ಕನ್ನಡ ಸುದ್ದಿ  /  Photo Gallery  /  Bollywood Stars Kiara Advani And Siddharth Malhotra Wedding Preparation Update

Sidharth Kiara wedding: ರಾಜಸ್ಥಾನದಲ್ಲಿ ಮಂಟಪ ಬುಕ್‌ ಆಯ್ತು.. ಮದುವೆ ಖರೀದಿಯೂ ಮುಗೀತು..; ಸಿದ್ದಾರ್ಥ್-‌ ಕಿಯಾರಾ ಕಲ್ಯಾಣಕ್ಕೆ ದಿನಗಣನೆ

  • Sidharth Kiara wedding: ಬಾಲಿವುಡ್‌ ಲವ್‌ಬರ್ಡ್ಸ್‌ ಸಿದ್ಧಾರ್ಥ್‌ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಮದುವೆಗೆ ದಿನಗಣನೆ ಆರಂಭವಾಗಿದೆ. ಈವರೆಗೂ ಅಧಿಕೃತವಾಗಿ ಎಲ್ಲಿಯೂ ಹೇಳಿಕೊಳ್ಳದ ಈ ಜೋಡಿ ಸದ್ದಿಲ್ಲದೆ ರಾಜಸ್ಥಾನದಲ್ಲಿ ಮದುವೆಯಾಗಲು ನಿರ್ಧರಿಸಿದೆ. ಇಲ್ಲಿದೆ ನೋಡಿ ಈ ಜೋಡಿಯ ಮದುವೆ ಕುರಿತ ಅಪ್‌ಡೇಟ್‌ ಮಾಹಿತಿ..

ಬಾಲಿವುಡ್‌ ಜೋಡಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್‌ ಮಲ್ಹೋತ್ರಾ ಮದುವೆಯ ತಯಾರಿಗಳು ತೆರೆಮರೆಯಲ್ಲಿ ಜೋರಾಗಿಯೇ ಸಾಗುತ್ತಿವೆ.  
icon

(1 / 9)

ಫೆ. 4ರಿಂದಲೇ ಮದುವೆ ಕಾರ್ಯಗಳು ಆರಂಭವಾಗಲಿದ್ದು, ಫೆ. 6ರಂದು ರಾಜಸ್ಥಾನದ ಜೈಸಲ್ಮೇರ್‌ನ ಪ್ಯಾಲೆಸ್‌ ಸೂರ್ಯಗಢ ಕಲ್ಯಾಣ ಮಂಟಪದಲ್ಲಿ ಈ ಜೋಡಿ ಬಾಳ ಬಂಧನಕ್ಕೆ ಅಡಿ ಇಡಲಿದೆ.  
icon

(2 / 9)

ಸದ್ಯ ದೆಹಲಿಯಲ್ಲಿರುವ ನಿವಾಸಕ್ಕೆ ತೆರಳಿರುವ ಸಿದ್ದಾರ್ಥ್‌, ಕುಟುಂಬಸ್ಥರು ಮತ್ತು ಆಪ್ತ ಸ್ನೇಹಿತರ ಜತೆಗೆ ನೇರವಾಗಿ ಜೈಸಲ್ಮೇರ್‌ಗೆ ಆಗಮಿಸಲಿದ್ದಾರೆ. 
icon

(3 / 9)

ಈ ಮದುವೆ ಕಾರ್ಯಕ್ರಮದಲ್ಲಿ ಕೇವಲ 100ರಿಂದ 120 ಅತಿಥಿಗಳಷ್ಟೇ ಭಾಗವಹಿಸಲಿದ್ದಾರೆ. ಮದುವೆ ಪೂರ್ವ ಕಾರ್ಯಕ್ರಮಗಳೂ ಸಹ ಅಲ್ಲಿಯೇ ನಡೆಯಲಿದ್ದು, ಭದ್ರತೆ ದೃಷ್ಟಿಯಿಂದಲೂ ವಿಶೇಷ ನಿಗಾ ವಹಿಸಲಾಗಿದೆ.   
icon

(4 / 9)

ಆ ಪೈಕಿ ಫೆ. 4ರಿಂದ ಶುರುವಾಗುವ ಅರಿಶಿಣ ಶಾಸ್ತ್ರದಿಂದ ಹಿಡಿದು ಮೆಹೆಂದಿ, ಸಂಗೀತ್ ಕಾರ್ಯಕ್ರಮಕ್ಕೆ 40ಕ್ಕೂ ಅಧಿಕ ಮಂದಿ ವಿಮಾನದ ಮೂಲಕ ಜೈಸಲ್ಮೇರ್‌ ತಲುಪಲಿದ್ದಾರೆ.   
icon

(5 / 9)

ಬಂದ ಅತಿಥಿಗಳ ಸಲುವಾಗಿಯೇ 84 ಐಶಾರಾಮಿ ರೂಮ್‌ಗಳು ಬುಕ್‌ ಆಗಿವೆ. 70 ಐಷಾರಾಮಿ ಕಾರ್‌ಗಳೂ ಸಹ ಬುಕ್‌ ಆಗಿವೆ. BMWದಿಂದ ಹಿಡಿದು ಜಾಗ್ವಾರ್‌ ಮತ್ತು ಮರ್ಸಿಡೀಸ್‌ ಕಾರುಗಳೂ ಇವೆ.  
icon

(6 / 9)

ಮುಂಬೈ ಮೂಲದ ವೆಡ್ಡಿಂಗ್‌ ಪ್ಲಾನರ್‌ ಸಂಸ್ಥೆ ಈ ಮದುವೆ ಉಸ್ತುವಾರಿ ವಹಿಸಿಕೊಂಡಿದೆ. ಹೊಟೇಲ್‌ ಬುಕಿಂಗ್‌ನಿಂದ ಹಿಡಿದು, ಸೆಲೆಬ್ರಿಟಿಗಳ ಟ್ರಾನ್ಸ್‌ಪೋರ್ಟೇಷನ್‌ ಎಲ್ಲವೂ ಅವರ ಜವಾಬ್ದಾರಿ.  
icon

(7 / 9)

ಮದುವೆ ಬಳಿಕ ಮುಂಬೈನಲ್ಲಿ ಅದ್ದೂರಿ ರೆಸೆಪ್ಷನ್‌ ಕಾರ್ಯಕ್ರಮವನ್ನೂ ಈ ಜೋಡಿ ಆಯೋಜಿಸಿದೆ. 
icon

(8 / 9)

ಅಂದಹಾಗೆ, ಈ ಜೋಡಿಯ ಮದುವೆ ದೃಶ್ಯಾವಳಿಗಳನ್ನು ಒಟಿಟಿ ಸಂಸ್ಥೆಗೆ ನೀಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆಯಾದರೂ, ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. 
icon

(9 / 9)

ಇತರ ಗ್ಯಾಲರಿಗಳು