Sridevi Birth Anniversary: ಶ್ರೀದೇವಿ ನಿಜಕ್ಕೂ ಅತಿಲೋಕ ಸುಂದರಿ; ಇಲ್ಲಿವೆ ನೋಡಿ ಚೆಂದುಳ್ಳ ಚೆಲುವೆಯ ಅಪರೂಪದ PHOTOS
ಭಾರತೀಯ ಸಿನಿಮಾರಂಗ ಕಂಡ ನಟಿ ಶ್ರೀದೇವಿ ದೈಹಿಕವಾಗಿ ಇಲ್ಲವಾಗಿ 6 ವರ್ಷಗಳು ಕಳೆದಿವೆ. ಇಂದು (ಆಗಸ್ಟ್ 14) ಅವರ 61 ನೇ ಜನ್ಮದಿನದ ಸಂದರ್ಭದಲ್ಲಿ, ಶ್ರೀದೇವಿ ನಿಜವಾಗಿಯೂ ಅತಿಲೋಕ ಸುಂದರಿ ಎಂದು ಸಾಬೀತುಪಡಿಸುವ ಕೆಲವು ಅಪರೂಪದ ಫೋಟೋಗಳು ಇಲ್ಲಿವೆ.
(1 / 8)
ಶ್ರೀದೇವಿ ಭಾರತೀಯ ಸಿನಿಮಾರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ನಟಿ. ತನ್ನ ಸೌಂದರ್ಯ ಮತ್ತು ನಟನೆಯಿಂದ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ ಶ್ರೀದೇವಿ, 2018ರಲ್ಲಿನ ಅವರ ಅಕಾಲಿಕ ನಿಧನ ಎಲ್ಲರನ್ನೂ ಶಾಕ್‌ಗೆ ದೂಡಿತ್ತು.
(2 / 8)
ಶ್ರೀದೇವಿ 1963 ಆಗಸ್ಟ್ 13ರಂದು ಜನಿಸಿದರು. ಬಾಲ ಕಲಾವಿದೆಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ, ನಂತರ ಭಾರತದ ಮೊದಲ ಮಹಿಳಾ ಸೂಪರ್‌ಸ್ಟಾರ್ ಪಟ್ಟ ಪಡೆದರು. ತೆಲುಗು, ತಮಿಳು, ಹಿಂದಿ, ಮಲಯಾಳಂ ಮತ್ತು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಶ್ರೀದೇವಿ ನಟಿಸಿದ್ದಾರೆ.
(3 / 8)
1967 ರಲ್ಲಿ ತಮ್ಮ ನಾಲ್ಕನೇ ವಯಸ್ಸಿನಲ್ಲಿ, ಅವರು ತಮಿಳು ಚಿತ್ರ ಕಂದನ್ ಕರುನೈ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡರು. ಬಾಲ ಕಲಾವಿದೆಯಾಗಿ ಕೆಲವು ಚಿತ್ರಗಳಲ್ಲಿ ನಟಿಸಿದ ನಂತರ, 1976ರಲ್ಲಿ ತಮ್ಮ 13 ನೇ ವಯಸ್ಸಿನಲ್ಲಿ ನಾಯಕಿಯಾಗಿ ಪದಾರ್ಪಣೆ ಮಾಡಿದರು.
(4 / 8)
ನಾಯಕಿಯಾಗಿ ನಟಿಸಿ ಸ್ಟಾರ್ ಪಟ್ಟ ಸಿಗುತ್ತಿದ್ದಂತೆ ಶ್ರೀದೇವಿ ಮತ್ಯಾವತ್ತೂ ಹಿಂತಿರುಗಿ ನೋಡಲೇ ಇಲ್ಲ. ಜಗದೇಕ ವೀರುಡು ಅತಿಲೋಕ ಸುಂದರಿ, ಕ್ಷಣಂ, ಮಿಸ್ಟರ್ ಇಂಡಿಯಾ ಸೇರಿ ಇನ್ನೂ ಹತ್ತಾರು ಚಿತ್ರಗಳು ದಾಖಲೆ ಬರೆದವು.
(5 / 8)
1979 ರಲ್ಲಿ ಸೋಲ್ವ ಸಾವನ್ ಚಿತ್ರದ ಮೂಲಕ ಬಾಲಿವುಡ್‌ಗೆ ಶ್ರೀದೇವಿ ಪದಾರ್ಪಣೆ ಮಾಡಿದರು. 1983 ರಲ್ಲಿ ತೆರೆಕಂಡ ಹಿಮ್ಮತ್‌ವಾಲಾ ಸಿನಿಮಾ ಅವರಿಗೆ ದೊಡ್ಡ ಯಶಸ್ಸು ತಂದುಕೊಟ್ಟಿತು.
(6 / 8)
ಭಾರತೀಯ ಚಿತ್ರೋದ್ಯಮದ ಆಗಿನ ಕಾಲದ ಬಹುತೇಕ ಎಲ್ಲ ಸ್ಟಾರ್ ನಟರಿಗೆ ಜೋಡಿಯಾಗಿ ಶ್ರೀದೇವಿ ನಟಿಸಿದರು. ಭಾರತದ ಮೊದಲ ಮಹಿಳಾ ಸೂಪರ್‌ಸ್ಟಾರ್ ಆಗಿ ಹೊರಹೊಮ್ಮಿದರು.
(7 / 8)
ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಅವರನ್ನು ಮದುವೆಯಾದ ನಂತರ ಶ್ರೀದೇವಿ ಮುಂಬೈಗೆ ಶಿಫ್ಟ್ ಆದರು. ಜಾನ್ವಿ ಕಪೂರ್ ಅವರು ಹುಟ್ಟಿದ ಬಳಿಕ ನಟಿನೆಯಿಂದ ದೂರವುಳಿದರು. 2004ರಲ್ಲಿ ಮತ್ತೆ ಬಣ್ಣದ ಲೋಕಕ್ಕೆ ಮರಳಿದರು.
ಇತರ ಗ್ಯಾಲರಿಗಳು