ಲೈಫ್‌ಬಾಯ್ ಜಾಹೀರಾತಿನಲ್ಲಿ ಕಂಡ ಪುಟ್ಟ ಹುಡುಗಿ ಈಗ ಬಳುಕೋ ಬಳ್ಳಿ; ʻಬಂಟಿ ನಿನ್ನ ಸಾಬೂನ್ ಸ್ಲೋನಾʼ ಎಂದಾಕೆ ಫೋಟೋಸ್ ಇಲ್ಲಿವೆ
- ಬಾಲನಟಿಯಾಗಿ ಜಾಹೀರಾತುಗಳಲ್ಲಿ ಗಮನ ಸೆಳೆದ ಎಷ್ಟೋ ಪುಟಾಣಿಗಳು ಇದೀಗ ಸಿನಿಮಾ, ಸೀರಿಯಲ್‌ಗಳಲ್ಲಿಯೂ ಮಿಂಚುತ್ತಿದ್ದಾರೆ. ಅದೇ ರೀತಿ ದಶಕಗಳ ಹಿಂದೆ ಲೈಫ್‌ಬಾಯ್ ಸೋಪ್ ಜಾಹೀರಾತಿನಲ್ಲಿ ಕಂಡಿದ್ದ ಅಂದಿನ ಪುಟ್ಟ ಹುಡುಗಿ ಇದೀಗ, ಬಳುಕೋ ಬಳ್ಳಿಯಂತಾಗಿದ್ದಾರೆ. ಅಂದಿನ ಅನ್ವಿತ್ ಕೌರ್ ಈಗ ಗ್ಲಾಮರಸ್ ಲುಕ್ ಮೂಲಕವೇ ಗಮನಸೆಳೆಯುತ್ತಿರುತ್ತಾರೆ.
- ಬಾಲನಟಿಯಾಗಿ ಜಾಹೀರಾತುಗಳಲ್ಲಿ ಗಮನ ಸೆಳೆದ ಎಷ್ಟೋ ಪುಟಾಣಿಗಳು ಇದೀಗ ಸಿನಿಮಾ, ಸೀರಿಯಲ್‌ಗಳಲ್ಲಿಯೂ ಮಿಂಚುತ್ತಿದ್ದಾರೆ. ಅದೇ ರೀತಿ ದಶಕಗಳ ಹಿಂದೆ ಲೈಫ್‌ಬಾಯ್ ಸೋಪ್ ಜಾಹೀರಾತಿನಲ್ಲಿ ಕಂಡಿದ್ದ ಅಂದಿನ ಪುಟ್ಟ ಹುಡುಗಿ ಇದೀಗ, ಬಳುಕೋ ಬಳ್ಳಿಯಂತಾಗಿದ್ದಾರೆ. ಅಂದಿನ ಅನ್ವಿತ್ ಕೌರ್ ಈಗ ಗ್ಲಾಮರಸ್ ಲುಕ್ ಮೂಲಕವೇ ಗಮನಸೆಳೆಯುತ್ತಿರುತ್ತಾರೆ.
(1 / 12)
ಕೆಲ ವರ್ಷಗಳ ಹಿಂದೆ ಕಿರುತೆರೆಯಲ್ಲಿ ಆಗಾಗ ಲೈಫ್‌ಬಾಯ್ ಸೋಪಿನ ಜಾಹೀರಾತೊಂದು ಕಾಣಿಸುತ್ತಿತ್ತು. ಅದರಲ್ಲಿ "ಬಂಟಿ ನಿನ್ನ ಸೋಪು ಸ್ಲೋನಾ? ಎಂದು ಹುಡುಗಿಯೊಬ್ಬಳು ತನ್ನ ಸಹಪಾಠಿಗೆ ಅಣಕ ಮಾಡುತ್ತಿದ್ದಳು. ಈಗ ಇದೇ ಹುಡುಗಿ ದಂತದ ಗೊಂಬೆಯಂತಾಗಿದ್ದಾಳೆ.
(instagram\Avneet Kaur)(2 / 12)
ದಶಕದ ಹಿಂದೆ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಲೈಫ್‌ಬಾಯ್ ಜಾಹೀರಾತಿನಲ್ಲಿ ಈ ಪೋರಿ ಕಾಣಿಸಿಕೊಂಡಿದ್ದಳು. ಈಗ ವರ್ಷಗಳು ಉರುಳಿವೆ. ದಿನಗಳು ಬದಲಾಗಿವೆ. ಅಂದಿನ ಆ ಪುಟ್ಟ ಬೇಬಿ ಈಗ ಹಾಟ್ ಬೇಬಿ ಆಗಿದ್ದಾಳೆ.
(3 / 12)
ಹೌದು, ಅಂದಿನ ಪುಟ್ಟ ಹುಡುಗಿಯ ಹೆಸರು ಅವ್ನೀತ್ ಕೌರ್. ಈಗ ಸೋಷಿಯಲ್ ಮೀಡಿಯಾದಲ್ಲೂ ಪ್ರಭಾವಿಯಾಗಿ ಬೆಳೆದು, ಯಾವ ಸೆಲೆಬ್ರಿಟಿಗೂ ಕಮ್ಮಿ ಇಲ್ಲ ಎಂಬಂತೆ ಮಿಂಚುತ್ತಿರುತ್ತಾರೆ.
