ಆಕರ್ಷಕ ಕಪ್ಪು ಪ್ಯಾಂಟ್, ಪ್ಲಾಯ್ಡ್ ಬ್ಲೇಜರ್‌ನಲ್ಲಿ ಮಿಂಚಿದ ಸೋನಂ ಕಪೂರ್; ಈ ಬ್ಲೇಜರ್ ಸೆಟ್ ದರ 77 ಸಾವಿರ ರೂ, ಇಲ್ಲಿದೆ ವಿವರ
ಬಾಲಿವುಡ್ ನಟಿ ಸೋನಂ ಕಪೂರ್ ನಯವಾದ ಕಪ್ಪು ಪ್ಯಾಂಟ್ ಜತೆ ಅದ್ಭುತ ಪ್ಲಾಯ್ಡ್ ಬ್ರೇಜರ್ ಧರಿಸಿ ಫೋಟೋಶೂಟ್ ಮಾಡಿಕೊಂಡಿದ್ದಾರೆ. ಪವರ್ ಡ್ರೆಸ್ಸಿಂಗ್ ಅನ್ನು ಸಲೀಸಾಗಿ ಕರಗತ ಮಾಡಿಕೊಂಡಿರುವ ಸೋನಂ ಕಪೂರ್ ಅವರ ಸುಂದರವಾದ ಫೋಟೋಗಳನ್ನು ನೋಡೋಣ ಬನ್ನಿ.
(1 / 6)
ಸೋನಮ್ ಕಪೂರ್ ಒಬ್ಬ ಪರಿಪೂರ್ಣ ಫ್ಯಾಷನಿಸ್ಟ್. ಫ್ಯಾಷನ್ ಪ್ರೊನಂತೆ ಸೌಂದರ್ಯ ಪ್ರಜ್ಞೆ ಹೊಂದಿದ್ದಾರೆ. ಚಿಕ್ ಪ್ಯಾಂಟ್ ಸೂಟ್ ಆಗಿರಲಿ. ರೆಡ್ ಕಾರ್ಪೆಟ್ ಗೌನ್ ಆಗಿರಲಿ. ಅದ್ಭುತವಾಗಿ ಕಾಣಿಸುತ್ತಾರೆ. ಈ ಬಾರಿ, ಅವರು ಕಪ್ಪು ಪ್ಯಾಂಟ್ ಜತೆ ಪ್ಲಾಯ್ಡ್ ಬ್ಲೇಜರ್ ಧರಿಸಿ ಪವರ್ ಡ್ರೆಸ್ಸಿಂಗ್ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಸೋನಂ ಕಪೂರ್ ಈ ಸುಂದರ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಬ್ಲೇಜರ್ ಮತ್ತು ಪ್ಯಾಂಟ್ ಕಾಂಬೋದ ಉಡುಗೆಯು ಫ್ಯಾಷನ್ ಪ್ರಿಯರನ್ನು ಸೆಳೆದಿದೆ.
(Instagram/@sonamkapoor)(2 / 6)
ಸೋನಂ ಕಪೂರ್ ಈ ಸುಂದರ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಬ್ಲೇಜರ್ ಮತ್ತು ಪ್ಯಾಂಟ್ ಕಾಂಬೋದ ಉಡುಗೆಯು ಫ್ಯಾಷನ್ ಪ್ರಿಯರನ್ನು ಸೆಳೆದಿದೆ.
(Instagram/@sonamkapoor)(3 / 6)
ಐಷಾರಾಮಿ ಲಿನಿನ್ ಬಟ್ಟೆಯ ಈ ಸಿಂಗಲ್ ಬ್ರೇಟೆಡ್ ಬ್ರೇಜರ್‌ನಲ್ಲಿ ಸೋನಂ ಕಪೂರ್ ಸುಂದರವಾಗಿ ಕಾಣಿಸಿದ್ದಾರೆ. ಪ್ಲಾಯ್ಡ್ ಚೆಕ್ ಪ್ಯಾಟರ್ನ್, ನಾಚ್ಡ್ ಲ್ಯಾಪೆಲ್‌ಗಳು, ಫ್ರಂಟ್ ಬಟನ್, ಉದ್ದನೆಯ ತೋಳುಗಳು, ಕಪ್ ಬಟನ್‌ಗಳು, ಎರಡು ಸೈಡ್ ಫ್ಲಾಪ್ ಪಾಕೆಟ್‌ಗಳನ್ನು ಈ ಬ್ಲೇಜರ್ ಹೊಂದಿದೆ. ಇದಕ್ಕೆ ತಕ್ಕಂತೆ ಮೃದುವಾದ ಪ್ಯಾಂಟ್ ಧರಿಸಿದ್ದಾರೆ.
(4 / 6)
ಈ ಬ್ಲೇಜರ್ ದರ ಎಷ್ಟು ಎಂಬ ಕುತೂಹಲ ನಿಮ್ಮಲ್ಲಿರಬಹುದು. ಈ ಬ್ಲೇಜರ್ ದರ 485 ಡಾಲರ್. ಅಂದರೆ ಸುಮಾರು 40 ಸಾವಿರ ರೂಪಾಯಿ. ಪ್ಯಾಮ್ ದರ 37,500 ರೂಪಾಯಿ.
(Instagram/@sonamkapoor)(5 / 6)
ತನ್ನ ಫ್ಯಾಷನ್ ಸ್ಟೈಲಿಸ್ಟ್ ಸಹೋದರಿ ರಿಯಾ ಕಪೂರ್ ಸಹಾಯದಿಂದ ಸೋನಮ್ ತನ್ನ ಸೌಂದರ್ಯ ಹೆಚ್ಚಿಸಿಕೊಂಡಿದ್ದಾರೆ. ಒಂದು ಜೋಡಿ ಚಿನ್ನದ ಹೂಪ್ ಕಿವಿಯೋಲೆ, ಬೆರಳಿಗೆ ಉಂಗುರಗಳು, ಹೊಳೆಯುವ ಕಪ್ಪು ಬೂಟುಗಳನ್ನು ಧರಿಸಿ ಸಖತ್ ಲುಕ್ ನೀಡಿದ್ದಾರೆ.
ಇತರ ಗ್ಯಾಲರಿಗಳು