ನಟಿ ಮೃಣಾಲ್ ಠಾಕೂರ್ ಸೌಂದರ್ಯಕ್ಕೆ ಮನಸೋಲದವರುಂಟೆ? ಕೇಶವಿನ್ಯಾಸವಂತೂ ಕ್ಯೂಟ್ ಅಂದ್ರು ಫ್ಯಾನ್ಸ್
ಬಾಲಿವುಡ್ ನಟಿ ಮೃಣಾಲ್ ಠಾಕೂರ್ ಅವರು ಅಂದವಾದ ಆರ್ಗಂಜಾ ಸ್ಕರ್ಟ್ ಧರಿಸಿ ಸುಂದರ ನೋಟ ಬೀರಿದ್ದಾರೆ. ಇವರ ಆಕರ್ಷಕ ಕೇಶವಿನ್ಯಾಸವೂ ಅಭಿಮಾನಿಗಳ ಗಮನ ಸೆಳೆದಿದೆ. ಇವರ ವೈವಿಧ್ಯಮಯವಾದ ಫ್ಯಾಷನ್ ಅಭಿರುಚಿಗೆ ಸಾಕ್ಷಿಯಂತಿರುವ ನೂತನ ಲುಕ್ ಕುರಿತು ಇನ್ನಷ್ಟು ವಿವರ ಪಡೆಯೋಣ ಬನ್ನಿ.
(1 / 7)
ಮೃಣಾಲ್ ಠಾಕೂರ್ ಫ್ಯಾಷನ್ ಆಸಕ್ತಿ ಕುರಿತು ದೂಸ್ರಾ ಮಾತಿಲ್ಲ. ಇತ್ತೀಚೆಗೆ ಇವರು ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಅಲ್ಲಿ ಅದ್ಭುತ ನೋಟ, ಟ್ರೆಂಡಿ ಹೊಸ ಕೇಶವಿನ್ಯಾಸದಿಂದ ಎಲ್ಲರೂ ತಿರುಗಿ ನೋಡುವಂತೆ ಮಾಡಿದರು. ಇನ್‌ಸ್ಟಾಗ್ರಾಂನಲ್ಲಿ ಈ ಫೋಟೋಗಳನ್ನು ಮೃಣಾಲ್ ಅಪ್ಲೋಡ್ ಮಾಡಿದ್ದಾರೆ.
(Instagram/@mrunalthakur)(2 / 7)
ಈ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ ಅಭಿಮಾನಿಗಳಿಗೆ ವೀಕೆಂಡ್ ಮಸ್ತಿ ನೀಡಿದ್ದಾರೆ ಮೃಣಾಲ್ ಠಾಕೂರ್. ಡಿಸೈನರ್ ಬ್ರಾಂಡ್ ಮಡೋನಾ ಸಂಗ್ರಹದ ಚಿಕ್ ಉಡುಗೆಯಲ್ಲಿ ಇವರು ಗ್ಲಾಮರಸ್ ಆಗಿ ಕಾಣಿಸಿದ್ದಾರೆ.
(Instagram/@mrunalthakur)(3 / 7)
ಇವರ ಉಡುಗೆಗಳಲ್ಲಿ ಮನಮೋಹಕ ಕಪ್ಪು ಬ್ರೇಜರ್ ಆಕರ್ಷಕವಾಗಿತ್ತು. ಬೂದು ಬಣ್ಣದ ಆರ್ಗಾಂಜಾ ಫ್ಲೇರ್ಡ್ ಸ್ಕರ್ಟ್ ಕೂಡ ಧರಿಸಿದ್ದರು.
(Instagram/@mrunalthakur)(4 / 7)
ಸೆಲೆಬ್ರಿಟಿ ಫ್ಯಾಷನ್ ಸ್ಟೈಲಿಸ್ಟ್ ಶೀಫಾ ಗಿಲಾನಿ ಅವರ ಸಹಾಯದಿಂದ, ಮೃಣಾಲ್ ತನ್ನ ಸೌಂದರ್ಯ ಹೆಚ್ಚಿಸಿಕೊಂಡಿದ್ದರು. ಕಿವಿಗೆ ಒಂದು ಜೋಡಿ ಬೆಳ್ಳಿಯ ಸ್ಟೇಟ್‌ಮೆಂಟ್ ಕಿವಿಯೋಲೆ ಧರಿಸಿದ್ದರು. ಬೆರಳಿಗೆ ಆಕರ್ಷಕ ಉಂಗುರಗಳನ್ನು ಧರಿಸಿದ್ದರು. ಈ ಉಡುಗೆಗೆ ಸೂಕ್ತವಾದ ಹೈಹೀಲ್ಡ್ ಧರಿಸಿದ್ದಾರೆ.
(Instagram/@mrunalthakur)(5 / 7)
ಹೇರ್ ಸ್ಟೈಲಿಸ್ಟ್ ಸ್ವಪ್ನಿಲ್ ಕಾಶಿದ್ ಅವರು ಮೃಣಾಲ್ ಠಾಕೂರ್‌ಗೆ ಸುಂದರವಾದ ಕೇಶವಿನ್ಯಾಸ ಮಾಡಿದ್ದಾರೆ. ಭುಜಗಳ ಮೇಲೆ ಹರಡುವಂತಹ ಕೇಶವಿನ್ಯಾಸ ಮತ್ತು ಮುಂಭಾಗದಲ್ಲಿ ಕ್ಯೂಟ್ ಆಗಿ ಕತ್ತರಿಸಿದ ಕೂದಲುಗಳು ನಟಿಯ ಅಂದ ಹೆಚ್ಚಿಸಿವೆ.
(Instagram/@mrunalthakur)(6 / 7)
ಮೇಕಪ್ ಕಲಾವಿದ ಲೋಚನ್ ಅವರ ಸಹಾಯದಿಂದ, ಮೃಣಾಲ್ ತನ್ನ ಮುಖದ ಅಂದ ಹೆಚ್ಚಿಸಿಕೊಂಡಿದ್ದಾರೆ.
(Instagram/@mrunalthakur)ಇತರ ಗ್ಯಾಲರಿಗಳು