Alia Bhatt: ವೆಲ್ವೆಟ್ ಸೀರೆ -ಚಿನ್ನದ ಬ್ಯಾಕ್ಲೆಸ್ ಬ್ಲೌಸ್‌ನಲ್ಲಿ ಮದುಮಗಳಂತೆ ಮುದ್ದುಮುದ್ದಾಗಿ ಕಂಡ ಆಲಿಯಾ ಭಟ್
- ಬಾಲಿವುಡ್ ನಟಿ ಆಲಿಯಾ ಭಟ್ ಇತ್ತೀಚೆಗೆ ಕಾರ್ಯಕ್ರಮವೊಂದಕ್ಕೆ ಮನೀಶ್ ಮಲ್ಹೋತ್ರಾ ವಿನ್ಯಾಸದ ವೆಲ್ವೆಟ್ ಸೀರೆ ಮತ್ತು ಚಿನ್ನದ ಬ್ಯಾಕ್ಲೆಸ್ ಬ್ಲೌಸ್ ಧರಿಸಿ ಭಾಗವಹಿಸಿದ್ದರು. ಇವರ ಉಡುಗೆ ಮದುಮಗಳಿಗೆ ಸೂಕ್ತವಾಗಿರುವ ಉಡುಗೆಯಂತೆ ಕಾಣಿಸಿದೆ.
- ಬಾಲಿವುಡ್ ನಟಿ ಆಲಿಯಾ ಭಟ್ ಇತ್ತೀಚೆಗೆ ಕಾರ್ಯಕ್ರಮವೊಂದಕ್ಕೆ ಮನೀಶ್ ಮಲ್ಹೋತ್ರಾ ವಿನ್ಯಾಸದ ವೆಲ್ವೆಟ್ ಸೀರೆ ಮತ್ತು ಚಿನ್ನದ ಬ್ಯಾಕ್ಲೆಸ್ ಬ್ಲೌಸ್ ಧರಿಸಿ ಭಾಗವಹಿಸಿದ್ದರು. ಇವರ ಉಡುಗೆ ಮದುಮಗಳಿಗೆ ಸೂಕ್ತವಾಗಿರುವ ಉಡುಗೆಯಂತೆ ಕಾಣಿಸಿದೆ.
(1 / 7)
ನಿಮ್ಮ ಗೆಳತಿಯ ಮದುವೆಗೆ ಪರಿಪೂರ್ಣ ಉಡುಗೆ, ಮೇಕಪ್ ಲುಕ್ ಕುರಿತು ಆಲೋಚಿಸುತ್ತಿದ್ದೀರಾ? ಹಾಗಾದರೆ, ಮದುಮಗಳ ಅಂದ ಹೆಚ್ಚಿಸಲು ಸೆಲೆಬ್ರಿಟಿಗಳ ಉಡುಗೆಗಳಿಂದ ಸ್ಪೂರ್ತಿ ಪಡೆಯುವುದು ಉತ್ತಮ. ಬಹುತೇಕರ ಅಚ್ಚುಮೆಚ್ಚಿನ ಸೆಲೆಬ್ರಿಟಿ ಆಲಿಯಾ ಭಟ್ ಧರಿಸಿದ ಈ ವೆಲ್ವೆಟ್ ಸೀರೆ -ಚಿನ್ನದ ಬ್ಯಾಕ್ಲೆಸ್ ಬ್ಲೌಸ್ ಉಡುಪು ನಿಮಗೆ ಸ್ಪೂರ್ತಿಯಾಗಬಹುದು.(Instagram)
(2 / 7)
ಆಲಿಯಾ ಭಟ್ ಇತ್ತೀಚೆಗೆ ಜೀ ಸಿನಿ ಅವಾರ್ಡ್ಸ್ 2024ರಲ್ಲಿ ಭಾಗವಹಿಸಿದ್ದರು, ಆಲಿವ್ ಹಸಿರು ವೆಲ್ವೆಟ್ ಸೀರೆ ಮತ್ತು ಕಸೂತಿ ಮಾಡಿದ ಚಿನ್ನದ ರವಿಕೆ ಧರಿಸಿದ್ದರು. "ಗ್ಲಾಮಾಡ್ರಾಮಾ" ಎಂಬ ಶೀರ್ಷಿಕೆಯೊಂದಿಗೆ ನಟಿ ಈ ಉಡುಗೆ ಧರಿಸಿದ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.(Instagram)
(3 / 7)
ಆಲಿಯಾ ಧರಿಸಿದ ಆಲಿವ್ ಗ್ರೀನ್ ವೆಲ್ವೆಟ್ ಅನ್ನು ಸೆಲೆಬ್ರಿಟಿ ಡಿಸೈನರ್ ಮನೀಶ್ ಮಲ್ಹೋತ್ರಾ ವಿನ್ಯಾಸ ಮಾಡಿದ್ದಾರೆ. ಇದರಲ್ಲಿ ಆಕ್ಷಕ ಚಿನ್ನದ ಪಟ್ಟಿ, ಸಕ್ವಿನ್ ಅಲಂಕಾರಗಳ ಕಸೂತಿಯ ಅಂಚು ಇದೆ. (Instagram)
(4 / 7)
ಚಿನ್ನದ ಬಣ್ಣದ ಉಡುಗೆ ಪ್ರಶಸ್ತಿ ಸಮಾರಂಭದಲ್ಲಿ ಎಲ್ಲರ ಗಮನ ಸೆಳೆದಿದೆ. ಈ ಸೀರೆ ಬೆನ್ನಿನ ಹಿಂಬದಿಯನ್ನು ಕವರ್ ಮಾಡಿಲ್ಲ. (Instagram)
(5 / 7)
ಈ ಉಡುಗೆಗೆ ಸೂಕ್ತವಾಗುವಂತೆ ರಷ್ಯಾದ ಪಚ್ಚೆ ಕಿವಿಯೋಲೆಗಳನ್ನು ಧರಿಸಿದ್ದರು. ಇದಕ್ಕೆ ತಕ್ಕಂತೆ ಮೇಕಪ್ ಮಾಡಿಕೊಂಡಿದ್ದರು. (Instagram)
(6 / 7)
ಈ ಮೇಲಿನ ಚಿನ್ನದ ಬಣ್ಣದ ಉಡುಗೆ ಮದುಮಗಳಿಗೆ ಸೂಕ್ತವಾಗಬಹುದು. ಇದಕ್ಕಿಂತಲೂ ಬೇರೆ ರೀತಿಯ ಉಡುಗೆ ಹುಡುಕುತ್ತಿದ್ದರೆ ಇತ್ತೀಚೆಗೆ ಲಂಡನ್‌ನಲ್ಲಿ ಫೋಚರ್ ಸ್ಕ್ರೀನಿಂಗ್‌ಗೆ ಧರಿಸಿದ್ದ ಈ ಉಡುಗೆ ನೀಡಬಹುದು. ಇದು ಕಪ್ಪು ವೆಲ್ವೆಟ್ ಸೀರೆ. (Instagram)
ಇತರ ಗ್ಯಾಲರಿಗಳು