ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Tripti Dimri: ಅನಿಮಲ್‌ ಬಳಿಕ ನಟಿ ತೃಪ್ತಿ ದಿಮ್ರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್‌, ಈಕೆಯ ಕೈಯಲ್ಲಿ ಎಷ್ಟು ಪ್ರಾಜೆಕ್ಟ್‌ಗಳಿವೆ ನೋಡಿ

Tripti Dimri: ಅನಿಮಲ್‌ ಬಳಿಕ ನಟಿ ತೃಪ್ತಿ ದಿಮ್ರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್‌, ಈಕೆಯ ಕೈಯಲ್ಲಿ ಎಷ್ಟು ಪ್ರಾಜೆಕ್ಟ್‌ಗಳಿವೆ ನೋಡಿ

  • Upcoming Movies Of Tripti Dimri: ಬಾಲಿವುಡ್‌ ನಟಿ ತೃಪ್ತಿ ದಿಮ್ರಿಗೆ ರಣಬೀರ್‌ ಕಪೂರ್‌ ನಟನೆಯ ಅನಿಮಲ್‌ ಸಿನಿಮಾದಲ್ಲಿ ನಟಿಸಿದ ಬಳಿಕ ಅವಕಾಶಗಳು ಹೆಚ್ಚಾಗಿವೆ. ಹಿಂದಿ ಸಿನಿಮಾ ಕ್ಷೇತ್ರದ ಈ ಸುಂದರ ನಟಿಯ ಕೈಯಲ್ಲಿ ಯಾವೆಲ್ಲ ಪ್ರಾಜೆಕ್ಟ್‌ಗಳಿವೆ ಎಂದು ತಿಳಿದುಕೊಳ್ಳೋಣ.

ಬಾಲಿವುಡ್ ನಟಿ ತೃಪ್ತಿ ದಿಮ್ರಿಗೆ, ರಣಬೀರ್ ಕಪೂರ್ ಮತ್ತು ಬಾಬಿ ಡಿಯೋಲ್ ಅವರ 'ಅನಿಮಲ್' ಚಿತ್ರದಲ್ಲಿ ಜೋಯಾ (ಭಾಭಿ-2) ಪಾತ್ರವನ್ನು  ಮಾಡುವ ಅವಕಾಶ ದೊರಕಿತ್ತು. ಇದರು ಇವರ ಜೀವನದ ದೊಡ್ಡ ತಿರುವು ಎನ್ನಲಾಗಿದೆ. ಈಗ ಈ ನಟಿಗೆ ಸಾಲುಸಾಲು ಸಿನಿಮಾಗಳಲ್ಲಿ ನಟಿಸುವ ಅವಕಾಶ ದೊರಕುತ್ತಿದೆ. ತೃಪ್ತಿ ದಿಮ್ರಿಯ ಮುಂಬರುವ ಸಿನಿಮಾಗಳ ವಿವರ ಇಲ್ಲಿದೆ.
icon

(1 / 7)

ಅನಿಮಲ್‌ ಚಿತ್ರದಲ್ಲಿ ಸೂಪರ್ ನ್ಯೂಡ್ ದೃಶ್ಯ ನೀಡಿದ ತೃಪ್ತಿ ದಿಮ್ರಿ ಈಗ ಭಾರತದ ರಾಷ್ಟ್ರೀಯ ಕ್ರಶ್ ಅಥವಾ ಭಾಭಿ-2 ಎಂದು ಕರೆಯಲ್ಪಡುತ್ತಿದ್ದಾರೆ. ರಣಬೀರ್ ಕಪೂರ್ ಸಿನಿಮಾಗೂ ಮುನ್ನ ತೃಪ್ತಿ ಅವರು ‘ಬುಲ್ ಬುಲ್’, ‘ಲೈಲಾ ಮಜ್ನು’ ಸಿನಿಮಾಗಳನ್ನೂ ಮಾಡಿದ್ದರೂ ಸಾಕಷ್ಟು ಖ್ಯಾತಿ ಸಿಕ್ಕಿರಲಿಲ್ಲ.
icon

(2 / 7)

ಇದಾದ ಬಳಿಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ 'ಅನಿಮಲ್' ಚಿತ್ರ ದೊರಕಿತು. ಅದರಲ್ಲಿ ತೃಪ್ತಿ ಅವರ ಆಕರ್ಷಕ ಅವತಾರವು ಜನರ ಹೃದಯವನ್ನು ಗೆದ್ದಿತು. ಈ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಈಗ ಅನೇಕ ದೊಡ್ಡ ನಿರ್ದೇಶಕರು ತೃಪ್ತಿಯೊಂದಿಗೆ ಕೆಲಸ ಮಾಡಲು ಸಾಲಿನಲ್ಲಿ ನಿಂತಿದ್ದಾರೆ.
icon

(3 / 7)

ತೃಪ್ತಿ ದಿಮ್ರಿ ಅವರ ಮುಂಬರುವ ಚಿತ್ರ 'ಬ್ಯಾಡ್ ನ್ಯೂಸ್' ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಚಿತ್ರವು ಜುಲೈ 19 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ತೃಪ್ತಿ  ದಿಮ್ರಿ ಅವರು ವಿಕ್ಕಿ ಕೌಶಲ್ ಮತ್ತು ಆಮಿ ವಿರ್ಕ್ ಜೊತೆ ನಟಿಸಿದ್ದಾರೆ.
icon

(4 / 7)

ರಾಜ್‌ಕುಮಾರ್ ರಾವ್ ಜೊತೆಗಿನ ತೃಪ್ತಿ ದಿಮ್ರಿ ಅವರ ಚಿತ್ರ 'ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ' ರಿಲೀಸ್‌ ಆಗಿದೆ. ಈ ಚಿತ್ರ ಇದೇ ವರ್ಷ ಅಕ್ಟೋಬರ್ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
icon

(5 / 7)

ತೃಪ್ತಿ ದಿಮ್ರಿ ಅವರ ಮುಂಬರುವ ಚಿತ್ರಗಳ ಪಟ್ಟಿಯಲ್ಲಿ ಕಾರ್ತಿಕ್ ಆರ್ಯನ್ ಜೊತೆಗಿನ ಅವರ 'ಭೂಲ್ ಭುಲೈಯಾ 3' ಚಿತ್ರವೂ ಸೇರಿದೆ. ಈ ಚಿತ್ರದ ಟ್ರೇಲರ್‌ಗಾಗಿ ಅಭಿಮಾನಿಗಳು ಕಾಯುತ್ತಿದ್ದು, ಈ ವರ್ಷಾಂತ್ಯಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. 
icon

(6 / 7)

ಕರಣ್ ಜೋಹರ್ ನಿರ್ಮಾಣದ 'ಧಡಕ್-2' ಚಿತ್ರದಲ್ಲೂ ತೃಪ್ತಿ ದಿಮ್ರಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಸಿದ್ಧಾಂತ್ ಚತುರ್ವೇದಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ತೃಪ್ತಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ ನವೆಂಬರ್ 22 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. 
icon

(7 / 7)

ಇತರ ಗ್ಯಾಲರಿಗಳು