Celebrity Property: ಮನೆಯಲ್ಲ ಇದು ಅರಮನೆ, 7500 ಚದರಡಿಯ ನಟಿ ಸೋನಮ್ ಕಪೂರ್ ಮುಂಬೈ ಮನೆಯ 11 ಚಿತ್ರಗಳು, ಇಂಟೀರಿಯರ್ ಸೂಪರ್
- Celebrity Property: ಬಾಲಿವುಡ್ ನಟಿ ಸೋನಮ್ ಕಪೂರ್ ಅವರು ಮುಂಬೈನಲ್ಲಿ ಅದ್ಧೂರಿ ಅಪಾರ್ಟ್‌ಮೆಂಟ್ ಹೊಂದಿದ್ದಾರೆ. ಈ ಮನೆಯಲ್ಲಿ ತನ್ನ ಪತಿ ಆನಂದ್ ಅಹುಜಾ ಮತ್ತು ಮಗ ವಾಯು ಜತೆ ಇದ್ದಾರೆ. ಈ ಮನೆಯ ಸುಂದರ ಚಿತ್ರಗಳು ಇಲ್ಲಿವೆ.
- Celebrity Property: ಬಾಲಿವುಡ್ ನಟಿ ಸೋನಮ್ ಕಪೂರ್ ಅವರು ಮುಂಬೈನಲ್ಲಿ ಅದ್ಧೂರಿ ಅಪಾರ್ಟ್‌ಮೆಂಟ್ ಹೊಂದಿದ್ದಾರೆ. ಈ ಮನೆಯಲ್ಲಿ ತನ್ನ ಪತಿ ಆನಂದ್ ಅಹುಜಾ ಮತ್ತು ಮಗ ವಾಯು ಜತೆ ಇದ್ದಾರೆ. ಈ ಮನೆಯ ಸುಂದರ ಚಿತ್ರಗಳು ಇಲ್ಲಿವೆ.
(1 / 8)
ಆರ್ಕಿಟೆಕ್ಚರಲ್ ಡೈಜೆಸ್ಟ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಸೋನಮ್ ಕಪೂರ್ ತಮ್ಮ ಮುಂಬೈ ಮನೆಯ ಕುರಿತು ಒಂದಿಷ್ಟು ವಿಚಾರ ತಿಳಿಸಿದ್ದಾರೆ. ಮುಂದಿನ ಫೋಟೋಗಳಲ್ಲಿ ಈ ಮನೆಯ ಇಂಟೀರಿಯರ್ ಸೊಬಗು ಕಾಣಿಸಿದೆ. (ಚಿತ್ರ ಕೃಪೆ: ಆರ್ಕಿಟೆಕ್ಚರಲ್ ಡೈಜೆಸ್ಟ್ ಇಂಡಿಯಾ/ಬಿಜೋರ್ನ್ ವಾಲಾಂಡರ್).
(2 / 8)
ಸೋನಮ್ ಕಪೂರ್ ಅವರ ಮನೆಯಲ್ಲಿ ಲಿವಿಂಗ್ ರೂಮ್ ಪ್ರಮುಖ ಆಕರ್ಷಣೆ ಎಂದರೆ ತಪ್ಪಾಗದು. ತಮ್ಮ ಚಿಕ್ಕಮ್ಮ ಕವಿತಾ ಸಿಂಗ್ ನೆರವಿನಿಂದ ಈ ಲಿವಿಂಗ್ ಕೊಠಡಿ ವಿನ್ಯಾಸ ಮಾಡಿದ್ದಾರೆ. ತಂಜಾವೂರು ವರ್ಣಚಿತ್ರಗಳು ಮತ್ತು ಕವಿತಾ ಸಿಂಗ್ ಅವರ ಬೆಸ್ಪೋಕ್ ಸೋಫಾ ಪ್ರಾಚೀನ ಕುಶನ್ ಇತ್ಯಾದಿಗಳಿಂದ ಈ ಕೊಠಡಿಗೆ ಅರಮನೆಯಂತಹ ಲುಕ್ ಬಂದಿದೆ.
