ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಆ ಖ್ಯಾತ ನಿರ್ದೇಶಕ ಮಹಾಶಯ ನನ್ನ ಎದೆಯ ಸುತ್ತಳತೆ ಕೇಳಿದ್ದ; ಕಾಸ್ಟಿಂಗ್‌ ಕೌಚ್‌ ಕರಾಳ ಅನುಭವ ತೆರೆದಿಟ್ಟ ನಟಿ

ಆ ಖ್ಯಾತ ನಿರ್ದೇಶಕ ಮಹಾಶಯ ನನ್ನ ಎದೆಯ ಸುತ್ತಳತೆ ಕೇಳಿದ್ದ; ಕಾಸ್ಟಿಂಗ್‌ ಕೌಚ್‌ ಕರಾಳ ಅನುಭವ ತೆರೆದಿಟ್ಟ ನಟಿ

  • ಬಾಲಿವುಡ್‌ನ ಕಾಸ್ಟಿಂಗ್‌ ಕೌಚ್‌ ಅದು ಮುಗಿಯದ ಅಧ್ಯಾಯ. ಆಗಾಗ ಕೆಲವರು ಚಿತ್ರರಂಗದಲ್ಲಿನ ಕರಾಳ ಮುಖವನ್ನು ಬಿಚ್ಚಿಟ್ಟಿರುತ್ತಾರೆ. ಅದೇ ರೀತಿ ಬಾಲಿವುಡ್‌ನ ಖ್ಯಾತ ನಿರ್ದೇಶಕರೊಬ್ಬರು ಈ ಸುಳಿಯಲ್ಲಿ ಪದೇ ಪದೆ ಸಿಲುಕಿದ ಉದಾಹರಣೆಗೂ ಇವೆ. ಆ ಪೈಕಿ ತನ್ನ ಬಗ್ಗೆ ಕೆಟ್ಟದಾಗಿ ಕಾಮೆಂಟ್‌ ಮಾಡಿ ನಿರ್ದೇಶಕನ ಹೆಸರನ್ನು ಓಪನ್‌ ಆಗಿಯೇ ಹೇಳಿಕೊಂಡಿದ್ದರು ಈ ನಟಿ.

ಬಾಲಿವುಡ್‌ನ ಖ್ಯಾತ ನಿರ್ದೇಶಕ ಸಾಜಿದ್‌ ಖಾನ್‌ ಬಗ್ಗೆ ಸಾಕಷ್ಟು #Metoo ಆರೋಪಗಳಿವೆ. ಆ ನಿರ್ದೇಶಕನ ವರ್ತನೆ ಬಗ್ಗೆ ಸಾಕಷ್ಟು ನಟಿಯರು ಮೌನ ಮುರಿದಿದ್ದಾರೆ. 
icon

(1 / 6)

ಈಗಾಗಲೇ ಬಾಲಿವುಡ್‌ನ ಕಾಮಕಾಂಡದ ಬಗ್ಗೆ ಮಂದನಾ ಕರ್ಮಿ, ಅಹಾನಾ ಕುಮ್ರಾ, ಶೆರ್ಲಿನ್‌ ಚೋಪ್ರಾ, ಕನಿಷ್ಕಾ ಸೋನಿ ತಮಗಾದ ಅನುಭವವನ್ನು ಈಗಾಗಲೇ ಹೇಳಿಕೊಂಡಿದ್ದಾರೆ. 
icon

(2 / 6)

ಅದೇ ರೀತಿ ಭೋಜಪುರಿ ನಟಿ ರಾಣಿ ಚಟರ್ಜಿಗೂ ಇಂಥದ್ದೇ ಅನುಭವ ಆಗಿತ್ತು. ಅದರ ಬಗ್ಗೆ ಈ ಹಿಂದೆಯೇ ಸ್ಪಷ್ಟಪಡಿಸಿದ್ದರಾದರೂ, ಇದೀಗ ಅಂದಿನ ಹೇಳಿಕೆ ಮತ್ತೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. 
icon

(3 / 6)

ಐಟಂ ಡಾನ್ಸ್‌ವೊಂದರ ಅವಕಾಶಕ್ಕಾಗಿ ಬಾಲಿವುಡ್‌ನ ನಿರ್ದೇಶಕ ಸಾಜಿದ್‌ ಖಾನ್‌ ಅವರ ಬಳಿ ನಟಿ ರಾಣಿ ಚಟರ್ಜಿ ತೆರಳಿದ್ದರು. ಆಗ ಅವರು ಕೇಳಿದ ಪ್ರಶ್ನೆಗಳಿಗೆ ನಟಿ ರಾಣಿ ಅಕ್ಷರಶಃ ದಂಗಾಗಿದ್ದರು. 
icon

(4 / 6)

ಒಬ್ಬರೇ ಮನೆಗೆ ಬರಬೇಕು, ಜತೆಯಲ್ಲಿ ಯಾರನ್ನೂ ಕರೆತರಬಾರದು ಎಂದು ಆದೇಶಿಸಿದ್ದರು. ಹಾಡಿನಲ್ಲಿ ಚಿಕ್ಕ ಬಟ್ಟೆ ಹಾಕಬೇಕು ಎನ್ನುತ್ತ ನಿಮ್ಮ ಕಾಲು ತೋರಿಸಿ ಎಂದರು. ನಿಮ್ಮ ಸ್ತನದ ಗಾತ್ರ ಎಷ್ಟು ಎಂದೂ ಕೇಳಿದರು. 
icon

(5 / 6)

ಅಷ್ಟಕ್ಕೆ ಮುಗಿಯಲಿಲ್ಲ ನಿಮಗೆ ಬಾಯ್‌ಫ್ರೆಂಡ್‌ ಇದ್ದಾನಾ? ನೀವೇಷ್ಟು ಬಾರಿ ಲೈಂಗಿಕ ಕ್ರಿಯೆ ನಡೆಸಿದ್ದೀರಿ? ಎಂದೂ ಕೇಳಿದರು. ನನಗೆ ಕೊಂಚ ಮುಜುಗರವಾಯ್ತು. ಕೂಡಲೇ ಅವಕಾಶವೇ ಬೇಡ ಎಂದು ಅಲ್ಲಿಂದ ಹೊರಬಂದೆ ಎಂದು ರಾಣಿ ಹೇಳಿಕೊಂಡಿದ್ದರು. 
icon

(6 / 6)

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು