Kangana Ranaut: ಬಾಗ್ಲಾಮುಖಿ-ಜ್ವಾಲಾ ದೇವಿ ದೇವಾಲಯಗಳಿಗೆ ಭೇಟಿ ನೀಡಿ ಹುಟ್ಟುಹಬ್ಬ ಆಚರಿಸಿಕೊಂಡ ಕಂಗನಾ ರಣಾವತ್
- ಮಾರ್ಚ್ 23 ಅಂದರೆ ಇಂದು ಕಂಗನಾ ರಣಾವತ್ ಹುಟ್ಟುಹಬ್ಬ. ಇಂದು ವಿವಿಧ ಪ್ರಮುಖ ದೇಗುಲಗಳಿಗೆ ಭೇಟಿ ನೀಡಿ ತನ್ನ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ದೇಗುಲಗಳಿಗೆ ಭೇಟಿ ನೀಡಿದ ಫೋಟೋಗಳನ್ನು ಬಾಲಿವುಡ್ ನಟಿ ಕಂಗನಾ ರಣಾವತ್ ತನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
- ಮಾರ್ಚ್ 23 ಅಂದರೆ ಇಂದು ಕಂಗನಾ ರಣಾವತ್ ಹುಟ್ಟುಹಬ್ಬ. ಇಂದು ವಿವಿಧ ಪ್ರಮುಖ ದೇಗುಲಗಳಿಗೆ ಭೇಟಿ ನೀಡಿ ತನ್ನ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ದೇಗುಲಗಳಿಗೆ ಭೇಟಿ ನೀಡಿದ ಫೋಟೋಗಳನ್ನು ಬಾಲಿವುಡ್ ನಟಿ ಕಂಗನಾ ರಣಾವತ್ ತನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
(1 / 9)
ಕಂಗನಾ ರಣಾವತ್ ತಮ್ಮ 37 ನೇ ಹುಟ್ಟುಹಬ್ಬವನ್ನು ಹಿಮಾಚಲ ಪ್ರದೇಶದ ಪವಿತ್ರ ದೇವಾಲಯಗಳಿಗೆ ಭೇಟಿ ನೀಡುವ ಮೂಲಕ ಆಚರಿಸಿಕೊಂಡಿದ್ದಾರೆ.
(2 / 9)
ಬಾಗ್ಲಾಮುಖಿ ಮತ್ತು ಜ್ವಾಲಾ ದೇವಿ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ಈ ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. (Instagram)
(3 / 9)
"ಈ ವರ್ಷ ಕೂಡ ನನ್ನ ಜನ್ಮದಿನದಂದು ತಾಯಿ ಶಕ್ತಿಯ ಕ್ಷೇತ್ರಗಳಿಗೆ ಭೇಟಿ ನೀಡಿದ್ದೇನೆ. ಹಿಮಾಚಲದ ಪ್ರಸಿದ್ಧ ಬಾಗ್ಲಾಮುಖಿಯಲ್ಲಿಗೆ ಭೇಟಿ ನೀಡಿದ ಬಳಿಕ ಶಕ್ತಿಪೀಠ ಜ್ವಾಲಾ ದೇವಿಯಲ್ಲಿಗೆ ಹೋಗಿ ಬಂದೆ" ಎಂದು ಅವರು ಇನ್‌ಸ್ಟಾಗ್ರಾಂನಲ್ಲಿ ಬರೆದಿದ್ದಾರೆ.(Instagram)
(4 / 9)
ಸೋಷಿಯಲ್ ಮೀಡಿಯಾದಲ್ಲಿ ಅವರು ದೇವಾಲಯ ಭೇಟಿ ಕುರಿತು ಅನುಭವಗಳನ್ನು ವಿವರಿಸಿದ್ದಾರೆ. "ಎಲ್ಲರ ಸಂತೋಷ ಮತ್ತು ಯೋಗಕ್ಷೇಮವನ್ನು ದೇವಿಯಲ್ಲಿ ಬೇಡಿದೆ" ಎಂದು ಅವರು ಬರೆದಿದ್ದಾರೆ.(Instagram)
(5 / 9)
ಜ್ವಾಲಾಮುಖಿ ದೇಗುಲಕ್ಕೆ ಕಂಗನಾ ಬಾಲ್ಯದಲ್ಲಿ ಆಗಾಗ ಹೋಗುತ್ತಿದ್ದರಂತೆ. ಇದೀಗ ಇಲ್ಲಿಗೆ ಭೇಟಿ ನೀಡಿ ಹಲವು ವರ್ಷಗಳೇ ಕಳೆದಿವೆ ಎಂದು ಅವರು ಬರೆದಿದ್ದಾರೆ. ಚಿತ್ರಗಳಲ್ಲಿ ಕಂಗನಾ ರಣಾವತ್ ಅವರು ಸಾಂಪ್ರದಾಯಿಕ ಹಸಿರು, ಕೆಂಪು ಮತ್ತು ಚಿನ್ನದ ಉಡುಪನ್ನು ಧರಿಸಿರುವುದನ್ನು ಗಮನಿಸಬಹುದು.(Instagram)
(6 / 9)
ಇವರ ಜತೆ ಕುಟುಂಬದ ಸದಸ್ಯರೂ ದೇಗುಲಗಳಿಗೆ ಭೇಟಿ ನೀಡಿದ್ದಾರೆ. ಪ್ರತಿಬಾರಿ ಹುಟ್ಟುಹಬ್ಬದಂದು ದೇವಾಲಯಗಳಿಗೆ ದರ್ಶನ ಮಾಡುವ ಮೂಲಕ ಕಂಗನಾ ರಣಾವತ್ ಹುಟ್ಟುಹಬ್ಬ ಆಚರಿಸುತ್ತಾರೆ. (Instagram)
(7 / 9)
ಕೆಲವು ಚಿತ್ರಗಳಲ್ಲಿ ಕಂಗನಾ ಅವರು ತನ್ನ ಸೋದರಳಿಯನನ್ನು ಎತ್ತಿಕೊಂಡು ದೇಗುಲಗಳಲ್ಲಿ ನಡೆದಾಡುತ್ತಿರುವುದನ್ನು ನೋಡಬಹುದು. (Instagram)
ಇತರ ಗ್ಯಾಲರಿಗಳು