ಮತ್ತೆ ಸಕ್ರಿಯ ರಾಜಕಾರಣಕ್ಕೆ ಬಾಲಿವುಡ್ ನಟ ಗೋವಿಂದ; ಕಾಂಗ್ರೆಸ್ ಬಿಟ್ಟು ಕೇಸರಿ ಧ್ವಜ ಹಿಡಿದು ಶಿವಸೇನೆಗೆ ಎಂಟ್ರಿ
- ಬಾಲಿವುಡ್ ನಟ ಮತ್ತು ಕಾಂಗ್ರೆಸ್ ಮಾಜಿ ಲೋಕಸಭಾ ಸಂಸದ ಗೋವಿಂದ, ಗುರುವಾರ ಮುಂಬೈನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಸಮ್ಮುಖದಲ್ಲಿ ಶಿವಸೇನೆಗೆ ಸೇರಿದರು.
- ಬಾಲಿವುಡ್ ನಟ ಮತ್ತು ಕಾಂಗ್ರೆಸ್ ಮಾಜಿ ಲೋಕಸಭಾ ಸಂಸದ ಗೋವಿಂದ, ಗುರುವಾರ ಮುಂಬೈನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಸಮ್ಮುಖದಲ್ಲಿ ಶಿವಸೇನೆಗೆ ಸೇರಿದರು.
(1 / 6)
ಬಾಲಿವುಡ್ ನಟ ಗೋವಿಂದ, ಗುರುವಾರ ಮುಂಬೈನಲ್ಲಿ ಆಡಳಿತಾರೂಢ ಶಿವಸೇನೆ ಜತೆ ಕೈ ಜೋಡಿಸಿದರು. 14 ವರ್ಷಗಳ ವಿರಾಮದ ನಂತರ ಮತ್ತೆ ಸಕ್ರಿಯ ರಾಜಕೀಯಕ್ಕೆ ಮರಳಿದ್ದಾರೆ. (PTI)
(2 / 6)
ಮುಂಬೈನಲ್ಲಿ ಗುರುವಾರ ನಡೆದ ಗೋವಿಂದ ಅವರ ಶಿವಸೇನೆ ಸೇರ್ಪಡೆ ಸಮಾರಂಭದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಛತ್ರಪತಿ ಶಿವಾಜಿ ಮಹಾರಾಜ್ ಅವರಿಗೆ ಗೌರವ ಸಲ್ಲಿಸಿದರು.(ANI)
(3 / 6)
ಮಾಜಿ ಕಾಂಗ್ರೆಸ್ ಲೋಕಸಭಾ ಸಂಸದರಾಗಿ ಈ ಹಿಂದೆ ಆರಿಸಿ ಬಂದಿದ್ದ ಗೋವಿಂದ, ಇದೀಗ ಲೋಕಸಭಾ ಚುನಾವಣಾ ಹೊತ್ತಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಸಮ್ಮುಖದಲ್ಲಿ ಶಿವಸೇನೆಗೆ ಸೇರಿದರು. (PTI)
(4 / 6)
60 ವರ್ಷದ ನಟನನ್ನು ಶಿಂಧೆ ತಮ್ಮ ಪಕ್ಷಕ್ಕೆ ಸ್ವಾಗತಿಸಿ, ಗೋವಿಂದ ಅವರು ಸಮಾಜದ ಎಲ್ಲಾ ವರ್ಗಗಳ ಜನಪ್ರಿಯ ವ್ಯಕ್ತಿ ಎಂದು ಹೇಳಿದರು. (PTI)
(5 / 6)
2004 ರಿಂದ 2009 ರವರೆಗೆ ಕಾಂಗ್ರೆಸ್‌ನ ಸಂಸದರಾಗಿದ್ದ ಗೋವಿಂದ, ಅದಾದ ಬಳಿಕ ರಾಜಕಾರಣದಿಂದ ಹಿಂದೆ ಸರಿದಿದ್ದರು. ಈಗ ಮತ್ತೆ ಅವರ ಆಗಮನವಾಗುತ್ತಿದೆ. (PTI)
ಇತರ ಗ್ಯಾಲರಿಗಳು