(4 / 12)
ಇನ್‌ಸ್ಟಾಗ್ರಾಂನಲ್ಲಿ ಬರೋಬ್ಬರಿ 31 ಮಿಲಿಯನ್ (3 ಕೋಟಿಗೂ ಅಧಿಕ) ಫಾಲೋವರ್ಸ್ ಹೊಂದಿರುವ ಈ ಬೆಡಗಿ, ತಮ್ಮಅಂದ ಚೆಂದದ ಮೂಲಕವೇ ಆಗಾಗ ವೈರಲ್ ಆಗುತ್ತಿರುತ್ತಾರೆ.
(5 / 12)
ಬಾಲಕಿಯಾಗಿದ್ದಾಗಲೇ ಹಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದ ಅವ್ನೀತ್ ಕೌರ್, ಬಾಲಿವುಡ್‌ನಲ್ಲಿ ಅನೇಕ ಟಿವಿ ಶೋಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ರಾಣಿ ಮುಖರ್ಜಿ ನಟನೆಯ ಮರ್ದಾನಿ ಸಿನಿಮಾದಲ್ಲಿಯೂ ನಟಿಸಿದ್ದಾರೆ.
(6 / 12)
ಪಂಜಾಬ್‌ನ ಜಲಂದರ್‌ನಲ್ಲಿ 2001ರಲ್ಲಿ ಜನಿಸಿರುವ ಅವ್ನೀತ್ ಕೌರ್, ಸದ್ಯ ಹೆತ್ತವರ ಜತೆಗೆ ಮುಂಬೈನಲ್ಲಿಯೇ ವಾಸವಾಗಿದ್ದಾರೆ. ಸದ್ಯ ಬೆಡಗಿಯ ವಯಸ್ಸು ಕೇವಲ 23.
(7 / 12)
ಸಿನಿಮಾ, ಧಾರಾವಾಹಿ, ಟಿವಿ ಶೋಗಳಲ್ಲಿ ಸದಾ ಬಿಜಿಯಾಗಿರುವ ಈ ಬೋಲ್ಡ್ ಬ್ಯೂಟಿ, ಜಾಲತಾಣಗಳಲ್ಲಿ ಹಸಿಬಿಸಿ ಫೋಟೋಗಳ ಮೂಲಕವೇ ಸದ್ದು ಮಾಡುತ್ತಿರುತ್ತಾರೆ.
(8 / 12)
ಸಿಖ್ ಕುಟುಂಬದ ಸೋನಿಯಾ ನಂದ್ರಾ, ಅಮನ್‌ದೀಪ್ ಸಿಂಗ್ ನಂದ್ರಾ ದಂಪತಿಯ ಮಗಳು ಈ ಅವ್ನೀತ್ ಕೌರ್. 2010 ರಿಂದಲೇ ಅಂದರೆ ಕೇವಲ 10 ವರ್ಷದವಳಿದ್ದಾಗಲೇ ಜಾಹೀರಾತು ಲೋಕದಲ್ಲಿ ಮಿಂಚಲು ಶುರು ಮಾಡಿದ್ದಾರೆ.
(9 / 12)
ಈ ಪುಟಾಣಿ, ಮಾಡೆಲಿಂಗ್, ಸಿನಿಮಾ, ಕಿರುತೆರೆಯಲ್ಲೂ ಗುರುತಿಸಿಕೊಂಡರು. ಮ್ಯೂಸಿಕ್ ವಿಡಿಯೋ ಮೂಲಕವೂ ಸದ್ದು ಮಾಡಿದ್ದ ಅವ್ನೀತ್, ಬಂದಿಷ್ ಬಂಡಿತ್ ಜತೆಗೆ ಬಬ್ಬರ್ ಕಾ ಥಾಪರ್ ವೆಬ್ ಸಿರೀಸ್‌ನಲ್ಲೂ ನಟಿಸಿದ್ದಾರೆ.
(10 / 12)
ಲೈಫ್ ಬಾಯ್, ಮ್ಯಾಗಿ ಹಿಂದೂಸ್ತಾನ್ ಯನಿಲಿವರ್ ಸೇರಿದಂತೆ ಒಟ್ಟು 40 ಕ್ಕೂ ಅಧಿಕ ಬ್ರಾಂಡ್ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ ಅವ್ನೀತ್ ಕೌರ್.
(11 / 12)
ಇತ್ತೀಚೆಗಷ್ಟೇ ಟಿಕು ವೆಟ್ಸ್ ಶೇರು ಮತ್ತು 'ಲವ್ ಕಿ ಅರೇಂಜ್ಡ್ ಮ್ಯಾರೇಜ್' ಚಿತ್ರಗಳ ಮೂಲಕ ಪ್ರೇಕ್ಷಕರನ್ನು ಮೆಚ್ಚಿಸಿದ್ದಾರೆ.
ಇತರ ಗ್ಯಾಲರಿಗಳು