ಹಿಂದೆಂದೂ ಕಾಣದ ಐತಿಹಾಸಿಕ ಪಾತ್ರದಲ್ಲಿ ಮಹಾರಾಣಿಯಾಗಿ ಕಣ್ಮನ ಸೆಳೆದ ರಶ್ಮಿಕಾ ಮಂದಣ್ಣ; ಛಾವಾ ಚಿತ್ರದ ಫಸ್ಟ್‌ ಲುಕ್‌ ರಿಲೀಸ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಹಿಂದೆಂದೂ ಕಾಣದ ಐತಿಹಾಸಿಕ ಪಾತ್ರದಲ್ಲಿ ಮಹಾರಾಣಿಯಾಗಿ ಕಣ್ಮನ ಸೆಳೆದ ರಶ್ಮಿಕಾ ಮಂದಣ್ಣ; ಛಾವಾ ಚಿತ್ರದ ಫಸ್ಟ್‌ ಲುಕ್‌ ರಿಲೀಸ್‌

ಹಿಂದೆಂದೂ ಕಾಣದ ಐತಿಹಾಸಿಕ ಪಾತ್ರದಲ್ಲಿ ಮಹಾರಾಣಿಯಾಗಿ ಕಣ್ಮನ ಸೆಳೆದ ರಶ್ಮಿಕಾ ಮಂದಣ್ಣ; ಛಾವಾ ಚಿತ್ರದ ಫಸ್ಟ್‌ ಲುಕ್‌ ರಿಲೀಸ್‌

  • ಬಾಲಿವುಡ್‌ನಲ್ಲಿ ನಿರ್ಮಾಣವಾಗಿರುವ ಛಾವಾ ಚಿತ್ರತಂಡದಿಂದ ಇದೀಗ ಹೊಸ ಅಪ್‌ಡೇಟ್‌ ಹೊರಬಿದ್ದಿದೆ. ಐತಿಹಾಸಿಕ ಹಿನ್ನೆಲೆಯ ಈ ಸಿನಿಮಾ ಮರಾಠಾ ದೊರೆ ಛತ್ರವತಿ ಶಿವಾಜಿ ಮಹಾರಾಜ್‌ ಅವರ ಹಿರಿ ಮಗ ಸಂಭಾಜಿ ಮಹಾರಾಜ್‌ ಅವರನ್ನು ಆಧರಿಸಿದೆ. ಈಗ ಇದೇ ಛಾವಾ ಚಿತ್ರದಿಂದ, ರಶ್ಮಿಕಾ ಮಂದಣ್ಣ ಅವರ ಫಸ್ಟ್‌ ಲುಕ್‌ ಅನಾವರಣಗೊಂಡಿದ್ದು, ಮಹಾರಾಣಿ ಯೇಸುಬಾಯಿ ಆಗಿ ಕಂಡಿದ್ದಾರೆ. 

ಬಾಲಿವುಡ್ ನಟ ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಸಿನಿಮಾ ಛಾವಾ. ಈ ಐತಿಹಾಸಿಕ ಆಕ್ಷನ್ ಚಿತ್ರದ ರಶ್ಮಿಕಾ ಮಂದಣ್ಣ ಅವರ ಫಸ್ಟ್ ಲುಕ್ ಇಂದು (ಜನವರಿ 21) ಬಿಡುಗಡೆಯಾಗಿದೆ .
icon

(1 / 5)

(Instagram\ Rashmika Mandanna)

'ಛಾವಾ' ಚಿತ್ರದಲ್ಲಿ ಸಂಭಾಜಿ ಮಹಾರಾಜ್ ಅವರ ಪತ್ನಿ ಮಹಾರಾಣಿ ಯೇಸುಬಾಯಿ ಪಾತ್ರದಲ್ಲಿ ರಶ್ಮಿಕಾ ನಟಿಸಿದ್ದಾರೆ. ಚಿತ್ರದ ಫಸ್ಟ್ ಲುಕ್‌ನಲ್ಲಿ ರಶ್ಮಿಕಾ ಥೇಟ್‌ ಮಹಾರಾಣಿಯಾಗಿ ಅದ್ಭುತವಾಗಿ ಕಂಡಿದ್ದಾರೆ. 
icon

(2 / 5)

 ಮಹಾರಾಣಿ ಯೇಸುಬಾಯಿ ಪಾತ್ರದ ಎರಡು ಲುಕ್‌ಗಳನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಒಂದರಲ್ಲಿ ನಗುಮೊಗದಲ್ಲಿ ಕಂಡರೆ, ಇನ್ನೊಂದರಲ್ಲಿ ಗಂಭೀರವಾಗಿ ಕಂಡಿದ್ದಾರೆ.
icon

(3 / 5)

ಛಾವಾ ಸಿನಿಮಾ ಮರಾಠಾ ಸಾಮ್ರಾಜ್ಯದ ಮಹಾರಾಜ ಸಂಭಾಜಿ ಮಹಾರಾಜ್ ಅವರ ಜೀವನ ಆಧರಿಸಿದೆ. ಈ ಚಿತ್ರದಲ್ಲಿ ವಿಕ್ಕಿ ಕೌಶಲ್ ರಾಜನಾಗಿ ನಟಿಸಿದ್ದಾರೆ. ಇನ್ನುಳಿದಂತೆ ಅಕ್ಷಯ್ ಖನ್ನಾ, ಅಶುತೋಷ್ ರಾಣಾ ಮತ್ತು ದಿವ್ಯಾ ದತ್ತಾ ಪ್ರಮುಖ ಪಾತ್ರಗಳಲ್ಲಿದ್ದಾರೆ. 
icon

(4 / 5)

ಛಾವಾ ಚಿತ್ರವನ್ನು ಲಕ್ಷ್ಮಣ್ ಉಟೇಕರ್ ನಿರ್ದೇಶಿಸಿದ್ದಾರೆ. ಚಿತ್ರದ ಟ್ರೇಲರ್‌ ನಾಳೆ (ಜನವರಿ 22) ಹೊರಬರಲಿದೆ. ಈ ಚಿತ್ರವು ಫೆಬ್ರವರಿ 14 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. 
icon

(5 / 5)

ಇತರ ಗ್ಯಾಲರಿಗಳು