Controversial Celebrities: ವಿವಾದಗಳ ಮೂಲಕ ಸಿನಿಜಗತ್ತಿಗೆ ಗುಡ್‌ಬೈ ಹೇಳಿದ ಸೆಲೆಬ್ರಿಟಿಗಳಿವರು; ಮಮತಾ ಕುಲಕರ್ಣಿಯಿಂದ ಶೈನಿ ಅಹುಜಾರವರೆಗೆ
Controversial Celebrities: ಸೆಲೆಬ್ರಿಟಿಗಳಿಗೂ ವಿವಾದಗಳಿಗೂ ಹತ್ತಿರದ ನಂಟು. ಕೆಲವೊಂದು ವಿವಾದಗಳು ಅವರ ವೃತ್ತಿಜೀವನಕ್ಕೆ ಕುತ್ತು ತರುತ್ತದೆ. ಬಾಲಿವುಡ್‌ನ ಅನೇಕ ಸಿನಿಮಾ ನಾಯಕ ಮತ್ತು ನಾಯಕಿಯರು ಮತ್ತು ಇತರೆ ಕಲಾವಿದದರು ವಿವಾದಗಳಿಂದ ತಮ್ಮ ಸಿನಿಮಾ ವೃತ್ತಿಜೀವನ ಕೊನೆಗೊಳಿಸಿದ್ದಾರೆ. ಅಂತಹ ಬಾಲಿವುಡ್ ಸೆಲೆಬ್ರಿಟಿಗಳ ವಿವರ ಇಲ್ಲಿದೆ.
(1 / 8)
ಬಾಲಿವುಡ್ ಅನೇಕ ಕಾರಣಗಳಿಂದ ಆಕರ್ಷಣೆ ಹೊಂದಿದೆ. ವಿಶೇಷವಾಗಿ ಗ್ಲಾಮರ್‌ಗೆ ಸಿನಿರಂಗ ಹೆಸರುವಾಸಿ. ಇದೇ ಸಮಯದಲ್ಲಿ ಅನೇಕ ವಿವಾದಗಳು ಸಿನಿತಾರೆಯರ ಬದುಕನ್ನು ಹಾಳು ಮಾಡಿವೆ. ವೃತ್ತಿಜೀವನಕ್ಕೆ ಹೊಡೆತ ನೀಡಿವೆ. ಈ ರೀತಿ ವಿವಾದಗಳ ಮೂಲಕ ಸುದ್ದಿಯಾದ ಬಾಲಿವುಡ್ ತಾರೆಯರ ವಿವರ ಇಲ್ಲಿದೆ.
(2 / 8)
ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಶೈನಿ ಅಹುಜಾ 'ಗ್ಯಾಂಗ್ ಸ್ಟರ್' ಮತ್ತುವೋ ಲಮ್ಹೆ'ಚಿತ್ರಗಳಲ್ಲಿ ನಟಿಸಿ ಜನಪ್ರಿಯತೆ ಪಡೆದಿದ್ದಾರೆ. ಆದರೆ, ಮನೆ ಕೆಲಸದಾಕೆಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಇವರ ವೃತ್ತಿಜೀವನಕ್ಕೆ ಅಂತ್ಯಹಾಡಿತು. ಮಾಧ್ಯಮಗಳಲ್ಲಿ ವರದಿ ಬಂದ ಬಳಿಕ ಶೈನಿಯನ್ನು ಬಂಧಿಸಲಾಯಿತು. ಜೈಲು ಸೇರಿದ ಇವರು ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಂಡರು. ಬಾಲಿವುಡ್‌ಗೆ ಮತ್ತೆ ಪ್ರವೇಶಿಸಲು ಪ್ರಯತ್ನಿಸಿದರು. ಆದರೆ, ಇಂತಹ ಇವರ ಪ್ರಯತ್ನಗಳು ಬಹುತೇಕ ವಿಫಲವಾಗಿವೆ.
(3 / 8)
ಸಾಹೋ ನಟಿ ಶ್ರದ್ಧಾ ಕಪೂರ್ ಅವರ ತಂದೆ ಶಕ್ತಿ ಕಪೂರ್ ಬಾಲಿವುಡ್ ನ ಅಗ್ರ ನಟರಲ್ಲಿ ಒಬ್ಬರು. ಸುದ್ದಿವಾಹಿನಿಯ ಸ್ಟ್ರಿಂಗ್ ಆಪರೇಷನ್ ಮೂಲಕ ಸಿಕ್ಕಿಬಿದ್ದು ಕರಿಯರ್‌ನಲ್ಲಿ ದೊಡ್ಡ ಹಿನ್ನೆಡೆ ಅನುಭವಿಸಿದರು. ಕಾಸ್ಟಿಂಗ್ ಕೌಚ್‌ಗಾಗಿ ಪತ್ರಕರ್ತನಿಗೆ ಸಲಹೆ ನೀಡಿದ ದೃಶ್ಯಗಳು ಟೀವಿಗಳಲ್ಲಿ ಪ್ರಸಾರವಾಯಿತು. ಇದು ಇವರ ಖ್ಯಾತಿಗೆ ಹಾನಿ ಉಂಟುಮಾಡಿತು. ಇದಾದ ಬಳಿಕ ಇವರು ಸಿನಿಮಾಗಳಲ್ಲಿ ನಟಿಸಲಿಲ್ಲ. ಆದರೆ, ಇತ್ತೀಚಿಗೆ ಅನಿಮಲ್ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
(4 / 8)
'ಪ್ರೇಮ್ ಅಗನ್' ಮತ್ತು 'ಜಂಗಲ್' ಸಿನಿಮಾಗಳ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಫರ್ದೀನ್ ಖಾನ್ ಬಾಲಿವುಡ್‌ನಲ್ಲಿ ಭರವಸೆಯ ನಾಯಕರಾಗಿ ಹೊರಹೊಮ್ಮಿದ್ದರು. ಆದರೆ, ಕೊಕೆನ್ ಮಾದಕ ವಸ್ತು ಹೊಂದಿರುವ ಕಾರಣಕ್ಕೆ ಬಂಧನಕ್ಕೆ ಒಳಗಾದರು. 2001ರಲ್ಲಿ ಬಿಡುಗಡೆಯಾದರೂ ವೃತ್ತಿಜೀವನವನ್ನು ಮತ್ತೆ ಹಳಿಗೆ ತರಲು ಸಾಧ್ಯವಾಗಲಿಲ್ಲ.
