Madhuri Dixit: ರಾಜಕೀಯಕ್ಕೆ ಎಂಟ್ರಿ ನೀಡ್ತಾರ ಮಾಧುರಿ ದೀಕ್ಷಿತ್? ಪಾಲಿಟಿಕ್ಸ್ ಪ್ರವೇಶಿಸಿದ ಇತರೆ ಸಿನಿಮಾ ಕಲಾವಿದರ ಪರಿಚಯ
ಬಾಲಿವುಡ್‌ನ ಧಕ್ ಧಕ್ ಗರ್ಲ್ ಸಿನಿಮಾ ನಟಿ ಮಾಧುರಿ ದೀಕ್ಷಿತ್ ಶೀಘ್ರದಲ್ಲಿ ಚುನಾವಣೆ ಕಣಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಇವರು ದಿಲ್ ತೋ ಪಾಗಲ್ ಹೇ ಸೇರಿದಂತೆ ಹಲವು ಸಿನಿಮಾಗಳ ಮೂಲಕ ಜನಪ್ರಿಯತೆ ಪಡೆದಿದ್ದಾರೆ. ಮುಂಬೈನಿಂದ ಪಾಲಿಟಿಕ್ಸ್ ಪ್ರವೇಶಿಸಿದ ಇತರೆ ಸಿನಿಮಾ ಕಲಾವಿದರ ವಿವರ ಇಲ್ಲಿದೆ.
(1 / 6)
ಬಾಲಿವುಡ್ ಚಿತ್ರರಂಗದ 'ಧಕ್ ಧಕ್ ಗರ್ಲ್' ನಟಿ ಮಾಧುರಿ ದೀಕ್ಷಿತ್ ಶೀಘ್ರದಲ್ಲೇ ಚುನಾವಣೆಯಲ್ಲಿ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಈ ಕುರಿತು ಅವರಿನ್ನೂ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಕೇಳಿದ ಪ್ರಶ್ನೆಗೆ ಇಲ್ಲಿಯವರೆಗೆ ನಿರಾಕರಿಸುತ್ತ ಬಂದಿದ್ದಾರೆ. ಆದರೆ, ಮೂಲಗಳ ಪ್ರಕಾರ ಈ ಬಾರಿ ಇವರು ಚುಣಾವಣೆಗೆ ಸ್ಪರ್ಧಿಸಲಿದ್ದಾರಂತೆ.
(Instagram )(2 / 6)
ಸುನಿಲ್ ದತ್: ಇವರು ಬಾಲಿವುಡ್‌ನ ಪ್ರಸಿದ್ಧ ನಟ, ನಿರ್ಮಾಪಕ ಮತ್ತು ನಿರ್ದೇಶಕ. ಸುನಿಲ್ ದತ್ ಭಾರತೀಯ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 1984ರಲ್ಲಿ ಮುಂಬೈ ವಾಯುವ್ಯ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದರು. ಸುನಿಲ್ ದತ್ ಸತತ ಐದು ಬಾರಿ ಗೆಲುವು ಪಡೆದಿದ್ದಾರೆ.
(3 / 6)
ಮಹೇಶ್ ಮಂಜ್ರೇಕರ್: ಬರಹಗಾರ-ನಿರ್ದೇಶಕ-ನಿರ್ಮಾಪಕ ಮತ್ತು ನಟ ಮಹೇಶ್ ಮಂಜ್ರೇಕರ್ ಕೂಡ ಮುಂಬೈನಿಂದ ಸ್ಪರ್ಧಿಸಿದ್ದಾರೆ. ಮುಂಬೈ ವಾಯುವ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಸದ ಗುರುದಾಸ್ ಕಾಮತ್, ಶಿವಸೇನೆ ನಾಯಕ ಗಜಾನನ್ ಕೀರ್ತಿಕರ್, ಎಎಪಿಯ ಮಯಾಂಕ್ ಗಾಂಧಿ ಮತ್ತು ಎಂಎನ್ಎಸ್ ಚಲನಚಿತ್ರ ನಿರ್ದೇಶಕ ಮಹೇಶ್ ಮಂಜ್ರೇಕರ್ ನಡುವೆ ಚತುಷ್ಕೋನ ಸ್ಪರ್ಧೆ ಇತ್ತು.
(4 / 6)
ನಟಿ ಊರ್ಮಿಳಾ ಮಾತೋಂಡ್ಕರ್ ಕೂಡ ಕಾಂಗ್ರೆಸ್ ಸೇರಿದ್ದಾರೆ. ರಾಹುಲ್ ಗಾಂಧಿ ಅವರ ಉಪಸ್ಥಿತಿಯಲ್ಲಿ ಅವರ ಪದಗ್ರಹಣ ಸಮಾರಂಭ ನಡೆಯಿತು. ಊರ್ಮಿಳಾ ಮಾತೋಂಡ್ಕರ್ 2019 ರ ಲೋಕಸಭಾ ಚುನಾವಣೆಯಲ್ಲಿ ಮುಂಬೈ ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು.
(5 / 6)
ಗೋವಿಂದ ಅಹುಜಾ: ವಿರಾರ್ ಮೂಲದ ಬಾಲಿವುಡ್ ನಟ ಗೋವಿಂದ ಅಹುಜಾ ಅವರು ಉತ್ತರ ಮುಂಬೈ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಟಿಕೆಟ್ ನಲ್ಲಿ ಸ್ಪರ್ಧಿಸಿದ್ದರು.
ಇತರ ಗ್ಯಾಲರಿಗಳು