ಪ್ರಿಯಾಂಕಾ ಚೋಪ್ರಾ, ಆಲಿಯಾ ಭಟ್, ದೀಪಿಕಾ ಪಡುಕೋಣೆ... ಬಾಲಿವುಡ್‌ನ 10 ನಟಿಯರ ಮೊದಲ ಕ್ರಶ್ ವಿವರ ಬಹಿರಂಗ
ಗಂಡಿಗೆ ಹೆಣ್ಣಿನ ಮೇಲೆ, ಹೆಣ್ಣಿಗೆ ಗಂಡಿನ ಮೇಲೆ ಮೊದಲ ಬಾರಿ ಕ್ರಶ್ ಆಗುವುದು ಸಹಜ. ಸಾಮಾನ್ಯ ಜನರಂತೆ ನಟಿಯರಿಗೂ ಕ್ರಶ್ ಇರುತ್ತದೆ. ಬಾಲಿವುಡ್‌ನ ಖ್ಯಾತ ನಟಿಯರಿಗೂ ಯಾವುದೋ ನಟರ ಮೇಲೆ ಕ್ರಶ್ ಇತ್ತು. ಪ್ರಿಯಾಂಕಾ ಚೋಪ್ರಾ, ಆಲಿಯಾ ಭಟ್ ಸೇರಿದಂತೆ ಈ 10 ನಟಿಯರ ಮೊದಲ ಕ್ರಶ್ ಬಗ್ಗೆ ಇಲ್ಲಿದೆ ವಿವರ.
(1 / 10)
ಬಾಲಿವುಡ್ ನಟಿಯರು ವಿವಿಧ ಮಾಧ್ಯಮಗಳಿಗೆ ಬೇರೆ ಬೇರೆ ಸಮಯದಲ್ಲಿ ನೀಡಿದ ಸಂದರ್ಶನಗಳಲ್ಲಿ ತಮ್ಮ ಕ್ರಶ್ ಬಗ್ಗೆ ಮಾತನಾಡಿದ್ದಾರೆ. ಬಾಲಿವುಡ್‌ನ ಹತ್ತುಖ್ಯಾತ ನಟಿಯರ ಕ್ರಶ್‌ಗಳು ಯಾರು ಎಂದು ನೋಡೋಣ.
(2 / 10)
ಅನನ್ಯಾ ಪಾಂಡೆ: ಬ್ರೈಡ್ಸ್ ಟುಡೇಗೆ ನೀಡಿದ ಸಂದರ್ಶನದಲ್ಲಿ ಅನನ್ಯಾ ಪಾಂಡೆ ತಮ್ಮ ಮೊದಲ ಸೆಲೆಬ್ರಿಟಿ ಕ್ರಶ್ ಹೃತಿಕ್ ರೋಷನ್ ಎಂದು ಹೇಳಿದ್ದರು.
(3 / 10)
ಭೂಮಿ ಪೆಡ್ನೇಕರ್: ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಭೂಮಿ ಪೆಡ್ನೇಕರ್ ಅವರು ತಮ್ಮ ಮೊದಲ ಸೆಲೆಬ್ರಿಟಿ ಕ್ರಶ್ ಅಭಿಷೇಕ್ ಬಚ್ಚನ್ ಎಂದು ಹೇಳಿದ್ದರು. ಅಭಿಷೇಕ್ ಅವರ ವ್ಯಕ್ತಿತ್ವವನ್ನು ಅವರು ತುಂಬಾ ಇಷ್ಟಪಟ್ಟಿದ್ದರೆಂದು ಹೇಳಿದ್ದರು.
