Tripti Dimri: ಮೇಕಪ್ ಇಲ್ದೆ ಇದ್ರೂ ಎಷ್ಟು ಚಂದ ಕಾಣ್ತಾರೆ ಅನಿಮಲ್ ನಟಿ ತೃಪ್ತಿ ದಿಮ್ರಿ; ಈ ಫೋಟೋಸ್ ನೋಡಿ ಫ್ಯಾನ್ಸ್‌ಗೆ ಖುಷಿಯೋ ಖುಷಿ
ಬಾಲಿವುಡ್ ನಟಿ ತೃಪ್ತಿ ದಿಮ್ರಿ ಸೋಷಿಯಲ್ ಮೀಡಿಯಾದಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದು, ಅಭಿಮಾನಿಗಳ ಹೃದಯದ ಮಿಡಿತ ಹೆಚ್ಚಿಸಿದೆ. ಬೀಜ್ ಬಣ್ಣದ ಉದ್ದದ ಕೋಟ್ ಮತ್ತು ಬಿಳಿ ಸ್ಟಾಕಿಂಗ್ಸ್ ಜತೆ ಇವರು ಮೇಕಪ್ ಇಲ್ಲದೆ ಕಾಣಿಸಿದ್ದಾರೆ. ಇವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
(1 / 6)
ತೃಪ್ತಿ ದಿಮ್ರಿ ಅವರು ಅದ್ಭುತ ಪ್ರತಿಭಾನ್ವಿತೆ. ಇವರ ಸೌಂದರ್ಯವೂ ಅದ್ಭುತ. ಹೀಗಾಗಿ, ಇವರಿಗೆ ದೊಡ್ಡ ಮಟ್ಟದಲ್ಲಿ ಫ್ಯಾನ್ಸ್ ಇದ್ದಾರೆ. ಇದೇ ಸಮಯದಲ್ಲಿ ಫ್ಯಾಷನ್ ವಿಷಯದಲ್ಲೂ ಇವರ ಕಾಳಜಿ ಹೆಚ್ಚು. ಅನಿಮಲ್ ಸಿನಿಮಾದಲ್ಲಿ ನಟಿಸಿದ ತೃಪ್ತಿ ದಿಮ್ರಿಗೆ ಯಾವುದೇ ಬಗೆಯ ಉಡುಗೆಯಲ್ಲೂ ಸ್ಟೈಲ್ ಸ್ಟೇಟ್‌ಮೆಂಟ್ ನೀಡಲು ಗೊತ್ತು. ಇದೀಗ ಯಾವುದೇ ಮೇಕಪ್ ಮಾಡಿಕೊಳ್ಳದೆ ಇರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
(Instagram/@tripti_dimri)(2 / 6)
ತೃಪ್ತಿ ದಿಮ್ರಿ ಅವರು ಬುಧವಾರ ಇನ್‌ಸ್ಟಾಗ್ರಾಂನಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಉದ್ದನೆಯ ಉಣ್ಣೆಬಟ್ಟೆ ಕೋಟ್‌ನಲ್ಲಿ ಕಾಂತಿಯುತವಾಗಿ, ಮನಮೋಹಕವಾಗಿ ನಟಿ ಕಾಣಿಸಿಕೊಂಡಿದ್ದಾರೆ.
(Instagram/@tripti_dimri)(3 / 6)
ಪೂರ್ತಿ ಸ್ಲೀವ್ಸ್‌ನ ಡಬಲ್ ಕಾಲರ್‌ನ ಈ ಉಡುಗೆಯಲ್ಲಿ ತೃಪ್ತಿ ದಿಮ್ರಿ ಎಲ್ಲರ ಗಮನ ಸೆಳೆದಿದ್ದಾರೆ. ತೃಪ್ತಿ ದಿಮ್ರಿ ಇತ್ತೀಚೆಗೆ ಅನಿಮಲ್ ಸಿನಿಮಾದಲ್ಲಿ ನಟಿಸಿದ್ದರು. ರಶ್ಮಿಕಾ ಮಂದಣ್ಣ ಜತೆ ಇವರೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ರಣಬೀರ್ ಕಪೂರ್‌ನ ಲವರ್ ಆಗಿ ನಟಿಸಿದ್ದರು.
(Instagram/@tripti_dimri)(4 / 6)
ತೃಪ್ತಿ ದಿಮ್ರಿ ಹೆಚ್ಚಾಗಿ ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. 1994ರಲ್ಲಿ ಜನಿಸಿದ ಇವರು 2017ಲ್ಲಿ ಪೋಸ್ಟರ್ ಬಾಯ್ಸ್ ಮೂಲಕ ಸಿನಿರಂಗಕ್ಕೆ ಪ್ರವೇಶಿಸಿದರು. ಲೈಲಾ ಮಂಜ್ನು ಚಿತ್ರದಲ್ಲಿ ಇವರಿಗೆ ಮೊದಲ ಭಾರಿಗೆ ನಾಯಕಿ ಪಾತ್ರ ದೊರಕಿತ್ತು.
(5 / 6)
ಇದಾದ ಬಳಿಕ ಅನ್ವಿತ್ ದತ್ ಅವರ ಬುಲ್‌ಬುಲ್ ಚಿತ್ರದ ನಟನೆಯು ಸಿನಿವಿಮರ್ಶಕರ ಗಮನ ಸೆಳೆಯಿತು. ಕ್ಯೂಲಾ ಎಂಬ ಚಿತ್ರದಲ್ಲಿ 2022ರಲ್ಲಿ ನಟಿಸಿದರು. ಫಿಲ್ಮ್‌ಫೇರ್ ಒಟಿಟಿ ಅವಾರ್ಡ್ ಅನ್ನು ಈ ಸಿನಿಮಾದ ನಟನೆಗೆ ಪಡೆದರು.
ಇತರ ಗ್ಯಾಲರಿಗಳು