ಅನಿಮಲ್‌ ಪಾರ್ಕ್‌, ಕುಬೇರ ಸೇರಿ ರಶ್ಮಿಕಾ ಮಂದಣ್ಣ ಕೈಯ್ಯಲ್ಲಿವೆ 7 ಸಿನಿಮಾಗಳು;̧ ಮತ್ತೆ ಕನ್ನಡದಲ್ಲಿ ನಟಿಸೋದು ಯಾವಾಗ ಅಂತಿದ್ದಾರೆ ಫ್ಯಾನ್ಸ್‌-bollywood news national crush rashmika mandanna busy with 7 movies including animal park kubera rsm ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅನಿಮಲ್‌ ಪಾರ್ಕ್‌, ಕುಬೇರ ಸೇರಿ ರಶ್ಮಿಕಾ ಮಂದಣ್ಣ ಕೈಯ್ಯಲ್ಲಿವೆ 7 ಸಿನಿಮಾಗಳು;̧ ಮತ್ತೆ ಕನ್ನಡದಲ್ಲಿ ನಟಿಸೋದು ಯಾವಾಗ ಅಂತಿದ್ದಾರೆ ಫ್ಯಾನ್ಸ್‌

ಅನಿಮಲ್‌ ಪಾರ್ಕ್‌, ಕುಬೇರ ಸೇರಿ ರಶ್ಮಿಕಾ ಮಂದಣ್ಣ ಕೈಯ್ಯಲ್ಲಿವೆ 7 ಸಿನಿಮಾಗಳು;̧ ಮತ್ತೆ ಕನ್ನಡದಲ್ಲಿ ನಟಿಸೋದು ಯಾವಾಗ ಅಂತಿದ್ದಾರೆ ಫ್ಯಾನ್ಸ್‌

2 ವರ್ಷಗಳ ಹಿಂದೆ ಬಾಲಿವುಡ್‌ಗೆ ಹಾರಿದ ರಶ್ಮಿಕಾ ಮಂದಣ್ಣ ಈಗ ಹಿಂದಿ ಚಿತ್ರರಂಗದಲ್ಲೇ ಹೆಚ್ಚು ಬ್ಯುಸಿ ಆಗಿದ್ದಾರೆ. ಪೊಗರು ರಿಲೀಸ್‌ ನಂತರ ಅವರು ಮತ್ತೆ ಯಾವ ಕನ್ನಡ ಸಿನಿಮಾಗಳಲ್ಲಿ ಕೂಡಾ ಕಾಣಿಸಿಕೊಂಡಿಲ್ಲ.

ತೆಲುಗು, ತಮಿಳು, ಮಲಯಾಳಂ, ಹಿಂದಿ ಚಿತ್ರರಂಗದಿಂದ ರಶ್ಮಿಕಾಗೆ ಸಾಕಷ್ಟು ಆಫರ್‌ಗಳು ಬರುತ್ತಿವೆ. ಪುಷ್ಪ 2, ರೈಂಬೋ ಸೇರಿದಂತೆ 6-7 ಸಿನಿಮಾಗಳು ರಶ್ಮಿಕಾ ಕೈಯ್ಯಲ್ಲಿದೆ.
icon

(1 / 7)

'ಪುಷ್ಪ 2 ದಿ ರೂಲ್'  ಸಿನಿಮಾ ಇದೇ ವರ್ಷ ಡಿಸೆಂಬರ್‌ 6ಕ್ಕೆ ತೆರೆ ಕಾಣುತ್ತಿದೆ. ಇದೇ ದಿನ ಛಾವಾ ಸಿನಿಮಾ ಕೂಡಾ ರಿಲೀಸ್‌ ಆಗುತ್ತಿದೆ. ಈ ಎರಡೂ ಸಿನಿಮಾಗಳಲ್ಲಿ ರಶ್ಮಿಕಾ ನಟಿಸಿದ್ದಾರೆ. ಒಂದೇ ದಿನ ರಶ್ಮಿಕಾ ಅವರ ಎರಡೂ ಸಿನಿಮಾ ವಾರ್‌ಗೆ ಸಿದ್ಧವಾಗಿದೆ. ಆದರೆ ಕೊನೆಯ ಕ್ಷಣದಲ್ಲಿ ಛಾವಾ ಸಿನಿಮಾ ಬಿಡುಗಡೆ ದಿನಾಂಕ ಬದಲಾಗಬಹುದು ಎನ್ನಲಾಗುತ್ತಿದೆ. 
icon

