ಕನ್ನಡ ಸುದ್ದಿ  /  Photo Gallery  /  Bollywood News Kareena Kapoor Abu Jani Sandeep Khosla Anarkaliwith 1 Lakh Mirrors Embroidered Master Craftsmen Pcp

Kareena Kapoor: ಅಂತಿಂಥ ಅನಾರ್ಕಲಿ ಇದಲ್ಲ; ಕರೀನಾ ಕಪೂರ್‌ ಉಡುಗೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಕನ್ನಡಿಯ ಕಸೂತಿಯುಂಟು

  • ಕರೀನಾ ಕಪೂರ್‌ ಇತ್ತೀಚೆಗೆ ದಾದಾ ಸಾಹೇಬ್‌ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಅಂದು ಕರೀನಾ ಕಪೂರ್ ಗೋಲ್ಡನ್ ಅಬು ಜಾನಿ ಸಂದೀಪ್ ಖೋಸ್ಲಾ ವಿನ್ಯಾಸದ ಅನಾರ್ಕಲಿ ಧರಿಸಿದ್ದರು. ಸುಮಾರು 100 ಕುಶಲಕರ್ಮಿಗಳಿಂದ ಕಸೂತಿ ಮಾಡಿದ ಒಂದು ಲಕ್ಷಕ್ಕೂ ಹೆಚ್ಚು ಕನ್ನಡಿಗಳು ಈ ಉಡುಗೆಯಲ್ಲಿವೆ.

ದಾದಾಸಾಹೇಬ್ ಫಾಲ್ಕೆ ಇಂಟರ್‌ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ಸ್ 2024 ರಲ್ಲಿ ಬಾಲಿವುಡ್‌ ನಟಿ ಕರೀನಾ ಕಪೂರ್‌ ಖಾನ್‌ ಭಾಗವಹಿಸಿದ್ದರು. ಈ ಸಮಾರಂಭಕ್ಕೆ ಅತ್ಯುತ್ತಮ, ಅಮೋಘ, ಅನನ್ಯ ಉಡುಗೆ ತೊಟ್ಟ ನಟಿಯರಲ್ಲಿ ಕರೀನಾ ಕಪೂರ್‌ ಒಬ್ಬರಾಗಿದ್ದರು. ಗೋಲ್ಡನ್ ಅಬು ಜಾನಿ ಸಂದೀಪ್ ಖೋಸ್ಲಾ  ವಿನ್ಯಾಸದ ಅನಾರ್ಕಲಿಯನ್ನು ಕರೀನಾ ಕಪೂರ್‌ ಉಟ್ಟಿದ್ದರು. ಪ್ರತಿಭಾನ್ವಿತ ಕುಶಲಿಗರಿಂದ ವಿನ್ಯಾಸ ಮಾಡಿರುವ ಈ ಅನಾರ್ಕಲಿ ಅದ್ಭುತವಾಗಿತ್ತು. 
icon

(1 / 8)

ದಾದಾಸಾಹೇಬ್ ಫಾಲ್ಕೆ ಇಂಟರ್‌ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ಸ್ 2024 ರಲ್ಲಿ ಬಾಲಿವುಡ್‌ ನಟಿ ಕರೀನಾ ಕಪೂರ್‌ ಖಾನ್‌ ಭಾಗವಹಿಸಿದ್ದರು. ಈ ಸಮಾರಂಭಕ್ಕೆ ಅತ್ಯುತ್ತಮ, ಅಮೋಘ, ಅನನ್ಯ ಉಡುಗೆ ತೊಟ್ಟ ನಟಿಯರಲ್ಲಿ ಕರೀನಾ ಕಪೂರ್‌ ಒಬ್ಬರಾಗಿದ್ದರು. ಗೋಲ್ಡನ್ ಅಬು ಜಾನಿ ಸಂದೀಪ್ ಖೋಸ್ಲಾ  ವಿನ್ಯಾಸದ ಅನಾರ್ಕಲಿಯನ್ನು ಕರೀನಾ ಕಪೂರ್‌ ಉಟ್ಟಿದ್ದರು. ಪ್ರತಿಭಾನ್ವಿತ ಕುಶಲಿಗರಿಂದ ವಿನ್ಯಾಸ ಮಾಡಿರುವ ಈ ಅನಾರ್ಕಲಿ ಅದ್ಭುತವಾಗಿತ್ತು. (Instagram)

ಅತ್ಯುತ್ತಮ ನಟಿ ವಿಭಾಗದಲ್ಲಿ ಪ್ರಶಸ್ತಿ ಪಡೆದ ಕರೀನಾ ಕಪೂರ್‌ ತಮ್ಮ ಚಿನ್ನದಂತಹ ಉಡುಗೆಯೊಂದಿಗಿನ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. 
icon

(2 / 8)

ಅತ್ಯುತ್ತಮ ನಟಿ ವಿಭಾಗದಲ್ಲಿ ಪ್ರಶಸ್ತಿ ಪಡೆದ ಕರೀನಾ ಕಪೂರ್‌ ತಮ್ಮ ಚಿನ್ನದಂತಹ ಉಡುಗೆಯೊಂದಿಗಿನ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. (Instagram)