(5 / 8)
ಟಿವಿ ಶೋಗಳು ಮತ್ತು ಸಿನಿಮಾಗಳ ನಟನೆಯಲ್ಲಿ ಜನಪ್ರಿಯತೆ ಪಡೆದಿದ್ದ ನಟಿ ಅಮನ್ ವರ್ಮಾ ಕೂಡ ಇದೇ ರೀತಿ ತಮ್ಮ ಕರಿಯರ್ ಹಾಳು ಮಾಡಿಕೊಂಡರು. ನಟಿಯಿಂದ ಲೈಂಗಿಕತೆ ಬಯಸುವ ವಿಡಿಯೋ ಕ್ಲಿಪ್ ವೈರಲ್ ಆದ ಬಳಿಕ ಇವರ ಸಿನಿ ಕರಿಯರ್ ಅಂತ್ಯವಾಯಿತು.
(6 / 8)
1990ರ ದಶಕದಲ್ಲಿ ಮಮತಾ ತನ್ನ ಬೋಲ್ಡ್ ನಟನೆ ಮತ್ತು ಗ್ಲಾಮರಸ್ ಲುಕ್‌ಗೆ ಹೆಸರುವಾಸಿಯಾಗಿದ್ದರು. ಆದರೆ, ಬೃಹತ್ ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಸಿಲುಕಿದ ಬಳಿಕ ಈಕೆಯ ವೃತ್ತಿಜೀವನ ಹಾಳಾಯಿತು. ಈ ಪ್ರಕರಣದಲ್ಲಿ ಈಕೆಯ ಪತಿಯನ್ನೂ ಆರೋಪಿಯಾಗಿ ಮಾಡಲಾಯಿತು. ಇದಾದ ಬಳಿಕ ಇವರು ನಟನೆಗೆ ಗುಡ್‌ಬೈ ಹೇಳಿದರು.
(7 / 8)
ನಟ ಆದಿತ್ಯ ಪಾಂಚೋಲಿ ಮತ್ತು ನಟಿ ಜರೀನಾ ವಹಾಬ್ ಅವರ ಪುತ್ರ ಸೂರಜ್ ಪಾಂಚೋಲಿಯ ಕರಿಯರ್ ದುರಂತ ಅಂತ್ಯಕಂಡಿದೆ. ನಿಶ್ಯಬ್ದಂ, ಘಜಿನಿ ಚಿತ್ರಗಳಲ್ಲಿ ನಟಿಸಿರುವ ಜಿಯಾಖಾನ್ ತನ್ನ ಅಪಾರ್ಟ್ಮೆಂಟ್‌ನಲ್ಲಿ ನಿಗೂಢವಾಗಿ ಮೃತಪಟ್ಟಿದ್ದರು. ಜಿಯಾ ಖಾನ್‌ಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪ ಸೂರಜ್ ಮೇಲಿದೆ. ಇದಾದ ಬಳಿಕ ಸೂರಜ್ ಕರಿಯರ್ ಕೂಡ ಅಂತ್ಯಗೊಂಡಿದೆ.
(8 / 8)
1990 ರ ದಶಕದಲ್ಲಿ ಉತ್ತಮ ವೃತ್ತಿಜೀವನ ಹೊಂದಿದ್ದ ನಟಿ ಮೋನಿಕಾ ಬೇಡಿ, ಭೂಗತ ಪಾತಕಿ ಅಬು ಸಲೇಂ ಮತ್ತು ಮೋನಿಕಾ ಬೇಡಿ ಅವರ ಜತೆಗಿನ ಸಂಬಂಧದ ಕಾರಣದಿಂದ ತನ್ನ ಕರಿಯರ್ ಹಾಳು ಮಾಡಿಕೊಂಡರು. 2002 ರಲ್ಲಿ ನಕಲಿ ದಾಖಲೆಗಳ ಮೂಲಕ ದೇಶ ಪ್ರವೇಶಿಸಿದ ಕಾರಣದಿಂದ ಈಕೆಯನ್ನು ಪೋರ್ಚ್‌ಗಲ್‌ನಲ್ಲಿ ಬಂಧಿಸಲಾಯಿತು. ಈ ಸಮಯದಲಿ ಅಬು ಸಲೇಂ ಜತೆಗಿನ ಸಂಬಂಧ ಜಾಹೀರಾಯಿತು. ಟೀವಿ ಕಾರ್ಯಕ್ರಮಗಳ ಮೂಲಕ ಮತ್ತೆ ವೃತ್ತಿಜೀವನ ಆರಂಭಿಸಲು ಯತ್ನಿಸಿದರೂ ಮತ್ತೆ ಸಕ್ಸಸ್ ದೊರಕಲಿಲ್ಲ.
ಇತರ ಗ್ಯಾಲರಿಗಳು