(3 / 8)
ಸೋನಮ್ ಕಪೂರ್ ಮತ್ತು ಆನಂದ ಅಹುಜಾ ಅವರ ಬೆಡ್‌ರೂಂ ಆಕರ್ಷಕವಾಗಿವೆ. ರಾಜಸ್ಥಾನದಿಂದ ತರಿಸಿದ ನೀಲಿ ಬಣ್ಣದ ಹಾಸಿಗೆ, ಬೃಹತ್ ಶಾಂಡ್ಲಿಯರ್, ದೇಶದ ವಿವಿಧ ಕಡೆಗಳಿಂದ ತಂದಿರುವ ಕಲಾಕೃತಿಗಳು ಬೆಡ್‌ರೂಂನ ಅಂದ ಹೆಚ್ಚಿಸಿವೆ.
(4 / 8)
ಸೋನಮ್ ಕಪೂರ್ ಮತ್ತು ಆನಂದ ಅಹುಜಾ ಅವರ ಮನೆಯ ಗೋಡೆಗಳಿಗೆ ಹ್ಯಾಂಡ್ ಪೇಂಟಿಂಗ್ ಮಾಡಲಾಗಿದೆ. ಇಲ್ಲಿ ವಿಂಟೇಜ್ ಕುರ್ಚಿಗಳಿವೆ. ಇವರ ತಾಯಿ ಸುನೀತಾ ಕಪೂರ್ ಉಡುಗೊರೆಯಾಗಿ ನೀಡಿದ ಪ್ರಾಚೀನ ಬೆಂಚ್ ಇರುವ ಸುಂದರವಾದ ಗೆಸ್ಟ್ ರೂಂ ಈ ಮನೆಯಲ್ಲಿದೆ.
(5 / 8)
ಸೋನಮ್ ಕಪೂರ್ ಮತ್ತು ಆನಂದ ಅಹುಜಾ ಅವರ ಬಾರ್ ಪ್ರದೇಶ (ಬಲ ಚಿತ್ರ) ಕೂಡ ಅದ್ಭುತ. ಗೋಡೆಗಳಲ್ಲಿ ಸುಂದರ ಕಲಾಕೃತಿಗಳಿವೆ. ಹೊರಾಂಗಣವು ಬಾಲ್ಕನಿಯ ನೋಟವನ್ನು ಹೊಂದಿದೆ.
(6 / 8)
ಸೋನಮ್ ಕಪೂರ್ ಮತ್ತು ಆನಂದ ಅಹುಜಾ ಅವರ ಮುಂಬೈ ಮನೆಯ ಅತ್ಯಂತ ವಿಶೇಷ ಆಕರ್ಷಣೆ ಅವರ ಮಗ ವಾಯು ಅವರ ಕೊಠಡಿ. ಫಾರೆಸ್ಟ್ ಚಿತ್ರಗಳು, ಕಸ್ಟಮ್ ಪೀಠೋಪಕರಣಗಳು, ಆಟಿಕೆಗಳು ಸೇರಿದಂತೆ ಹಲವು ಅಂಶಗಳಿಂದ ಈ ಕೊಠಡಿಯನ್ನು ಅಲಂಕರಿಸಲಾಗಿದೆ.
(7 / 8)
ಸೋನಮ್ ಕಪೂರ್ ಮನೆಯ ಅಡುಗೆಮನೆ ಕೂಡ ಮನೆಯ ಇತರೆ ಭಾಗಗಳಂತೆ ಸುಂದರವಾಗಿದೆ. ಇದು ನೀಲಿ ಮತ್ತು ಬಿಳಿ ಕಸ್ಟಮ್ ಟೈಲ್ ಗಳನ್ನು ಹೊಂದಿದೆ. ಸ್ಮೆಗ್ ಕುಕ್ ಟಾಪ್ ಅಳವಡಿಸಲಾಗಿದೆ.
ಇತರ ಗ್ಯಾಲರಿಗಳು