ದಾದಾಸಾಹೇಬ್ ಫಾಲ್ಕೆ ಇಂಟರ್‌ನ್ಯಾಶನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಅನಾರ್ಕಲಿ ಮತ್ತು ಆರ್ಗನ್ಜಾ ದುಪ್ಪಟ್ಟವನ್ನು ಕರೀನಾ ಕಪೂರ್‌ ಧರಿಸಿದ್ದರು. ಅಬು ಜಾನಿ ಸಂದೀಪ್ ಖೋಸ್ಲಾ  ಇನ್‌ಸ್ಟಾಗ್ರಾಂ ಪೋಸ್ಟ್‌ ಪ್ರಕಾರ ಸುಮಾರು ನೂರು ಕುಶಲಕರ್ಮಿಗಳು ನಾಜೂಕಾಗಿ 1,10,000  ಕನ್ನಡಿಗಳ ಕಸೂತಿಯನ್ನು ಈ ಉಡುಗೆಗೆ ಜೋಡಿಸಿದ್ದಾರೆ. 
icon

(3 / 8)

ದಾದಾಸಾಹೇಬ್ ಫಾಲ್ಕೆ ಇಂಟರ್‌ನ್ಯಾಶನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಅನಾರ್ಕಲಿ ಮತ್ತು ಆರ್ಗನ್ಜಾ ದುಪ್ಪಟ್ಟವನ್ನು ಕರೀನಾ ಕಪೂರ್‌ ಧರಿಸಿದ್ದರು. ಅಬು ಜಾನಿ ಸಂದೀಪ್ ಖೋಸ್ಲಾ  ಇನ್‌ಸ್ಟಾಗ್ರಾಂ ಪೋಸ್ಟ್‌ ಪ್ರಕಾರ ಸುಮಾರು ನೂರು ಕುಶಲಕರ್ಮಿಗಳು ನಾಜೂಕಾಗಿ 1,10,000  ಕನ್ನಡಿಗಳ ಕಸೂತಿಯನ್ನು ಈ ಉಡುಗೆಗೆ ಜೋಡಿಸಿದ್ದಾರೆ. (Instagram)

ಈ ಅನಾರ್ಕಲಿಯು ಅಗಲವಾದ ವಿ ನೆಕ್‌ಲೈನ್ ಹೊಂದಿದೆ. ಉದ್ದದ ತೋಳುಗಳು, ಹಲವು ಹೂಗಳ ವಿನ್ಯಾಸದ ಸ್ಕರ್ಟ್‌ ಇತ್ಯಾದಿ ಹಲವು ವಿನ್ಯಾಸಗಳನ್ನು ಈ ಉಡುಗೆ ಹೊಂದಿದೆ. 
icon

(4 / 8)

ಈ ಅನಾರ್ಕಲಿಯು ಅಗಲವಾದ ವಿ ನೆಕ್‌ಲೈನ್ ಹೊಂದಿದೆ. ಉದ್ದದ ತೋಳುಗಳು, ಹಲವು ಹೂಗಳ ವಿನ್ಯಾಸದ ಸ್ಕರ್ಟ್‌ ಇತ್ಯಾದಿ ಹಲವು ವಿನ್ಯಾಸಗಳನ್ನು ಈ ಉಡುಗೆ ಹೊಂದಿದೆ. (Instagram)

ಕರೀನಾ ಕಪೂರ್‌ ಅವರು ಅನಾರ್ಕಲಿ ಗೌನ್‌ಗೆ ಹೊಂದಿಕೆಯಾಗುವಂತೆ  ಆರ್ಗನ್ಜಾ ದುಪ್ಪಟ್ಟಾ ಧರಿಸಿದ್ದಾರೆ. ಈ ಉಡುಗೆಯಲ್ಲಿ ಕರೀನಾ ಕಪೂರ್‌ ಅದ್ಭುತವಾಗಿ ಕಾಣಿಸುತ್ತಾರೆ ಎಂದು ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ.  
icon

(5 / 8)

ಕರೀನಾ ಕಪೂರ್‌ ಅವರು ಅನಾರ್ಕಲಿ ಗೌನ್‌ಗೆ ಹೊಂದಿಕೆಯಾಗುವಂತೆ  ಆರ್ಗನ್ಜಾ ದುಪ್ಪಟ್ಟಾ ಧರಿಸಿದ್ದಾರೆ. ಈ ಉಡುಗೆಯಲ್ಲಿ ಕರೀನಾ ಕಪೂರ್‌ ಅದ್ಭುತವಾಗಿ ಕಾಣಿಸುತ್ತಾರೆ ಎಂದು ಅಭಿಮಾನಿಗಳು ಕಾಮೆಂಟ್‌ ಮಾಡಿದ್ದಾರೆ.  (Instagram)

