ಅಂಬಾನಿ ಮದುವೆ ಪಾರ್ಟಿಯಲ್ಲಿ ರಾಮ್‌ಚರಣ್ ಜತೆ ಸೇರಿ ನಾಟು ನಾಟು ಹಾಡಿಗೆ ಹೆಜ್ಜೆ ಹಾಕಿದ ಬಾಲಿವುಡ್ ಖಾನ್‌ತ್ರಯರು PHOTOS
- ಗುಜರಾತ್‌ನ ಜಾಮ್‌ನಗರದಲ್ಲಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜೋಡಿಯ ಮೂರು ದಿನಗಳ ವಿವಾಹ ಪೂರ್ವ ಕಾರ್ಯಕ್ರಮ ಜೋರಾಗಿಯೇ ನಡೆಯುತ್ತಿದೆ. ಬಾಲಿವುಡ್‌ನ ಖಾನ್‌ತ್ರಯರು ರಾಮ್‌ಚರಣ್ ಜತೆ ಸೇರಿ ನಾಟು ನಾಟು ಹಾಡಿಗೆ ಸಖತ್ತಾಗಿಯೇ ಹೆಜ್ಜೆ ಹಾಕಿದ್ದಾರೆ.
- ಗುಜರಾತ್‌ನ ಜಾಮ್‌ನಗರದಲ್ಲಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜೋಡಿಯ ಮೂರು ದಿನಗಳ ವಿವಾಹ ಪೂರ್ವ ಕಾರ್ಯಕ್ರಮ ಜೋರಾಗಿಯೇ ನಡೆಯುತ್ತಿದೆ. ಬಾಲಿವುಡ್‌ನ ಖಾನ್‌ತ್ರಯರು ರಾಮ್‌ಚರಣ್ ಜತೆ ಸೇರಿ ನಾಟು ನಾಟು ಹಾಡಿಗೆ ಸಖತ್ತಾಗಿಯೇ ಹೆಜ್ಜೆ ಹಾಕಿದ್ದಾರೆ.
(1 / 10)
ಸಲ್ಮಾನ್ ಖಾನ್, ಶಾರುಖ್ ಖಾನ್ ಮತ್ತು ಅಮೀರ್ ಖಾನ್ ಒಟ್ಟಿಗೆ ರಾಮ್ ಚರಣ್ ಜತೆಗೆ ಆರ್‌ಆರ್‌ಆರ್ ಚಿತ್ರದ ನಾಟು ನಾಟು ಹಾಡಿನ ಹುಕ್ ಸ್ಟೆಪ್‌ಗೆ ಭರ್ಜರಿ ಡಾನ್ಸ್ ಮಾಡಿದರು.
(2 / 10)
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ದಂಪತಿಯೂ ಅಂಬಾನಿ ಫ್ಯಾಮಿಲಿಯ ಮದುವೆ ಕಾರ್ಯಕ್ರಮದಲ್ಲಿ ಹಾಡುಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
(5 / 10)
ಕರೀನಾ ಕಪೂರ್ ಚಿನ್ನದ ಬಣ್ಣದ ಹೊಳೆಯುವ ಸೀರೆಯಲ್ಲಿ ಆಕರ್ಷಕವಾಗಿ ಕಂಡರೆ ಪತಿ ಸೈಫ್ ಅಲಿ ಖಾನ್ ಮತ್ತು ತೈಮೂರ್ ಅಲಿ ಖಾನ್ ಕಪ್ಪು ಮತ್ತು ಬಿಳಿ ಶೆರ್ವಾನಿ ಲುಕ್‌ನಲ್ಲಿ ಮಿಂಚಿದರು.
(6 / 10)
ಖುಷಿ ಕಪೂರ್, ಜಾನ್ವಿ ಕಪೂರ್ ಮತ್ತು ಅನನ್ಯಾ ಪಾಂಡೆ, ಮನೀಶ್ ಮಲ್ಹೋತ್ರಾ ಒಟ್ಟಿಗೆ ವೇದಿಕೆ ಮೇಲೆ ಡಾನ್ಸ್ ಮಾಡಿ ಎಲ್ಲರನ್ನು ರಂಜಿಸಿದರು.
(7 / 10)
ಸುಹಾನಾ ಖಾನ್ ನೀಲಿ ಸೀರೆಯಲ್ಲಿ ಕಂಗೊಳಿಸಿದರೆ, ಅಮಿತಾಬ್ ಬಚ್ಚನ್ ಮೊಮ್ಮಗಳು ನವ್ಯಾ ನಂದಾ ಕೂಡ ಕ್ಯಾಮೆರಾಗೆ ಪೋಸ್ ನೀಡಿದರು.
(8 / 10)
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರೊಂದಿಗೆ ಬಾಲಿವುಡ್ ಹಿರಿಯ ನಟ ಜಿತೇಂದ್ರ ಮತ್ತು ಸಲ್ಮಾನ್ ಖಾನ್.
(9 / 10)
ಸಚಿನ್ ತೆಂಡೂಲ್ಕರ್ ಅವರ ಮಗಳು ಸಾರಾ ತೆಂಡೂಲ್ಕರ್ ಕೂಡ ಅಂಬಾನಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೆಂಪು ಚೋಲಿ ಮತ್ತು ಅದಕ್ಕೆ ಹೊಂದಿಕೆಯಾಗುವ ಲೆಹೆಂಗಾ ಧರಿಸಿ ಕಣ್ಮನ ಸೆಳೆದರು.
ಇತರ ಗ್ಯಾಲರಿಗಳು