ಥಿಯೇಟರ್‌ನಲ್ಲಿ ಮರು ಬಿಡುಗಡೆ ಆಗ್ತಿದೆ ಮಾಧವನ್ ದಿಯಾ ಮಿರ್ಜಾ ಅಭಿನಯದ ಸಿನಿಮಾ; ಈ ಚಿತ್ರದ ಹಾಡೊಂದು ಇಂದಿಗೂ ಎಲ್ಲರ ಫೇವರೆಟ್
ಬಹಳ ವರ್ಷಗಳ ಹಿಂದೆ ತೆರೆ ಕಂಡ ಸಿನಿಮಾಗಳು ಈಗ ಮರು ಬಿಡುಗಡೆ ಆಗುವುದು ಟ್ರೆಂಡ್ ಆಗಿದೆ. ಸ್ಟಾರ್ ನಟ ನಟಿಯರ ಅನೇಕ ಸಿನಿಮಾಗಳು ರೀ ರಿಲೀಸ್ ಆಗಿವೆ. ಇದೀಗ 23 ವರ್ಷಗಳ ಹಿಂದೆ ತೆರೆ ಕಂಡ ಮತ್ತೊಂದು ಸಿನಿಮಾ ಚಿತ್ರಮಂದಿರದಲ್ಲಿ ತೆರೆ ಕಾಣುತ್ತಿದೆ.
(1 / 7)
ದಿಯಾ ಮಿರ್ಜಾ ಹಾಗೂ ಮಾಧವನ್ ಅಭಿನಯದ 2001 ರಲ್ಲಿ ತೆರೆ ಕಂಡ ಈ ರೋಮ್ಯಾಂಟಿಕ್ ಚಿತ್ರ ಮತ್ತೊಮ್ಮೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವು ಆಗಸ್ಟ್ 30 ರಿಂದ ಸೆಪ್ಟೆಂಬರ್ 5 ರವರೆಗೆ ಥಿಯೇಟರ್‌ಗಳಲ್ಲಿ ಜನರನ್ನು ರಂಜಿಸಲಿದೆ.
(4 / 7)
ಚಿತ್ರದಲ್ಲಿ ನಾಯಕಿ ಪಾತ್ರದಲ್ಲಿ ದಿಯಾ ಮಿರ್ಜಾ ನಟಿಸಿದ್ದಾರೆ. ಚಿತ್ರಕ್ಕೆ ನಾಯಕಿಯಾಗಿ ದಿಯಾ ಮಿರ್ಜಾ ಮೊದಲು ಆಯ್ಕೆಯಾಗಿರಲಿಲ್ಲ. ಅವರಿಗಿಂತ ಮೊದಲು, ರಿಚಾ ಪಲೋಟ್ ಅವರೊಂದಿಗೆ ಮಾತನಾಡಲಾಗಿತ್ತು. ಆದರೆ ಆಕೆ ಈ ಸಿನಿಮಾ ನಿರಾಕರಿಸಿದ್ದರಿಂದ ದಿಯಾ ಮಿರ್ಜಾ ಆಯ್ಕೆ ಆದರು.
(5 / 7)
2001 ರಲ್ಲಿ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದಾಗ ಸಿನಿಮಾ ಫ್ಲಾಪ್ ಆಗಿತ್ತು. ಆದರೆ ನಂತರ ಅದು ಟಿವಿಯಲ್ಲಿ ಪ್ರಸಾರವಾಯ್ತು. ಆಗಲೇ ಈ ಸಿನಿಮಾ ಎಲ್ಲರಿಗೂ ಇಷ್ಟವಾಯ್ತು. ಇಷ್ಟು ಚೆಂದದ ಸಿನಿಮಾ ಏಕೆ ಹಿಟ್ ಆಗಲಿಲ್ಲ ಎಂಬ ಪ್ರಶ್ನೆ ಈಗಲೂ ಸಿನಿಪ್ರಿಯರನ್ನು ಕಾಡುತ್ತಿದೆ.
(6 / 7)
ಚಿತ್ರದ ಕಥೆಯ ಜೊತೆಗೆ ಚಿತ್ರದ ಹಾಡುಗಳು ಸಿನಿಪ್ರಿಯರಿಗೆ ಬಹಳ ಇಷ್ಟ. ಈ ಸಿನಿಮಾದ ಝರಾ ಝರಾ ಬೆಹಕ್ ತಾ ಹೈ ಹಾಡು ಈಗಲೂ ಯುವ ಹೃದಯಗಳ ಮೋಸ್ಟ್ ಫೇವರೆಟ್ ಹಾಡಾಗಿದೆ.
ಇತರ ಗ್ಯಾಲರಿಗಳು