19ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ಈ ಸ್ಟಾರ್‌ ನಟಿಗೆ, ಸಾವಿನ ಸೂಚನೆ ಮೊದಲೇ ಸಿಕ್ಕಿತ್ತು! ದಿವ್ಯಾ ಭಾರತಿ ದುರಂತ ಅಂತ್ಯ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  19ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ಈ ಸ್ಟಾರ್‌ ನಟಿಗೆ, ಸಾವಿನ ಸೂಚನೆ ಮೊದಲೇ ಸಿಕ್ಕಿತ್ತು! ದಿವ್ಯಾ ಭಾರತಿ ದುರಂತ ಅಂತ್ಯ

19ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ಈ ಸ್ಟಾರ್‌ ನಟಿಗೆ, ಸಾವಿನ ಸೂಚನೆ ಮೊದಲೇ ಸಿಕ್ಕಿತ್ತು! ದಿವ್ಯಾ ಭಾರತಿ ದುರಂತ ಅಂತ್ಯ

ಬಾಲಿವುಡ್ ನಟಿ ದಿವ್ಯಾ ಭಾರತಿ, ಅತ್ಯಂತ ಕಡಿಮೆ ಅವಧಿಯಲ್ಲಿ ಖ್ಯಾತಿ ಗಳಿಸಿದ ನಟಿಯರಲ್ಲಿ ಒಬ್ಬರು. ಕೆಲವೇ ವರ್ಷಗಳಲ್ಲಿ ದಿವ್ಯಾ ಬಾಲಿವುಡ್‌ನ ಟಾಪ್‌ ನಟಿಯರಲ್ಲಿ ಒಬ್ಬರಾದರು. ಅವರು ನಟಿಸಿದ ಪ್ರತಿಯೊಂದು ಚಿತ್ರವೂ ಹಿಟ್ ಪಟ್ಟ ಪಡೆಯಿತು. ಆದರೆ, ನಟಿಯ ಹಣೆಬರಹದಲ್ಲಿ ಮಾತ್ರ ಬೇರೆಯದೇ ಬರೆಯಲಾಗಿತ್ತು. ಕೇವಲ 19ನೇ ವಯಸ್ಸಿಗೆ ಇಹಲೋಕ ತ್ಯಜಿಸಿದರು.

ಬಾಲಿವುಡ್ ನಟಿ ದಿವ್ಯಾ ಭಾರತಿ, ಅತ್ಯಂತ ಕಡಿಮೆ ಅವಧಿಯಲ್ಲಿ ಖ್ಯಾತಿ ಗಳಿಸಿದ ನಟಿಯರಲ್ಲಿ ಒಬ್ಬರು. ಕೆಲವೇ ವರ್ಷಗಳಲ್ಲಿ ದಿವ್ಯಾ ಬಾಲಿವುಡ್‌ನ ಟಾಪ್‌ ನಟಿಯರಲ್ಲಿ ಒಬ್ಬರಾದರು. ಅವರು ನಟಿಸಿದ ಪ್ರತಿಯೊಂದು ಚಿತ್ರವೂ ಹಿಟ್ ಪಟ್ಟ ಪಡೆಯಿತು. ತೆರೆಮೇಲೆ ಆ ನಟಿಯನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದರು. ಆದರೆ, ನಟಿಯ ಹಣೆಬರಹದಲ್ಲಿ ಮಾತ್ರ ಬೇರೆಯದೇ ಬರೆಯಲಾಗಿತ್ತು.  
icon

(1 / 10)

ದಿವ್ಯಾ ಭಾರತಿ ತಮ್ಮ 19 ನೇ ವಯಸ್ಸಿನಲ್ಲಿ ಅಂದರೆ 1993ರಲ್ಲಿ ಇಹಲೋಕ ತ್ಯಜಿಸಿದರು. ನಟಿಯ ಈ ಹಠಾತ್ ಸಾವಿನ ಸುದ್ದಿ ಇಡೀ ಬಾಲಿವುಡ್‌ಅನ್ನೇ ಬೆಚ್ಚಿಬೀಳಿಸಿತು. ಹಲವರು ಇದನ್ನು ಕೊಲೆ ಎಂದು ಕರೆದರೆ, ಇನ್ನು ಕೆಲವರಿಗೆ ಈ ಸಾವು ನಿಗೂಢವಾಗಿಯೇ ಉಳಿಯಿತು. 
icon