(4 / 10)
ತೃಪ್ತಿ ದಿಮ್ರಿ : ಇಂಡಿಯಾ ಟುಡೇಗೆ ನೀಡಿದ ಹಳೆಯ ಸಂದರ್ಶನವೊಂದರಲ್ಲಿ ತನ್ನ ಮೊದಲ ಕ್ರಶ್ ರಣಬೀರ್ ಕಪೂರ್ ಎಂದು ತೃಪ್ತಿ ದಿಮ್ರಿ ಹೇಳಿದ್ದರು. ರಣಬೀರ್ ಕಾರಣದಿಂದಾಗಿ 'ಯೇ ಜವಾನಿ ಹೈ ದಿವಾನಿ' ಚಿತ್ರವನ್ನು 10 ಕ್ಕೂ ಹೆಚ್ಚು ಬಾರಿ ನೋಡಿದ್ದೇನೆ ಎಂದು ಅವರು ಹೇಳಿದ್ದರು.
(5 / 10)
ಪರಿಣೀತಿ ಚೋಪ್ರಾ: ತಾನು ಬಾಲ್ಯದಲ್ಲಿ ಸೈಫ್ ಅಲಿ ಖಾನ್ ಅವರ ದೊಡ್ಡ ಅಭಿಮಾನಿಯಾಗಿದ್ದೆ. ಸೈಫ್ ಅವರ ಚಿತ್ರವಿರುವ ಚಿಪ್ಸ್ ಪ್ಯಾಕೆಟ್ಗಳನ್ನು ಸಂಗ್ರಹಿಸುತ್ತಿದ್ದೆ ಎಂದು ಪರಿಣೀತಿ ಚೋಪ್ರಾ ಹೇಳಿದ್ದರು.
(6 / 10)
ವಿದ್ಯಾ ಬಾಲನ್: ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ ವಿದ್ಯಾ ಬಾಲನ್ ಅವರು ಶಾರುಖ್ ಖಾನ್ ಅವರತ್ತ ತುಂಬಾ ಆಕರ್ಷಿತರಾಗಿದ್ದಾರೆ. ಅವರೊಂದಿಗೆ ರೊಮ್ಯಾಂಟಿಕ್ ಚಿತ್ರ ಮಾಡಲು ಬಯಸುತ್ತಾರೆ ಎಂದು ಬಹಳ ಹಿಂದೆಯೇ ಹೇಳಿದ್ದರು.
(7 / 10)
ರವೀನಾ ಟಂಡನ್: ಇಂಡಿಯನ್ ಎಕ್ಸ್ಪ್ರೆಸ್ ವರದಿಯ ಪ್ರಕಾರ ರವೀನಾ ಟಂಡನ್ ತನ್ನ ಹದಿಹರೆಯದ ವರ್ಷಗಳಲ್ಲಿ ಸಂಜಯ್ ದತ್ ಮೇಲೆ ಭಾರಿ ಕ್ರಶ್ ಹೊಂದಿದ್ದರಂತೆ. ಅವರ ಪೋಸ್ಟರ್‌ಗಳನ್ನು ಮನೆಯ ಗೋಡೆಯ ಮೇಲೆ ಅಂಟಿಸುತ್ತಿದ್ದರಂತೆ.
(8 / 10)
ಆಲಿಯಾ ಭಟ್: ಆಲಿಯಾ ಭಟ್ ಅವರು 10 ವರ್ಷದವಳಿದ್ದಾಗ ಶಾಹಿದ್ ಕಪೂರ್ ಅವರ ಮೇಲೆ ಕ್ರಶ್ ಹೊಂದಿದ್ದರು. ಆಗ ಅವರಿ 'ಇಷ್ಕ್ ವಿಶ್ಕ್' ಚಿತ್ರವನ್ನು ನೋಡಿದ್ದರು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು.
(9 / 10)
ದೀಪಿಕಾ ಪಡುಕೋಣೆ : ದೀಪಿಕಾ ತಾನು ಲಿಯೊನಾರ್ಡೊ ಡಿಕಾಪ್ರಿಯೊ ಅವರ ದೊಡ್ಡ ಅಭಿಮಾನಿ ಎಂದು ಹೇಳಿದ್ದರು. ತನ್ನ ಕೋಣೆಯಲ್ಲಿ ಆತನದ್ದೇ ಫೋಟೋಗಳಿದ್ದವು ಎಂದು ಹೇಳಿದ್ದರು.
(instagram)ಇತರ ಗ್ಯಾಲರಿಗಳು