ಪರಿಣೀತಿ- ರಾಘವ್ ವಿವಾಹಕ್ಕೆ ಕ್ಷಣಗಣನೆ; ಮದುವೆ ನಡೆಯೋ ಐಷಾರಾಮಿ ಅರಮನೆ, ಅದರ ವೈಶಿಷ್ಟ್ಯಗಳನ್ನೊಮ್ಮೆ ನೋಡಿ
Parineeti-Raghav Wedding: ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಮತ್ತು ಸಂಸದ ರಾಘವ್ ಚಡ್ಡಾ ಜೋಡಿಯ ವಿವಾಹಕ್ಕೆ ಕೆಲವೇ ಗಂಟೆಗಳಷ್ಟೇ ಬಾಕಿ ಉಳಿದಿದೆ. ಈ ಜೋಡಿಯ ರಾಯಲ್ ವೆಡ್ಡಿಂಗ್ ಸೆಪ್ಟೆಂಬರ್ 24ರಂದು ರಾಜಸ್ಥಾನದ ಉದಯಪುರದಲ್ಲಿ ನಡೆಯಲಿದೆ. ರಾಘವ್-ಪರಿಣೀತಿ ತಮ್ಮ ಈ ವಿವಾಹಕ್ಕಾಗಿ ತಾಜ್ ಲೀಲಾ ಅರಮನೆಯನ್ನು ಆಯ್ಕೆ ಮಾಡಿಕೊಂಡಿದೆ.
(1 / 5)
ರಾಘವ್-ಪರಿಣಿತಿ ಮದುವೆ ತಾಜ್ ಲೀಲಾ ಪ್ಯಾಲೇಸ್‌ನಲ್ಲಿ ನಡೆಯಲಿದೆ. ಅವರ ವಿವಾಹಪೂರ್ವ ಆಚರಣೆಗಳು ಅಂದರೆ ಮೆಹೆಂದಿ, ಸಂಗೀತ ಮತ್ತು ಇತರ ಕಾರ್ಯಕ್ರಮಗಳು ಇಂದಿನಿಂದ ಶುರುವಾಗಲಿವೆ. ಪರಿಣೀತಿ ಚೋಪ್ರಾ ಮತ್ತು ಅವರ ಕುಟುಂಬ ಲೀಲಾ ಪ್ಯಾಲೇಸ್, ತಾಜ್ ಲೇಕ್ ಪ್ಯಾಲೇಸ್‌ನಲ್ಲಿ ಉಳಿಯಲಿದೆ. ಅಚ್ಚರಿ ವಿಚಾರ ಏನೆಂದರೆ ಈ ಮದುವೆಗೆ ಎಲ್ಲರೂ ಲೇಕ್ ಪ್ಯಾಲೇಸ್‌ನಿಂದ ಲೀಲಾ ಪ್ಯಾಲೇಸ್‌ಗೆ ಬೋಟ್ ಮೂಲಕವೇ ಬರಬೇಕಿದೆ.
(2 / 5)
ಎಎಪಿ ಸಂಸದ ರಾಘವ್ ಮತ್ತು ಬಾಲಿವುಡ್ ನಟಿ ಪರಿಣಿತಿ ಸುಂದರ ವಿವಾಹ ಸಮಾರಂಭಕ್ಕೆ ಎರಡೂ ಕುಟುಂಬಗಳ ಆಪ್ತರು ಮತ್ತು ಬಾಲಿವುಡ್ ತಾರೆಯರು ಆಗಮಿಸಲಿದ್ದಾರೆ. ಈ ಅದ್ದೂರಿ ಕಲ್ಯಾಣಕ್ಕೆ ಹಲವು ಕಟ್ಟುನಿಟ್ಟಿನ ಭದ್ರತೆ ಸಹ ಒದಗಿಸಲಾಗಿದೆ. ಫೋಟೋ ಕ್ಲಿಕ್ಕಿಸುವುದಕ್ಕೂ ನಿರ್ಬಂಧ ವಿಧಿಸಲಾಗಿದೆ ಎನ್ನಲಾಗುತ್ತಿದೆ.
(3 / 5)
ತಾಜ್ ಲೇಕ್ ಪ್ಯಾಲೇಸ್ ಪಿಚೋಲಾ ಸರೋವರದ ಮಧ್ಯದಲ್ಲಿದೆ. ಇಲ್ಲಿಗೆ ದೋಣಿಯಲ್ಲಿ ಮಾತ್ರ ಹೋಗಬಹುದು. ಈ ಹೆರಿಟೇಜ್ ಹೋಟೆಲ್ ವಾಸ್ತವವಾಗಿ ಮೊಘಲ್ ಯುಗದ ಐಷಾರಾಮಿ ಅರಮನೆಯಾಗಿದೆ. ಈ ಹೋಟೆಲ್‌ನಲ್ಲಿ 65 ಐಷಾರಾಮಿ ಕೊಠಡಿಗಳು, ಸೇರಿ ಇನ್ನೂ ಹಲವು ವಿಶೇಷತೆಗಳಿಂದ ಕೂಡಿದೆ. ಹೋಟೆಲ್ ಕೊಠಡಿಯೊಂದರ ಒಂದು ದಿನದ ಬಾಡಿಗೆ 40 ಸಾವಿರದಿಂದ ಪ್ರಾರಂಭವಾಗುತ್ತದೆ. ಅರಮನೆಯಲ್ಲಿ ಬೋಟಿಂಗ್, ಪೂಲ್, ಯೋಗ ಸೌಲಭ್ಯಗಳಿವೆ.
(4 / 5)
ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಸೆಪ್ಟೆಂಬರ್ 24 ರಂದು ವಿವಾಹವಾಗಲಿದ್ದಾರೆ. ಈ ಐಷಾರಾಮಿ ಹೋಟೆಲ್ ಈ ಜೋಡಿಯ ಕನಸಿನ ಮದುವೆಗೆ ಎಲ್ಲ ರೀತಿಯಲ್ಲಿಯೂ ಸಿದ್ಧವಾಗಿದೆ. ಸೆಪ್ಟೆಂಬರ್ 24 ರಂದು ಪಂಜಾಬಿ ಶೈಲಿಯಲ್ಲಿ ರಾಘವ್ ಚಡ್ಡಾ ಅವರ ವಿವಾಹ ಸಮಾರಂಭವು ಪ್ರಾರಂಭವಾಗುತ್ತದೆ.
ಇತರ ಗ್ಯಾಲರಿಗಳು