(2 / 10)

ಹೀಗಿರುವಾಗ 90 ರ ದಶಕದ ಖ್ಯಾತ ನಟಿ ಮತ್ತು ದಿವ್ಯಾ ಭಾರತಿ ಅವರ ಆಪ್ತ ಸ್ನೇಹಿತೆ ಆಯೇಷಾ ಜುಲ್ಕಾ ಸಂದರ್ಶನವೊಂದರಲ್ಲಿ ಈ ನಟಿಯ ಸಾವಿನ ಬಗ್ಗೆ ಆಘಾತಕಾರಿ ವಿಚಾರವೊಂದನ್ನು ಹೇಳಿದ್ದರು. ದಿವ್ಯಾಗೆ ತನ್ನ ಸಾವಿನ ಬಗ್ಗೆ ಮೊದಲೇ ತಿಳಿದಿತ್ತು ಎಂದು ಬಾಂಬ್‌ ಸಿಡಿಸಿದ್ದರು ಆಯೇಷಾ. 
icon

(3 / 10)

ದಿವ್ಯಾ ಸಾವಿನ ಸುದ್ದಿ ಕೇಳಿದಾಗ ನನಗೆ ನಂಬಲು ಸಾಧ್ಯವಾಗಲಿಲ್ಲ. ಒಂದು ಕ್ಷಣ ಶಾಕ್‌ ಆದೆ. ಈ ಸುದ್ದಿ ಸುಳ್ಳಾಗಲಿ ಎಂದು ಬೇಡಿಕೊಂಡೆ. ಆದರೆ, ಅದಾಗಲೇ ದಿವ್ಯಾ ಇಲ್ಲವಾಗಿದ್ದರು ಎಂದು ಆಯೇಷಾ ಜುಲ್ಕಾ ಈ ಹಿಂದೆ ಬಿಬಿಸಿಗೆ ನೀಡಿದ್ದ ಸಂದರ್ಶನದಲ್ಲಿ ತಿಳಿಸಿದ್ದರು. 
icon

(4 / 10)

ದಿವ್ಯಾ ಬಗ್ಗೆ ಮತ್ತೊಂದು ವಿಚಿತ್ರ ವಿಷಯವಿದೆ ಎಂದು ಆಯೇಷಾ ಜುಲ್ಕಾ ಹೇಳಿಕೊಂಡಿದ್ದಾರೆ. ಅವಳ ಸಾವಿನ ಬಗ್ಗೆ ಅವಳಿಗೇ ಅರಿವಿದ್ದಿರಬಹುದು. ಅದಕ್ಕಾಗಿಯೇ ಬೇಗನೆ ಕೆಲಸಗಳನ್ನು ಮುಗಿಸಬೇಕು, ಜೀವನವು ತುಂಬಾ ಚಿಕ್ಕದು ಎಂದು ಪದೇಪದೆ ಹೇಳುತ್ತಿದ್ದಳು ದಿವ್ಯಾ ಭಾರತಿ ಎಂದು ಆಯೇಷಾ ನೆನಪಿಸಿಕೊಂಡಿದ್ದಾರೆ. 
icon

(5 / 10)

'ದಿವ್ಯಾ ಯಾವತ್ತೂ ಸಾವಿನ ಬಗ್ಗೆ ಮಾತನಾಡಿದವರಲ್ಲ. ಆದರೆ ಅನೇಕ ಬಾರಿ ನಮ್ಮ ಒಳಗಿನಿಂದ ಸಾವಿನ ಮುನ್ಸೂಚನೆ ನಮಗೆ ಸಿಕ್ಕಿರುತ್ತದೆ. ಅದು ದಿವ್ಯಾಗೂ ಸಿಕ್ಕಿರಬಹುದು. ಆ ಕಾರಣಕ್ಕೆ ಅವಸರ ಅವಸರವಾಗಿ ಆಕೆ ಮಾಡುತ್ತಿದ್ದಳು. ಇನ್ನು ಹೆಚ್ಚು ದಿನ ನಾನು ನಿಮ್ಮ ಜೊತೆ ಇರೋದಿಲ್ಲ ಅನ್ನೋದು ಆಕೆಯ ಮಾತುಗಳಿಂದ ಎಷ್ಟೋ ಸಲ ಅನ್ನಿಸಿತ್ತು ಎಂದಿದ್ದಾರೆ. 
icon

