Sonam Kapoor: ಆಕರ್ಷಕ ನೀಲಿ ಉಡುಗೆಯಲ್ಲಿ ಕಂಡ ಹುಡುಗಿ, ಸೋನಂ ಕಪೂರ್ ಧರಿಸಿದ ಈ ಡ್ರೆಸ್ ದರ ಕೇವಲ 2.91 ಲಕ್ಷ ರೂ ಮಾತ್ರ
Sonam Kapoor Photos: ಇತ್ತೀಚೆಗೆ ನಡೆದ ಫಿಲ್ಮ್ ಫೇರ್ ಒಟಿಟಿ ಪ್ರಶಸ್ತಿ ವಿತರಣೆ ಕಾರ್ಯಕ್ರಮಕ್ಕೆ ಬಾಲಿವುಡ್ ನಟಿ ಸೋನಂ ಕಪೂರ್ ಅವರು ಆಕರ್ಷಕ ನೀಲಿ ಉಡುಗೆಯಲ್ಲಿ ಆಗಮಿಸಿದ್ದರು. ಇದು ಅಲೆಕ್ಸಾಂಡರ್ ಮೆಕ್‌ಕ್ವೀನ್ ಬ್ರಾಂಡ್‌ನ ಡ್ರೆಸ್. ಇದರ ದರ ಮೂರು ಲಕ್ಷ ರೂಪಾಯಿಗೆ ಸಮೀಪದಲ್ಲಿದೆ.
(1 / 6)
ಫ್ಯಾಷನ್ ಮತ್ತು ಸ್ಟೈಲ್ ವಿಷಯಕ್ಕೆ ಬಂದರೆ ಸೋನಂ ಕಪೂರ್‌ಗೆ ಯಾರೂ ಸುಲಭವಾಗಿ ಸಾಟಿಯಾಗಲಾರರು. ಇವರು ಬಾಲಿವುಡ್‌ನ ಅನನ್ಯ ಫ್ಯಾಷನ್ ಸುಂದರಿ. ಇತ್ತೀಚೆಗೆ ಫಿಲ್ಮ್ ಫೇರ್ ಪ್ರಶಸ್ತಿ ಸಮಾರಂಭಕ್ಕೆ ಈ ನೀಲಿ ಬಣ್ಣದ ಉಡುಗೆ ಮತ್ತು ಕೈ ಮತ್ತು ಕಾಲಿಗೆ ಕಪ್ಪು ವಿನ್ಯಾಸಗಳನ್ನು ಧರಿಸಿ ಆಗಮಿಸಿದ್ದರು. (Instagram/@sonamkapoor)
(2 / 6)
ಫಿಲ್ಮ್‌ಫೇರ್ ಪ್ರಶಸ್ತಿಗೆ ಧರಿಸಿದ ಫೋಟೋಗಳನ್ನು ನಿನ್ನೆ ಇವರು ಇನ್‌ಸ್ಟಾಗ್ರಾಂಗೆ ಹಂಚಿಕೊಂಡಿದ್ದಾರೆ. ನೀಲಿ ಅತ್ಯಂತ ತಂಪಾದ ಬಣ್ಣ ಎಂಬ ಶೀರ್ಷಿಕೆಯಡಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. (Instagram/@sonamkapoor)
(3 / 6)
ಇದು ಲಗ್ಷುರಿ ಬ್ರ್ಯಾಂಡ್ ಅಲೆಕ್ಷಾಂಡರ್ ಮೆಕ್‌ಕ್ವೀನ್ ಕಂಪನಿಯ ಡ್ರೆಸ್. ಇದರ ದರ ಸುಮಾರು 2.91 ಲಕ್ಷ ರೂಪಾಯಿ ಆಸುಪಾಸಿನಲ್ಲಿದೆ. ಈ ಉಡುಗೆ ತೊಟ್ಟು ಸ್ಟೈಲ್ ಮಾಡಲು ಫ್ಯಾಷನ್ ಸ್ಟೈಲಿಸ್ಟ್ ಸಹೋದರಿ ರಿಹಾ ಕಪೂರ್ ಇವರಿಗೆ ನೆರವು ನೀಡಿದ್ದರು. (Instagram/@sonamkapoor)
(4 / 6)
ಈ ಆಫ್ ಶೋಲ್ಡರ್ ಉಡುಗೆಯು ಸಮುದ್ರ ನೀಲಿ ಬಣ್ಣ ಹೊಂದಿದೆ. ಈ ಉಡುಗೆಗೆ ಸೂಕ್ತವಾಗುವಂತೆ ನೆಕ್ಲೆಸ್, ಶಾರ್ಟ್ ಸ್ಲೀವ್ ಇತ್ಯಾದಿಗಳನ್ನು ಧರಿಸಿದ್ದಾರೆ. (Instagram/@sonamkapoor)
(5 / 6)
ಮೇಕಪ್ ಕಲಾವಿದ ಮಿಕ್ಕಿ ಕಾಂಟ್ರಾಕ್ಟರ್ ನೆರವಿನಿಂದ ಕಡು ಕಪ್ಪು ವಿನ್ಯಾಸ ಮಾಡಿದ್ದರು. ಸ್ಮೂಕಿ ಐಶಾಡೋ, ಐಲೈನರ್, ಮಸ್ಕರಾ ಕೋಟೆಡ್ ಲ್ಯಾಷಸ್, ಕಪ್ಪು ಬ್ರೌಸ್ ಇತ್ಯಾದಿ ಮೇಕಪ್ ಮಾಡಿದ್ದರು. (Instagram/@sonamkapoor)
ಇತರ ಗ್ಯಾಲರಿಗಳು