ರವೀನಾ ಟಂಡನ್ ಜತೆ ರಾಶಾ ವೈದ್ಯನಾಥ ಜ್ಯೋತಿರ್ಲಿಂಗ ದರ್ಶನ, ಅಂದದಲ್ಲಿ ಅಮ್ಮನ ಮೀರಿಸಿದ ಮಗಳು
- ನಟಿ ರವೀನಾ ಟಂಡನ್ ಮತ್ತು ಅವರ ಮಗಳು ರಾಶಾ ಟಂಡನ್ ಆಗಾಗ ತೀರ್ಥಯಾತ್ರೆ ಕೈಗೊಳ್ಳುತ್ತಾರೆ. ಇತ್ತೀಚೆಗೆ ಇವರಿಬ್ಬರು ಜಾರ್ಖಂಡ್ ನ ಬೈದ್ಯನಾಥ ಜ್ಯೋತಿರ್ಲಿಂಗ ದೇವಸ್ಥಾನಕ್ಕೆ ಪ್ರಯಾಣ ಬೆಳೆಸಿದರು. ಈ ಸಂದರ್ಭದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಅಮ್ಮ ಮಗಳು ಎನ್ನುವ ಬದಲು ಅಕ್ಕತಂಗಿಯಂತೆ ಇಬ್ಬರೂ ಸುಂದರವಾಗಿ ಕಾಣಿಸುತ್ತಿದ್ದಾರೆ.

(1 / 6)
ನಟಿ ರವೀನಾ ಟಂಡನ್ ಇತ್ತೀಚೆಗೆ ತಮ್ಮ ಮಗಳು ರಾಶಾ ಟಂಡನ್ ಜತೆ ಜಾರ್ಖಂಡ್‌ನ ಬೈದ್ಯನಾಥ ಜ್ಯೋತಿರ್ಲಿಂಗ ದೇವಸ್ಥಾನಕ್ಕೆ ಪ್ರಯಾಣ ಕೈಗೊಂಡರು. ಭಾರತದಲ್ಲಿರುವ ಹನ್ನೆರು ಪ್ರಮುಖ ಜೋತಿರ್ಲಿಂಗಗಳಲ್ಲಿ ಇದು ಒಂದಾಗಿದೆ. ಈ ಭೇಟಿಯ ಸಂದರ್ಭದ ಫೋಟೋಗಳನ್ನು ಇವರಿಬ್ಬರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
(2 / 6)
ರವೀನಾ ಟಂಡನ್ ಮತ್ತು ರಾಶಾ ಟಂಡನ್ ಅವರು ಭವ್ಯವಾದ ದೇವಾಲಯದ ಹಿನ್ನೆಲೆಯಲ್ಲಿ ನಿಂತು ಭಕ್ತಿಯಿಂದ ಪ್ರಾರ್ಥಿಸಿದ್ದಾರೆ. ಇನ್ನೊಂದು ಫೋಟೋದಲ್ಲಿ ಗರ್ಭಗುಡಿಯೊಳಗೆ ಭಕ್ತಿಯಿಂದ ಪ್ರಾರ್ಥಿಸುತ್ತಿದ್ದಾರೆ.
(3 / 6)
ಭಾರತದ ಹನ್ನೆರಡು ಜ್ಯೋತಿರ್ಲಿಂಗಕ್ಕೆ ಇವರು ಭೇಟಿ ನೀಡುವ ಸಂಕಲ್ಪ ಮಾಡಿದ್ದಾರೆ. ಈ ಹಿಂದೆ ಪುಣೆಯ ಭೀಮಾಶಂಕರ ದೇವಸ್ಥಾನ ಮತ್ತು ಮಹಾರಾಷ್ಟ್ರದ ನಾಸಿಕ್‌ನ ತ್ರಯಂಬಕೇಶ್ವರ ಶಿವ ದೇವಾಲಯಕ್ಕೆ ಭೇಟಿ ನೀಡಿದ್ದರು.
(4 / 6)
ಜನಪ್ರಿಯ ವೆಲ್ಕಮ್ ಫ್ರ್ಯಾಂಚೈಸ್‌ನಡಿಯಲ್ಲಿ ನಿರ್ಮಾಣವಾಗುತ್ತಿರುವ ಹಾಸ್ಯ-ನಾಟಕ ವೆಲ್ಕಮ್ 3 ನಲ್ಲಿ ರವೀನಾ ಟಂಡನ್ ನಟಿಸಲಿದ್ದಾರೆ. ಸದ್ಯ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್, ಸಂಜಯ್ ದತ್, ಅರ್ಷದ್ ವಾರ್ಸಿ, ದಿಶಾ ಪಟಾನಿ, ಲಾರಾ ದತ್ತಾ ಮತ್ತು ಪರೇಶ್ ರಾವಲ್ ನಟಿಸಿದ್ದಾರೆ.
(5 / 6)
ತನ್ನ ಆಧ್ಯಾತ್ಮಿಕ ಪ್ರಯಾಣದ ಜೊತೆಗೆ ರಾಶಾ ಟಂಡನ್ ಅವರು ಐತಿಹಾಸಿಕ ಡ್ರಾಮಾ ಸಿನಿಮಾ ಆಜಾದ್‌ನಲ್ಲಿ ನಟಿಸಲು ಸಿದ್ಧತೆ ನಡೆಸುತ್ತಿದ್ದಾರೆ.
ಇತರ ಗ್ಯಾಲರಿಗಳು