Kangana Ranaut: ನನ್ನ ಶಕ್ತಿಯೇ ನೀನು ದೇವಿ.. ಅರ್ಥಪೂರ್ಣವಾಗಿ ಬರ್ತ್‌ಡೇ ಆಚರಿಸಿಕೊಂಡ ಕಾಂಟ್ರವರ್ಸಿ ಕ್ವೀನ್ ಕಂಗನಾ ರಣಾವತ್
- ಬಾಲಿವುಡ್‌ನ ಕಾಂಟ್ರವರ್ಸಿ ಕ್ವೀನ್ ಎಂದೇ ಕರೆಸಿಕೊಳ್ಳುವ ನಟಿ ಕಂಗನಾ ರನೌತ್ ಈ ಸಲದ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ. ಹಿಮಾಚಲ ಪ್ರದೇಶದ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ದೇವಿಯ ಪಾದಕ್ಕೆ ಎರಗಿದ್ದಾರೆ.
- ಬಾಲಿವುಡ್‌ನ ಕಾಂಟ್ರವರ್ಸಿ ಕ್ವೀನ್ ಎಂದೇ ಕರೆಸಿಕೊಳ್ಳುವ ನಟಿ ಕಂಗನಾ ರನೌತ್ ಈ ಸಲದ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡಿದ್ದಾರೆ. ಹಿಮಾಚಲ ಪ್ರದೇಶದ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ದೇವಿಯ ಪಾದಕ್ಕೆ ಎರಗಿದ್ದಾರೆ.
(1 / 10)
ಬಾಲಿವುಡ್ ನಟಿ ಕಂಗನಾ ರನೌತ್ ಇಂದು ತಮ್ಮ 37ನೇ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ. ದೇವಾಲಯಗಳಿಗೆ ಭೇಟಿ ನೀಡಿ ಬರ್ತ್‌ಡೇ ದಿನವನ್ನು ಅರ್ಥಪೂರ್ಣವಾಗಿಸಿದ್ದಾರೆ.
(Instagram)(2 / 10)
ಕಂಗನಾ ರನೌತ್ ಬಾಗ್ಲಾಮುಖಿ ಮತ್ತು ಜ್ವಾಲಾ ದೇವಿ ದೇವಾಲಯಗಳಿಗೆ ಭೇಟಿ ನೀಡಿ ತಮ್ಮ ಫೋಟೋಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ
(Instagram)(3 / 10)
ನನ್ನ ಹುಟ್ಟುಹಬ್ಬದ ನಿಮಿತ್ತ ಈ ವರ್ಷವೂ ತಾಯಿ ಶಕ್ತಿಯ ದರ್ಶನ ಪಡೆದೆ. ಹಿಮಾಚಲ ಪ್ರದೇಶದ ವಿಶ್ವಪ್ರಸಿದ್ಧ ಬಾಗ್ಲಾಮುಖಿ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ, ನನ್ನ ಕುಟುಂಬದೊಂದಿಗೆ ಜ್ವಾಲಾ ದೇವಿ ಶಕ್ತಿ ಪೀಠಕ್ಕೂ ಹೋಗಿದ್ದೆ" ಎಂದು ಕಂಗನಾ ಇನ್ಸ್ಟಾಗ್ರಾಮ್ ಪೋಸ್ಟ್ ಮಾಡಿದ್ದಾರೆ.
(Instagram)(4 / 10)
ಎಲ್ಲರೂ ಸಂತೋಷದಿಂದ ಮತ್ತು ಆರೋಗ್ಯದಿಂದ ಇರಲಿ ಎಂದು ದೇವರಲ್ಲಿ ಪ್ರಾರ್ಥಿಸಿದೆ ಎಂದೂ ಹೇಳಿಕೊಂಡಿದ್ದಾರೆ.
(Instagram)(5 / 10)
ಕಂಗನಾ ರನೌತ್ ಬಾಲ್ಯದಲ್ಲಿ ಜ್ವಾಲಾ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅದಾದ ಬಳಿಕ ಮತ್ಯಾವತ್ತೂ ಹೋಗಿರಲಿಲ್ಲ. ಈ ಸಲ ಬರ್ತ್‌ಡೇ ನಿಮಿತ್ತ ಭೇಟಿ ನೀಡಿ ದರ್ಶನ ಪಡೆದಿದ್ದಾರೆ.
(Instagram)(6 / 10)
ಸಾಂಪ್ರದಾಯಿಕ ಹಸಿರು ಮತ್ತು ಕೆಂಪು ಮಿಶ್ರಿತ ಉಡುಪನ್ನು ಧರಿಸಿದ್ದ ಕಂಗನಾ, ಹಣೆಗೆ ಹಳದಿ ವರ್ಣದ ಗಂಧವನ್ನೂ ಹಚ್ಚಿಕೊಂಡಿದ್ದರು.
(Instagram)(9 / 10)
ಜ್ವಾಲಾ ದೇವಿಯ ಗರ್ಭ ಗುಡಿಯಲ್ಲಿ ಉರಿಯುತ್ತಿರುವ ಜ್ವಾಲೆಯ ಫೋಟೋವನ್ನೂ ಕಂಗನಾ ಶೇರ್ ಮಾಡಿದ್ದಾರೆ.
(Instagram)ಇತರ ಗ್ಯಾಲರಿಗಳು