ಜಿಮ್‌ಗೆ ಹೋಗೋಕ್ಕೂ ಬಿಡ್ತಾ ಇಲ್ವೇ? ಪಾಪರಾಜಿಗಳ ಮನತಣಿಸಿ ವರ್ಕೌಟ್‌ಗೆ ತೆರಳಿದ ನಟಿ ಅನನ್ಯಾ ಪಾಂಡೆ - Photos
- ಬಾಲಿವುಡ್ ನಟಿ ಅನನ್ಯಾ ಪಾಂಡೆ ಜಿಮ್‌ಗೆ ತೆರಳುವ ಸಂದರ್ಭದಲ್ಲಿ ಮಾಧ್ಯಮಗಳಿಗಾಗಿ ಸ್ವತಂತ್ರವಾಗಿ ಫೋಟೋ ತೆಗೆಯುವ ಪಾಪರಾಜಿಗಳ ಕಣ್ಣಿಗೆ ಬಿದ್ದಿದ್ದಾರೆ. ಮೇಡಂ ಒಂದು ಫೋಟೋ ಎಂಬ ವಿನಂತಿಗೆ ಅನನ್ಯಾ ಪಾಂಡೆ ಪೋಸ್ ನೀಡಿದ್ದಾರೆ. ಈ ಮೂಲಕ ಪಾಪರಾಜಿಗಳ ಮನತಣಿಸಿದ್ದಾರೆ. ಪಾಪರಾಜಿಗಳು ತೆಗೆದ ಫೋಟೋ ನೋಡಿ ಅನನ್ಯ ಅಭಿಮಾನಿಗಳ ಮನಸ್ಸನ್ನು ಖುಷಿಯಾಗಿಸಿದೆ.

(1 / 7)
ಪಾಪರಾಜಿಗಳ ಕಣ್ಣಿಗೆ ಬಿದ್ದ ಅನನ್ಯಾ ಪಾಂಡೆ ಫೋಟೋಗೆ ಪೋಸ್ ನೀಡಿದ್ದಾರೆ. ಕಪ್ಪು ಬಣ್ಣದ ಶಾರ್ಟ್ಸ್‌ನಲ್ಲಿ ತುಂಬಾ ಮುದ್ದಾಗಿ ಕಾಣಿಸಿದ್ದಾರೆ. ಈ ಫೋಟೋಗಳನ್ನು ನೋಡುತ್ತ ಅನನ್ಯ ಪಾಂಡೆ ಅವರ ಫಿಟ್ನೆಸ್ ಗುಟ್ಟನ್ನೂ ತಿಳಿದುಕೊಳ್ಳೋಣ.
(2 / 7)
ಮೇಕಪ್ ಇಲ್ಲದೆ ಇದ್ದರೂ ಮುದ್ದಾಗಿ ಕಾಣಿಸುತ್ತಿದ್ದರು. ತನ್ನ ತಲೆಕೂದಲನ್ನು ಹಿಂಭಾಗದಲ್ಲಿ ಬನ್ ರೀತಿ ಕಟ್ಟಿಕೊಂಡಿದ್ದರು.
(3 / 7)
ಅನನ್ಯಾ ಪಾಂಡೆ ಫಿಟ್ನೆಸ್ ಕುರಿತು ವಿಶೇಷ ಕಾಳಜಿ ಹೊಂದಿದ್ದಾರೆ. ನಿಯಮಿತವಾಗಿ ಜಿಮ್‌ಗೆ ಹೋಗುತ್ತ ತನ್ನ ಮೈಮಾಟದ ಸೌಂದರ್ಯ ಕಾಪಾಡಿಕೊಳ್ಳುತ್ತಾರೆ.
(4 / 7)
ಅನನ್ಯ ಪಾಂಡೆ ಜಿಮ್ ಮಾತ್ರವಲ್ಲದೆ ಯೋಗಕ್ಕೂ ಆದ್ಯತೆ ನೀಡುತ್ತಾರೆ. ಸಾಕಷ್ಟು ವೇಟ್ ಮತ್ತು ಕಾರ್ಡಿಯೋ ವ್ಯಾಯಾಮಗಳನ್ನು ಮಾಡುತ್ತಾರೆ. ಬೆಳಗ್ಗೆ ಎದ್ದ ತಕ್ಷಣ ಯೋಗ ಮಾಡುತ್ತಾರೆ ಅಂತೆ.
(5 / 7)
ಇದೇ ಸಮಯದಲ್ಲಿ ಆರೋಗ್ಯಕರ ಆಹಾರದ ಕಡೆಗೂ ಗಮನ ನೀಡುತ್ತಾರೆ. ಬೆಳಗ್ಗೆ ಎದ್ದು ಗ್ರೀನ್ ಜ್ಯೂಸ್ ಕುಡಿತಾರೆ. ಬಳಿಕ ಬ್ರೇಕ್‌ಫಾಸ್ಟ್‌ಗೆ ಸಾಮಾನ್ಯವಾಗಿ ಆಮ್ಲೆಟ್ ಮತ್ತು ಟೋಸ್ಟ್ (ಬಟರ್ ಜತೆ) ತಿನ್ನಲು ಆದ್ಯತೆ ನೀಡುತ್ತಾರೆ. ಬ್ಲ್ಯಾಕ್ ಕಾಫಿ ಕುಡಿತಾರೆ.
(6 / 7)
ಮಧ್ಯಾಹ್ನ ಊಟಕ್ಕೆ ಚಿಕನ್ ಸ್ಯಾಂಡ್‌ವಿಚ್, ತಾಜಾ ತರಕಾರಿ ಸೇವಿಸುತ್ತಾರೆ. ಸಂಜೆ ಕಪ್ಪು ಕಾಫಿ ಮತ್ತು ನಟ್ಸ್ ಇರುವ ಮಂಚ್‌ಗಳನ್ನು ತಿನ್ನುತ್ತಾರೆ. ರಾತ್ರಿಯೂಟಕ್ಕೆ ಗ್ರಿಲ್ ಚಿಕನ್ ಅಥವಾ ಫಿಶ್ ಹಾಗೂ ಕೊಂಚ ಸೂಪ್ ಸೇವಿಸ್ತಾರೆ.
ಇತರ ಗ್ಯಾಲರಿಗಳು