ಈ ಉಡುಗೆಗೆ ಸೂಕ್ತವಾಗುವಂತೆ ಕರೀನಾ ಕಪೂರ್‌ ಸ್ಟೇಟ್‌ಮೆಂಟ್‌ ಆಭರಣಗಳನ್ನು ಧರಿಸಿದ್ದರು. ಚಿನ್ನದ ಚೋಕರ್ ನೆಕ್ಲೇಸ್ ಮತ್ತು ಬಿಳಿ ಮಣಿಗಳಿಂದ ಅಲಂಕರಿಸಲ್ಪಟ್ಟ ಉಂಗುರ ಇವರ ಸೌಂದರ್ಯ ಹೆಚ್ಚಿಸಿದೆ.  
icon

(6 / 8)

ಈ ಉಡುಗೆಗೆ ಸೂಕ್ತವಾಗುವಂತೆ ಕರೀನಾ ಕಪೂರ್‌ ಸ್ಟೇಟ್‌ಮೆಂಟ್‌ ಆಭರಣಗಳನ್ನು ಧರಿಸಿದ್ದರು. ಚಿನ್ನದ ಚೋಕರ್ ನೆಕ್ಲೇಸ್ ಮತ್ತು ಬಿಳಿ ಮಣಿಗಳಿಂದ ಅಲಂಕರಿಸಲ್ಪಟ್ಟ ಉಂಗುರ ಇವರ ಸೌಂದರ್ಯ ಹೆಚ್ಚಿಸಿದೆ.  (Instagram)

ಚಿನ್ನದ ಬಣ್ಣದ ಉಡುಗೆಗೆ ಸೂಕ್ತವಾಗುವಂತೆ ಕರೀನಾ ಕಪೂರ್‌ ಮೇಕಪ್‌ ಮಾಡಿಕೊಂಡಿದ್ದಾರೆ. ಸ್ಮೋಕಿ ಐ ಶ್ಯಾಡೋ,  ಐಲೈನರ್,  ಮಸ್ಕರಾಕ್ಕೆ ಮೇಕಪ್‌ ಮಾಡಿದ್ದರು. ಒಟ್ಟಾರೆ, ಪ್ರಶಸ್ತಿ ಸಮಾರಂಭ ಕಾರ್ಯಕ್ರಮದಲ್ಲಿ ಕರೀನಾ ಕಪೂರ್‌ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು ಎಂದರೆ ತಪ್ಪಾಗದು. 
icon

(7 / 8)

ಚಿನ್ನದ ಬಣ್ಣದ ಉಡುಗೆಗೆ ಸೂಕ್ತವಾಗುವಂತೆ ಕರೀನಾ ಕಪೂರ್‌ ಮೇಕಪ್‌ ಮಾಡಿಕೊಂಡಿದ್ದಾರೆ. ಸ್ಮೋಕಿ ಐ ಶ್ಯಾಡೋ,  ಐಲೈನರ್,  ಮಸ್ಕರಾಕ್ಕೆ ಮೇಕಪ್‌ ಮಾಡಿದ್ದರು. ಒಟ್ಟಾರೆ, ಪ್ರಶಸ್ತಿ ಸಮಾರಂಭ ಕಾರ್ಯಕ್ರಮದಲ್ಲಿ ಕರೀನಾ ಕಪೂರ್‌ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು ಎಂದರೆ ತಪ್ಪಾಗದು. (Instagram)

ಸ್ಯಾಂಡಲ್‌ವುಡ್‌, ಬಾಲಿವುಡ್‌, ಕಾಲಿವುಡ್‌, ಮಾಲಿವುಡ್‌, ಟಾಲಿವುಡ್‌, ಹಾಲಿವುಡ್‌ ಸೇರಿದಂತೆ ಸಿನಿಮಾ ಜಗತ್ತಿನ ಸಮಸ್ತ ಸುದ್ದಿಯ ಜತೆಗೆ ಕಿರುತೆರೆ, ಧಾರಾವಾಹಿ, ಒಟಿಟಿ ಸುದ್ದಿ, ವಿಮರ್ಶೆ, ಮಾಹಿತಿ ಪಡೆಯಲು ಸದಾ ಹಿಂದೂಸ್ಥಾನ್‌ ಟೈಮ್ಸ್‌ ಕನ್ನಡಕ್ಕೆ ಭೇಟಿ ನೀಡಿ. 
icon

(8 / 8)

ಸ್ಯಾಂಡಲ್‌ವುಡ್‌, ಬಾಲಿವುಡ್‌, ಕಾಲಿವುಡ್‌, ಮಾಲಿವುಡ್‌, ಟಾಲಿವುಡ್‌, ಹಾಲಿವುಡ್‌ ಸೇರಿದಂತೆ ಸಿನಿಮಾ ಜಗತ್ತಿನ ಸಮಸ್ತ ಸುದ್ದಿಯ ಜತೆಗೆ ಕಿರುತೆರೆ, ಧಾರಾವಾಹಿ, ಒಟಿಟಿ ಸುದ್ದಿ, ವಿಮರ್ಶೆ, ಮಾಹಿತಿ ಪಡೆಯಲು ಸದಾ ಹಿಂದೂಸ್ಥಾನ್‌ ಟೈಮ್ಸ್‌ ಕನ್ನಡಕ್ಕೆ ಭೇಟಿ ನೀಡಿ. 


IPL_Entry_Point

ಇತರ ಗ್ಯಾಲರಿಗಳು