Huma Qureshi Photos: ಎತ್ನಿಕ್ ಅವತಾರದಲ್ಲಿ ಒಟಿಟಿ ಕ್ವೀನ್ ಹುಮಾ ಖುರೇಷಿ ಪ್ರತ್ಯಕ್ಷ
ಬಾಲಿವುಡ್ ನಟಿ ಹುಮಾ ಖುರೇಷಿ ಸದ್ಯ ಒಟಿಟಿಯಲ್ಲಿಯೇ ಹೆಚ್ಚು ಬಿಜಿಯಾಗಿದ್ದಾರೆ. ಇತ್ತೀಚೆಗಷ್ಟೇ ಮಹಾರಾಣಿ ಸೀಸನ್ 3 ಸಿರೀಸ್ ಸೋನಿ ಲೀವ್‌ನಲ್ಲಿ ಸ್ಟ್ರೀಮಿಂಗ್ ಆಗಿತ್ತು. ಈ ನಡುವೆ ಕೆಲ ಸಿನಿಮಾಗಳಲ್ಲೂ ಅವರು ನಟಿಸುತ್ತಿದ್ದಾರೆ. ಇದೆಲ್ಲದರ ನಡುವೆಯೇ ಸೋಷಿಯಲ್ ಮೀಡಿಯಾದಲ್ಲೂ ಆಗಾಗ ಕಾಣಿಸಿಕೊಳ್ಳುತ್ತಿರುತ್ತಾರೆ. ಈಗ ಹೊಸ ಫೋಟೋಗಳ ಜತೆಗೆ ಆಗಮಿಸಿದ್ದಾರೆ.
(1 / 6)
ಬಾಲಿವುಡ್ ನಟಿ ಹುಮಾ ಖುರೇಷಿ ಹೊಸ ಅವತಾರದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಎದುರಾಗಿದ್ದಾರೆ. ಇಂಡೋ ವೆಸ್ಟರ್ನ್ ಲುಕ್‌ನಲ್ಲಿ ಮಿಂಚಿದ್ದಾರೆ. (Instagram/@iamhumaq)
(2 / 6)
ಸೋಷಿಯಲ್ ಮೀಡಿಯಾದಲ್ಲಿ ಹೊಸ ಬಗೆಯ ಫೋಟೋಗಳನ್ನು ಹಂಚಿಕೊಂಡ ಹುಮಾ ಖುರೇಷಿ, ತಮ್ಮ ಅಭಿಮಾನಿಗಳ ಗಮನ ಸೆಳೆದಿದ್ದಾರೆ.(Instagram/@iamhumaq)
(3 / 6)
ಹೂವಿನ ಕಸೂತಿಯ ವಿಶೇಷ ವಿನ್ಯಾಸದ ಫ್ಯಾಂಟ್ ಧರಿಸಿ ಅದರ ಮೇಲೆ ಬಿಳಿ ಬಣ್ಣದ ಬ್ಲೇಝರ್ ಧರಿಸಿ ಪೋಸ್ ನೀಡಿದ್ದಾರೆ.(Instagram/@iamhumaq)
(4 / 6)
ಕಿವಿಗೆ ಡೈಮಂಡ್ ಡ್ರಾಪ್ ಸ್ಟೇಟ್ಮೆಂಟ್ ಕಿವಿಯೋಲೆಗಳನ್ನು ಧರಿಸಿರುವ ಹುಮಾ, ಕೈಗೆ ಬೆಳ್ಳಿಯ ರಿಂಗ್ ಧರಿಸಿ ಮನಮೋಹಕ ಭಂಗಿಯಲ್ಲಿ ಎದುರಾಗಿದ್ದಾರೆ. (Instagram/@iamhumaq)
(5 / 6)
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಕಳೆದ ವರ್ಷ ತರ್ಲಾ ಹೆಸರಿನ ಸಿನಿಮಾದಲ್ಲಿ ಹುಮಾ ನಟಿಸಿದ್ದರು. ಇದರ ಜತೆಗೆ ಪೂಜಾ ಮೇರಿ ಜಾನ್ ಸಿನಿಮಾದ ಕೆಲಸಗಳನ್ನೂ ಮುಗಿಸಿದ್ದಾರೆ. (Instagram/@iamhumaq)
ಇತರ ಗ್ಯಾಲರಿಗಳು