ʻಗದರ್ 2ʼ ಯಶಸ್ಸಿನ ಬಳಿಕ ʻಜಾಟ್ʼ ಸಿನಿಮಾ ಜತೆಗೆ ಆಗಮಿಸಿದ ಸನ್ನಿ ಡಿಯೋಲ್; ಪವರ್‌ಫುಲ್ ಟ್ರೇಲರ್ ಬಿಡುಗಡೆ
- Jaat Trailer: ಗದರ್ 2 ಮೂಲಕ ದೊಡ್ಡ ಮಟ್ಟದಲ್ಲಿ ಕಂಬ್ಯಾಕ್ ಮಾಡಿದ್ದರು ಬಾಲಿವುಡ್ ನಟ ಸನ್ನಿ ಡಿಯೋಲ್. ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಿದ್ದ ಆ ಸಿನಿಮಾ, ಸನ್ನಿಗೆ ಮರುಜೀವ ನೀಡಿತ್ತು. ಅದಾದ ಮೇಲೆ ಅವರ ಸಿನಿಮಾ ಯಾವುದು ಎಂಬ ಪ್ರಶ್ನೆಗೆ ಉತ್ತರ ಎಂಬಂತೆ ಜಾಟ್ ಸಿನಿಮಾ ಘೋಷಣೆ ಮಾಡಿದ್ದರು. ಇದೀಗ ಈ ಚಿತ್ರದ ಪವರ್‌ಫುಲ್ ಟ್ರೇಲರ್ ಬಿಡುಗಡೆ ಆಗಿದೆ.

(1 / 5)
ಸನ್ನಿ ಡಿಯೋಲ್ ನಾಯಕನಾಗಿ ನಟಿಸಿರುವ ಆಕ್ಷನ್ ಡ್ರಾಮಾ ಚಿತ್ರ 'ಜಾಟ್' ಬಿಡುಗಡೆಗೆ ರೆಡಿಯಾಗಿದೆ. ಚಿತ್ರದ ಬಹುನಿರೀಕ್ಷಿತ ಟ್ರೇಲರ್ ಅನ್ನು ಸಹ ಚಿತ್ರದ ತಯಾರಕರು ಬಿಡುಗಡೆ ಮಾಡಿದ್ದಾರೆ.
(2 / 5)
ಸನ್ನಿ ಡಿಯೋಲ್ ಮತ್ತೊಮ್ಮೆ ಪವರ್‌ಫುಲ್ ಆಕ್ಷನ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡರೆ, ರಣದೀಪ್ ಹೂಡಾ ಖಳನಾಯಕನಾಗಿದ್ದಾರೆ.
(3 / 5)
ಪಕ್ಕಾ ಕಮರ್ಷಿಯಲ್ ಕೋನದಲ್ಲಿ ಜಾಟ್ ಸಿನಿಮಾವನ್ನು ಅಬ್ಬರದ ಆಕ್ಷನ್ ಜತೆಗೆ ಕಟ್ಟಿಕೊಟ್ಟಿದ್ದಾರೆ ತೆಲುಗು ನಿರ್ದೇಶಕ ಗೋಪಿಚಂದ್ ಮಲಿನೇನಿ.
(4 / 5)
ಅಚ್ಚರಿಯ ವಿಚಾರ ಏನೆಂದರೆ, ತೆಲುಗಿನ ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆಗಳಾದ ಮೈತ್ರಿ ಮೂವಿ ಮೇಕರ್ಸ್ ಮತ್ತು ಪೀಪಲ್ ಮೀಡಿಯಾ ಫ್ಯಾಕ್ಟರಿ ಜಂಟಿಯಾಗಿ ಜಾಟ್ ಚಿತ್ರವನ್ನು ನಿರ್ಮಾಣ ಮಾಡಿವೆ.
ಇತರ ಗ್ಯಾಲರಿಗಳು