Heart Attack: ಶ್ರೇಯಸ್ ತಲ್ಪಾಡೆ ಮಾತ್ರವಲ್ಲ, ಈ ಸೆಲೆಬ್ರಿಟಿಗಳಿಗೂ ಶೂಟಿಂಗ್‌ ವೇಳೆಯೇ ಸಂಭವಿಸಿತ್ತು ಹೃದಯಾಘಾತ!
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Heart Attack: ಶ್ರೇಯಸ್ ತಲ್ಪಾಡೆ ಮಾತ್ರವಲ್ಲ, ಈ ಸೆಲೆಬ್ರಿಟಿಗಳಿಗೂ ಶೂಟಿಂಗ್‌ ವೇಳೆಯೇ ಸಂಭವಿಸಿತ್ತು ಹೃದಯಾಘಾತ!

Heart Attack: ಶ್ರೇಯಸ್ ತಲ್ಪಾಡೆ ಮಾತ್ರವಲ್ಲ, ಈ ಸೆಲೆಬ್ರಿಟಿಗಳಿಗೂ ಶೂಟಿಂಗ್‌ ವೇಳೆಯೇ ಸಂಭವಿಸಿತ್ತು ಹೃದಯಾಘಾತ!

Celebrities suffered a heart attack on the set: ಸಿನಿಮಾ ಜಗತ್ತಿನಲ್ಲಿ ಹೃದಯಾಘಾತದಿಂದ ಪ್ರಾಣ ಕಳೆದುಕೊಂಡ ಅನೇಕ ನಟರಿದ್ದಾರೆ. ಇನ್ನು ಕೆಲವರು ಹೃದಯಾಘಾತಕ್ಕೆ ಒಳಗಾಗಿ ಚೇತರಿಸಿಕೊಂಡು ಬಂದವರಿದ್ದಾರೆ. ಕೆಲವು ನಟರು ಶೂಟಿಂಗ್‌ ಸೆಟ್‌ನಲ್ಲಿಯೇ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದಿದ್ದಾರೆ. ಅಂತಹ ಕೆಲವು ನಟರ ಬಗ್ಗೆ ತಿಳಿಯೋಣ.

ಶ್ರೇಯಸ್ ತಲ್ಪಾಡೆ: ನಟ ಶ್ರೇಯಸ್ ತಲ್ಪಾಡೆ ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಂಜಿಯೋಪ್ಲಾಸ್ಟಿಗೆ ಒಳಗಾಗಿ, ಚೇತರಿಸಿಕೊಳ್ಳುತ್ತಿದ್ದಾರೆ. 47 ವರ್ಷದ ಶ್ರೇಯಸ್ ‘ವೆಲ್‌ಕಮ್ ಟು ದಿ ಜಂಗಲ್’ ಚಿತ್ರದ ಶೂಟಿಂಗ್‌ನಿಂದ ಮನೆಗೆ ಹಿಂದಿರುಗಿದ ನಂತರ ಪ್ರಜ್ಞಾಹೀನರಾದರು.
icon

(1 / 5)

ಸೈಫ್ ಅಲಿ ಖಾನ್: ಬಾಲಿವುಡ್ ನಟ ಸೈಫ್ ಅಲಿ ಖಾನ್ ಕೇವಲ 36 ನೇ ವಯಸ್ಸಿನಲ್ಲಿ ಹೃದಯಾಘಾತಕ್ಕೆ ಒಳಗಾದರು. 2007ರಲ್ಲಿ, ಅವರು BKC ನಲ್ಲಿ ಸ್ಟಾರ್ ಡಸ್ಟ್ ಅವಾರ್ಡ್‌ಗಾಗಿ ತಯಾರಿ ನಡೆಸುತ್ತಿರುವಾಗ ಹೃದಯಾಘಾತಕ್ಕೆ ಒಳಗಾದರು. ನಂತರ ಅವರನ್ನು ಐಸಿಯುಗೆ ದಾಖಲಿಸಿ ಆಂಜಿಯೋಗ್ರಫಿ ಮಾಡಲಾಗಿತ್ತು.
icon

(2 / 5)

ಸುಶ್ಮಿತಾ ಸೇನ್: ಬಾಲಿವುಡ್ ನಟಿ ಸುಶ್ಮಿತಾ ಸೇನ್ ಅವರು ರಾಜಸ್ಥಾನದ ಜೈಪುರದಲ್ಲಿ ತಮ್ಮ ಜನಪ್ರಿಯ ವೆಬ್ ಸರಣಿ 'ಆರ್ಯ' ಮೂರನೇ ಸೀಸನ್‌ನ ಚಿತ್ರೀಕರಣದಲ್ಲಿ ಹೃದಯಾಘಾತಕ್ಕೊಳಗಾದರು. ಅಚ್ಚರಿ ಎಂದರೆ ಸುಶ್ಮಿತಾ ಅವರಿಗೆ ಹೃದಯಾಘಾತವಾಗಿದೆ ಎಂದು ಕೆಲವು ಪರೀಕ್ಷೆಗಳನ್ನು ಮಾಡುವವರೆಗೂ ತಿಳಿದಿರಲಿಲ್ಲ. ಆಂಜಿಯೋಪ್ಲ್ಯಾಸ್ಟಿ ನಂತರ, ನಟಿ ಮತ್ತೆ ವ್ಯಾಯಾಮ ಮತ್ತು ಯೋಗದೊಂದಿಗೆ ಫಿಟ್ ಆಗಿದ್ದಾರೆ. 
icon

(3 / 5)

ರೆಮೋ ಡಿಸೋಜಾ: ಬಾಲಿವುಡ್‌ನ ಖ್ಯಾತ ನೃತ್ಯ ನಿರ್ದೇಶಕ ರೆಮೊ ಡಿಸೋಜಾ ಅವರಿಗೆ 2011ರಲ್ಲಿ ಹೃದಯಾಘಾತವಾಗಿತ್ತು. ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಅವರ ಆರೋಗ್ಯ ಹದಗೆಟ್ಟಿತ್ತು. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯ ಬಳಿಕ ಸುಧಾರಿಸಿಕೊಂಡರು. 
icon

(4 / 5)

ಸುನಿಲ್ ಗ್ರೋವರ್: ತಮ್ಮ ಹಾಸ್ಯದ ಮೂಲಕ ಎಲ್ಲರನ್ನು ನಗಿಸುತ್ತಿದ್ದ ನಟ ಸುನೀಲ್ ಗ್ರೋವರ್, ವೆಬ್ ಸಿರೀಸ್‌ನ ಶೂಟಿಂಗ್‌ ವೇಳೆ ಹೃದಯಾಘಾತಕ್ಕೆ ಒಳಗಾಗಿದ್ದರು. ಇದೇ ವರ್ಷದ ಫೆಬ್ರವರಿಯಲ್ಲಿ ಈ ಘಟನೆ ನಡೆದಿತ್ತು. ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಿಸಲಾಯಿತು. ಬೈಪಾಸ್ ಶಸ್ತ್ರಚಿಕಿತ್ಸೆಯನ್ನೂ ಮಾಡಲಾಯಿತು.
icon

(5 / 5)

ಇತರ ಗ್ಯಾಲರಿಗಳು