(2 / 7)

ಬಾಲಿವುಡ್ ಮೂಲಗಳ ಪ್ರಕಾರ, ರಶ್ಮಿಕಾ ಮಂದಣ್ಣ ಸಲ್ಮಾನ್ ಖಾನ್ ಅಭಿನಯದ 'ಸಿಕಂದರ್' ಸಿನಿಮಾದಲ್ಲಿ ಕೂಡಾ ನಟಿಸುತ್ತಿದ್ದಾರೆ.  ಈ ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ಮುಂದಿನ ವರ್ಷ ಈ ಚಿತ್ರ ಬಿಡುಗಡೆಯಾಗಲಿದೆ.
icon

(3 / 7)

ಪಿಂಕ್‌ ವಿಲ್ಲಾ ವರದಿಯ ಪ್ರಕಾರ,  'ವ್ಯಾಂಪೈರ್ಸ್ ಆಫ್ ವಿಜಯ್ ನಗರ' ಚಿತ್ರದಲ್ಲಿ ಆಯುಷ್ಮಾನ್ ಖುರಾನಾ ಅವರೊಂದಿಗೆ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕೂ ಮುನ್ನ ಆಯ್ಕೆಯಾಗಿದ್ದ ನಟಿ ಚಿತ್ರತಂಡದಿಂದ ಹೊರ ಹೋಗಿದ್ದು ಆ ಜಾಗಕ್ಕೆ ರಶ್ಮಿಕಾ ಮಂದಣ್ಣನನ್ನು ಕರೆ ತರಲಾಗಿದೆ. 
icon

(4 / 7)

ಅನಿಮಲ್‌ ನಂತರ ಅನಿಮಲ್‌ ಪಾರ್ಕ್‌ ಹೆಸರಿನ ಹೊಸ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಮತ್ತೆ ರಣಬೀರ್‌ ಕಪೂರ್‌ ಜೊತೆ ನಟಿಸುತ್ತಿದ್ದಾರೆ. ಈ ಸಿನಿಮಾ 2024 ಕೊನೆಯಲ್ಲಿ ಸೆಟ್ಟೇರಲಿದೆ. 
icon

(5 / 7)

ಇವಿಷ್ಟೂ ಸಿನಿಮಾಗಳು ಮಾತ್ರವಲ್ಲದೆ ರಶ್ಮಿಕಾ ಮಂದಣ್ಣ ‘ದಿ ಗರ್ಲ್‌ಫ್ರೆಂಡ್’, ‘ಕುಬೇರ’, ‘ರೈಂಬೋ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ. ಸಿನಿಮಾ ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಿಸಿಲ್ಲ. 
icon

(6 / 7)

ಒಟ್ಟಿನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ರಶ್ಮಿಕಾ ಬ್ಯುಸಿ ಆಗಿರುವುದು ಅವರ ಅಭಿಮಾನಿಗಳಿಗೆ ಖುಷಿಯಾಗಿದೆ. ಆದಷ್ಟು ಬೇಗ ಕನ್ನಡದಲ್ಲೂ ಸಿನಿಮಾ ಮಾಡಿ ಎಂದು ಕೆಲವರು ಬೇಡಿಕೆ ಇಟ್ಟಿದ್ದಾರೆ. 
icon

(7 / 7)

ಇತರ ಗ್ಯಾಲರಿಗಳು