆ.
icon

(6 / 8)

ಮ್ಯಾಡಾಕ್ ಫಿಲ್ಮ್ಸ್ ಮತ್ತು ಜಿಯೋ ಸ್ಟುಡಿಯೋಸ್ ಬ್ಯಾನರ್‌ ಅಡಿಯಲ್ಲಿ ದಿನೇಶ್ ವಿಜನ್, ಅಮರ್ ಕೌಶಿಕ್ ಮತ್ತು ಜ್ಯೋತಿ ದೇಶಪಾಂಡೆ ಈ ಸಿನಿಮಾ ನಿರ್ಮಿಸಿದ್ದಾರೆ.
icon

(7 / 8)

ಸಂದೀಪ್ ಕೇವಾಲಾನಿ ಮತ್ತು ಅಭಿಷೇಕ್ ಅನಿಲ್ ಕಪೂರ್ ಜಂಟಿಯಾಗಿ ಸಿನಿಮಾ ನಿರ್ದೇಶಿಸಿದ್ದಾರೆ. ಅಕ್ಷಯ್ ಕುಮಾರ್ ಮತ್ತು ವೀರ್ ಪಹಾಡಿಯಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸಾರಾ ಅಲಿ ಖಾನ್, ನಿಮ್ರತ್ ಕೌರ್ ಮತ್ತು ಶರದ್ ಕೇಳ್ಕರ್ ಕೂಡ ಕಾಣಿಸಿಕೊಂಡಿದ್ದಾರೆ. ಭಾರತದ ಅಮೋಘ ಸಾಹಸ ಕಥನವನ್ನು ಈಗ ಅಮೆಜಾನ್‌ ಪ್ರೈಮ್‌ ವಿಡಿಯೋ ಚಂದಾದಾರರು ಯಾವುದೇ ಬಾಡಿಗೆ ಹಣ ನೀಡದೆ ಉಚಿತವಾಗಿ ನೋಡಬಹುದು.
icon

(8 / 8)

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in

ಇತರ ಗ್ಯಾಲರಿಗಳು