(6 / 10)

ಬಹುಶಃ ಅದಕ್ಕಾಗಿಯೇ ದಿವ್ಯಾ ಭಾರತಿ ಚಿತ್ರರಂಗದಲ್ಲಿನ ಆ ಖ್ಯಾತಿಯ ಉತ್ತುಂಗವನ್ನೂ ಅಷ್ಟೇ ಬೇಗ ನೋಡಿದಳು. ಸ್ಟಾರ್‌ ನಟರ ಜತೆ ನಟಿಸಿ ಸೈ ಎನಿಸಿಕೊಂಡಳು. ಕೊನೆಗೆ ಆ ಯಶಸ್ಸನ್ನಷ್ಟೇ ಕೊಂಡೊಯ್ದಳು ಎಂದಿದ್ದಾರೆ ಆಯೇಷಾ.  
icon

(7 / 10)

1990ರಲ್ಲಿ ಬಣ್ಣದ ಲೋಕಕ್ಕೆ ಬಂದು ಮೂರೇ ವರ್ಷದಲ್ಲಿ ಹಲವು ಭಾಷೆಗಳಲ್ಲಿ ಹತ್ತಾರು ಸಿನಿಮಾಗಳಲ್ಲಿ ನಟಿಸಿದ ದಿವ್ಯಾ ಭಾರತಿ, ಸಾವಿನ ಸುದ್ದಿ ಇಡೀ ಬಾಲಿವುಡ್‌ಅನ್ನೇ ಶಾಕ್‌ಗೆ ದೂಡಿತು. ಭಾರತೀಯ ಚಿತ್ರರಂಗ 19 ವರ್ಷದ ಯುವ ನಟಿಯ ಸಾವಿಗೆ ಕಂಬನಿ ಮಿಡಿಯಿತು. 
icon

(8 / 10)

ಅಂದಹಾಗೆ 1993ರ ಏಪ್ರಿಲ್‌ 5ರಂದು ಮುಂಬೈನ ಪಶ್ಚಿಮ ಅಂಧೇರಿಯಲ್ಲಿರುವ ವರ್ಸೋವಾದ ತುಳಸಿ ಅಪಾರ್ಟ್‌ಮೆಂಟ್‌ನ ಐದನೇ ಮಹಡಿಯಿಂದ ಬಿದ್ದು, ದಿವ್ಯಾ ಭಾರತಿ ಸಾವನ್ನಪ್ಪಿದ್ದರು. ಇದು ಕೊಲೆಯೋ, ಆತ್ಮಹತ್ಯೆಯೋ ಎಂಬ ಪ್ರಶ್ನೆಗೆ ಉತ್ತರ ಇಂದಿಗೂ ನಿಗೂಢ.
icon

(9 / 10)

ದಿವ್ಯಾ ಭಾರತಿ ತಮ್ಮ 14 ನೇ ವಯಸ್ಸಿನಲ್ಲಿ ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡರು. ಬಳಿಕ 'ವಿಶ್ವಾತ್ಮ' ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. 1993 ಡಿಸೆಂಬರ್‌ 17ರಂದು ಬಿಡುಗಡೆಯಾದ ಶತರಂಜ್‌ ಸಿನಿಮಾ ದಿವ್ಯಾ ಅವರ ಕೊನೇ ಸಿನಿಮಾ. ಅವರ ನಿಧನದ ಬಳಿಕ ಈ ಚಿತ್ರ ತೆರೆಕಂಡಿತ್ತು. 
icon

(10 / 10)

ಇತರ ಗ್ಯಾಲರಿಗಳು