Radhika Merchant Bridal Look: ಮದುಮಗಳಾಗಿ ಹೇಗೆ ಕಾಣ್ತಿದ್ದಾರೆ ನೋಡಿ ಅಂಬಾನಿ ಮನೆ ಕಿರಿ ಸೊಸೆ ರಾಧಿಕಾ ಮರ್ಚೆಂಟ್ PHOTOS
Radhika Merchant bridal look: ಕೊನೆಗೂ ಕಾಯುವಿಕೆ ಮುಗಿದು ಮದುಮಗಳು ರಾಧಿಕಾ ಮರ್ಚೆಂಟ್ ಅವರ ಫೋಟೋಗಳು ಹೊರಬಿದ್ದಿವೆ. ರಾಧಿಕಾ ಮರ್ಚೆಂಟ್ ತಮ್ಮ ಮದುವೆಗೆ ಅಬು ಜಾನಿ ಸಂದೀಪ್ ಖೋಸ್ಲಾ ವಿನ್ಯಾಸಗೊಳಿಸಿದ ಲೆಹೆಂಗಾವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಗುಜರಾತಿ ಸಾಂಪ್ರದಾಯಿಕ ವಧುವಿನಂತೆ ರಾಧಿಕಾ ಕಂಗೊಳಿಸಿದರು.
(1 / 7)
ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದ ಅನಂತ್ ಅಂಬಾನಿ ಅವರ ವಿವಾಹ ಸಮಾರಂಭವು ಕೊನೆಗೊಂಡಿದೆ. ಅನಂತ್ ಮತ್ತು ರಾಧಿಕಾ ಮರ್ಚೆಂಟ್ ಜುಲೈ 12 ರಂದು ವಿವಾಹವಾದರು. ಮದುವೆಯಲ್ಲಿ ರಾಧಿಕಾ ಯಾವ ರೀತಿಯ ಉಡುಗೆ ಧರಿಸುತ್ತಾರೆ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಅದರಂತೆ ರಾಧಿಕಾ ಅವರ ಮದುವೆ ಫೋಟೋಗಳು ಹೊರಬಿದ್ದಿವೆ.
(3 / 7)
ರಾಧಿಕಾ ಅವರ ಲೆಹೆಂಗಾವನ್ನು ಚಿನ್ನದ ದಾರಗಳಿಂದ ಹೆಣೆಯಲಾಗಿದೆ. ಈ ಲೆಹಂಗಾ ಬೆಲೆಯೇ ಕೋಟಿ ಲೆಕ್ಕದಲ್ಲಿದೆ ಎಂದೂ ಹೇಳಲಾಗುತ್ತಿದೆ.
(4 / 7)
ರಾಧಿಕಾ ಮರ್ಚೆಂಟ್ ತಮ್ಮ ಮದುವೆಗೆ ಅಬು ಜಾನಿ ಸಂದೀಪ್ ಖೋಸ್ಲಾ ವಿನ್ಯಾಸಗೊಳಿಸಿದ ಲೆಹೆಂಗಾವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಗುಜರಾತಿ ಸಾಂಪ್ರದಾಯಿಕ ವಧುವಿನಂತೆ ರಾಧಿಕಾ ಕಂಗೊಳಿಸಿದರು.
(5 / 7)
ಹಣೆಯ ಮೇಲೆ ಕೆಂಪು ಟಿಕಿ, ತುಟಿಗಳಿಗೆ ಕೆಂಪು ಲಿಪ್‌ಸ್ಟಿಕ್ ಜತೆಗೆ ಸರಳ ಮೇಕಪ್‌ನಲ್ಲಿ ರಾಧಿಕಾ ಮರ್ಚೆಂಟ್ ಸೊಗಸಾಗಿ ಕಂಡರು.
ಇತರ ಗ್ಯಾಲರಿಗಳು