Yoga Day: ಅನನ್ಯಾ ಪಾಂಡೆ ಸುಖಾಸನ, ಶರ್ಮಿಳಾ ವೃಕ್ಷಾಸನ, ಸೋಹ ಚಕ್ರಾಸನ; ಬಾಲಿವುಡ್ ತಾರೆಯರ ಯೋಗಾಸನದ ಸಂಭ್ರಮ ನೋಡಿರಣ್ಣ
- International Yoga Day 2024: ಅಂತಾರಾಷ್ಟ್ರೀಯ ಯೋಗದಿನದಂದು ಬಾಲಿವುಡ್ ನಟಿಯರು ತಮ್ಮ ಯೋಗ ಕೌಶಲಗಳನ್ನು ಪ್ರದರ್ಶಿಸಿದ್ದಾರೆ. ಅನನ್ಯಾ ಪಾಂಡೆ ಸುಖಾಸನದ ಭಂಗಿಯಲ್ಲಿದ್ದರೆ, ಶರ್ಮಿಲಾ ಟ್ಯಾಗೋರ್ ವೃಕ್ಷಾಸನದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
- International Yoga Day 2024: ಅಂತಾರಾಷ್ಟ್ರೀಯ ಯೋಗದಿನದಂದು ಬಾಲಿವುಡ್ ನಟಿಯರು ತಮ್ಮ ಯೋಗ ಕೌಶಲಗಳನ್ನು ಪ್ರದರ್ಶಿಸಿದ್ದಾರೆ. ಅನನ್ಯಾ ಪಾಂಡೆ ಸುಖಾಸನದ ಭಂಗಿಯಲ್ಲಿದ್ದರೆ, ಶರ್ಮಿಲಾ ಟ್ಯಾಗೋರ್ ವೃಕ್ಷಾಸನದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
(1 / 10)
International Yoga Day 2024: ಬಾಲಿವುಡ್ ನಟಿಯರಾದ ಕಿಯಾರಾ ಅಡ್ವಾಣಿ, ಕರೀನಾ ಕಪೂರ್, ಆಲಿಯಾ ಭಟ್, ದೀಪಿಕಾ ಪಡುಕೋಣೆ ಮತ್ತು ಇತರರು ಯೋಗ ದಿನದಂದು ತಾವು ಯೋಗಾಸನ ಮಾಡಿರುವ ಹಲವು ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಬನ್ನಿ ಬಾಲಿವುಡ್ ನಟಿಯರ ಯೋಗಾಸನದ ಫೋಟೋಗಳನ್ನು ನೋಡೋಣ.
(Instagram)(2 / 10)
ಅನನ್ಯಾ ಪಾಂಡೆ ಅವರ ಜೀವನ ಮಂತ್ರ ಸರಳವಾಗಿದೆ - "ಶಾಂತವಾಗಿರಿ ಮತ್ತು ಯೋಗ ಮಾಡಿ." ಎಂಬ ಜೀವನಮಂತ್ರವನ್ನು ಅನನ್ಯಾ ಪಾಂಡೆ ಹಂಚಿಕೊಂಡಿದ್ದಾರೆ. ನಮಸ್ಕಾರ ಭಂಗಿಯಲ್ಲಿ ಕೈಗಳನ್ನು ಜೋಡಿಸಿ ಸುಖಾಸನದಲ್ಲಿ ಕುಳಿತಿರುವ ಚಿತ್ರವನ್ನು ನಟಿ ಹಂಚಿಕೊಂಡಿದ್ದಾರೆ.
(3 / 10)
ಕಿಯಾರಾ ಅಡ್ವಾಣಿ ಇನ್‌ಸ್ಟಾಗ್ರಾಂನಲ್ಲಿ ಚಕ್ರಾಸನ ಮಾಡುತ್ತಿರುವ ಚಿತ್ರಗಳನ್ನು ಹಂಚಿಕೊಂಡು ಯೋಗ ದಿನದ ಶುಭಾಶಯ ಹೇಳಿದ್ದಾರೆ. ಈ ಯೋಗಾಸನವು ಸ್ನಾಯುಗಳನ್ನು ಹಿಗ್ಗಿಸುವುದು, ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿಸುವುದು, ಜೀರ್ಣಕ್ರಿಯೆಗೆ ಸಹಾಯ ಮಾಡುವುದು ಸೇರಿದಂತೆ ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.
(4 / 10)
ತಾಯಿ ಶರ್ಮಿಳಾ ಟ್ಯಾಗೋರ್, ಪತಿ ಕುನಾಲ್, ಮಗಳು ಇನಾಯಾ ಯೋಗ ಮಾಡುತ್ತಿರುವ ಫೋಟೋವನ್ನು ನಟಿ ಸೋಹಾ ಅಲಿ ಖಾನ್ ಹಂಚಿಕೊಂಡಿದ್ದಾರೆ. ಸೋಹ ಕೂಡ ತನ್ನ ಹಲವು ಯೋಗ ಭಂಗಿಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
(Instagram)(5 / 10)
ಪುಟಾಣಿ ಇನಾಯಾ ತಂದೆ ಕುನಾಲ್ ಬೆನ್ನಿನ ಮೇಲೆ ಯೋಗಾಸನ ಮಾಡುತ್ತಿದ್ದಾಳೆ. ಇನಾಯಾ ತಾಯಿ ಸೋಹಾ ಅವರೊಂದಿಗೆ ಚಕ್ರಾಸನ ಮಾಡುತ್ತಿದ್ದಾರೆ.
(Instagram)(6 / 10)
ಶರ್ಮಿಳಾ ಟ್ಯಾಗೋರ್ ಮತ್ತು ಇನಾಯಾ ಒಟ್ಟಿಗೆ ಯೋಗ ಮಾಡುತ್ತಿದ್ದಾರೆ. ಮತ್ತೊಂದು ಚಿತ್ರದಲ್ಲಿ ಇನಯಾ ಯೋಗಾಸನ ಮಾಡುತ್ತಿದ್ದಾಳೆ.
(Instagram)(7 / 10)
ಯುವರಾಜ್ ಸಿಂಗ್ ಕೂಡ ಯೋಗಾಸನದ ಫೋಟೋ ಹಂಚಿಕೊಂಡಿದ್ದಾರೆ. ಅವರ ಮುಂದೆ ಮಗು ಓರಿಯನ್ ಕೂಡ ಯೋಗದಿನದ ಸಂಭ್ರಮ ಹೆಚ್ಚಿಸಿದೆ.
(8 / 10)
ಅಂತಾರಾಷ್ಟ್ರೀಯ ಯೋಗ ದಿನದಂದು ಶ್ರುತಿ ಸೇಠ್ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. "ನಿಯಮಿತ ಆಸನ ಅಭ್ಯಾಸದ ಮೂಲಕ ಕೆಟ್ಟ ಕರ್ಮವನ್ನು ಸುಡಬಹುದು ಮತ್ತು ಉಸಿರಾಟದ ಮೂಲಕ ಶಾಂತಿ ಮ್ಮದಿಯನ್ನು ಕಂಡುಕೊಳ್ಳಬಹುದು" ಎಂದಿದ್ದಾರೆ.
ಇತರ ಗ್ಯಾಲರಿಗಳು