ಕನ್ನಡ ಸುದ್ದಿ  /  Photo Gallery  /  Bollywood News Akshay Kumar Tiger Shroff Starrer Bade Miyan Chote Miyan Trailer Released Event Photos Mnk

‘ಬಡೇ ಮಿಯಾ ಚೋಟೆ ಮಿಯಾ’ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಅಕ್ಷಯ್‌ ಕುಮಾರ್‌, ಟೈಗರ್‌ ಶ್ರಾಫ್‌ ಕಂಡಿದ್ದು ಹೀಗೆ PHOTOS

  • Bade Miyan Chote Miyan trailer: ಬಡೇ ಮಿಯಾ ಚೋಟೆ ಮಿಯಾ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಮಂಗಳವಾರದಂದು (ಮಾರ್ಚ್ 26) ಮುಂಬೈನಲ್ಲಿ ಅದ್ಧೂರಿಯಾಗಿಯೇ ನಡೆದಿದೆ. ಈ ಕಾರ್ಯಕ್ರಮದಲ್ಲಿ ಚಿತ್ರದ ನಾಯಕರಾದ ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಸೇರಿದಂತೆ ತಂಡದ ಸದಸ್ಯರು ಭಾಗವಹಿಸಿದ್ದರು. ಹೀಗಿವೆ ಫೋಟೋಸ್‌.  

ಬಾಲಿವುಡ್‌ನ 'ಬಡೇ ಮಿಯಾ ಛೋಟೆ ಮಿಯಾ' ಚಿತ್ರದ ಟ್ರೇಲರ್‌ ಬಿಡುಗಡೆ ಸಮಾರಂಭ ಮಂಗಳವಾರ ಮುಂಬೈನಲ್ಲಿ ಅದ್ದೂರಿಯಾಗಿ ನಡೆಯಿತು. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. 
icon

(1 / 8)

ಬಾಲಿವುಡ್‌ನ 'ಬಡೇ ಮಿಯಾ ಛೋಟೆ ಮಿಯಾ' ಚಿತ್ರದ ಟ್ರೇಲರ್‌ ಬಿಡುಗಡೆ ಸಮಾರಂಭ ಮಂಗಳವಾರ ಮುಂಬೈನಲ್ಲಿ ಅದ್ದೂರಿಯಾಗಿ ನಡೆಯಿತು. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. (AFP)

ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಟೈಗರ್ ಶ್ರಾಫ್‌ಗೆ ಜೋಡಿಯಾಗಿ ಆಲಯಾ ನಟಿಸಿದ್ದಾರೆ. ಅಂದಹಾಗೆ ಬಡೇ ಮಿಯಾ ಛೋಟೆ ಮಿಯಾ ಸಿನಿಮಾ ಏಪ್ರಿಲ್ 10 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. 
icon

(2 / 8)

ಅಕ್ಷಯ್ ಕುಮಾರ್ ಮತ್ತು ಮಾನುಷಿ ಚಿಲ್ಲರ್ ಈ ಚಿತ್ರದ ಮೂಲಕ ಎರಡನೇ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇಬ್ಬರೂ ಈ ಹಿಂದೆ ಸಾಮ್ರಾಟ್ ಪೃಥ್ವಿರಾಜ್ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. 
icon

(3 / 8)

ಅಕ್ಷಯ್ ಕುಮಾರ್, ಮಾನುಷಿ ಚಿಲ್ಲರ್, ಅಲಯಾ ಮತ್ತು ಟೈಗರ್ ಶ್ರಾಫ್ ಚಿತ್ರದ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಒಟ್ಟಿಗೆ ಕ್ಯಾಮೆರಾಗಳಿಗೆ ಪೋಸ್ ನೀಡಿದರು. ಈ ಚಿತ್ರದಲ್ಲಿ ಸೋನಾಕ್ಷಿ ಸಿನ್ಹಾ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 
icon

(4 / 8)

ಇಬ್ಬರು ಭಾರತೀಯ ಸೇನಾಧಿಕಾರಿಗಳ ಸುತ್ತ ಈ ಸಿನಿಮಾದ ಕಥೆ ಸುತ್ತುತ್ತದೆ. ಅಕ್ಷಯ್ ಮತ್ತು ಟೈಗರ್ ಈ ಚಿತ್ರದಲ್ಲಿ ಆರ್ಮಿ ಆಫೀಸರ್ ಪಾತ್ರ ನಿರ್ವಹಿಸಿದ್ದಾರೆ. ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿದ್ದಾರೆ. 
icon

(5 / 8)

ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಅಕ್ಷಯ್ ಮತ್ತು ಪೃಥ್ವಿರಾಜ್ ಸುಕುಮಾರನ್ ಕೈಕುಲುಕಿದರು. ಇನ್ನೇನು ಎಲ್ಲೆಡೆ ಪ್ರಚಾರಕ್ಕೂ ಹೊರಡಲು ಈ ಸಿನಿಮಾತಂಡ ಸಿದ್ಧವಾಗಿದೆ.
icon

(6 / 8)

ಬಡೇ ಮಿಯಾ ಛೋಟೆ ಮಿಯಾ ಚಿತ್ರವನ್ನು ಅಲಿ ಅಬ್ಬಾಸ್ ಜಾಫರ್ ನಿರ್ದೇಶಿಸಿದ್ದಾರೆ. ಮುಂಬೈ, ಲಂಡನ್, ಸ್ಕಾಟ್ಲೆಂಡ್ ಮತ್ತು ಜೋರ್ಡಾನ್ ಸ್ಥಳಗಳಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆದಿದೆ.
icon

(7 / 8)

ವಸು ಭಗ್ನಾನಿ, ದೀಪ್ಶಿಕಾ ದೇಶ್‌ಮುಖ್, ಜಾಖಿ ಭಗ್ನಾನಿ, ಹಿಮಾಂಶು ಕಿಶನ್ ಮೆಹ್ರಾ ಮತ್ತು ಅಲಿ ಅಬ್ಬಾಸ್ ಜಾಫರ್ ಜಂಟಿಯಾಗಿ ನಿರ್ಮಿಸಿದ್ದಾರೆ. ಏಪ್ರಿಲ್ 10 ರಂದು ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. 
icon

(8 / 8)

IPL_Entry_Point

ಇತರ ಗ್ಯಾಲರಿಗಳು