ಬದ್ಲಾ, ಚೆಹರೆ ಸೇರಿದಂತೆ ಒಟಿಟಿಯಲ್ಲಿ ನೋಡಬಹುದಾದ ಬಿಗ್ ಬಿ ಅಮಿತಾಬ್ ಬಚ್ಚನ್ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳಿವು
ಸಿನಿಮಾಗಳಲ್ಲಿ ಕೆಲವರು ಲವ್ ಸ್ಟೋರಿ ಇಷ್ಟಪಟ್ಟರೆ, ಕೆಲವರು ಹಾರರ್ ಸಿನಿಮಾಗಳನ್ನು ನೋಡಲು ಬಯಸುತ್ತಾರೆ. ಇನ್ನೂ ಕೆಲವರು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳನ್ನು ನೋಡುತ್ತಾರೆ. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಇಂಟ್ರೆಸ್ಟಿಂಗ್ ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾಗಳು ಹೀಗಿವೆ.
(1 / 8)
ಒಂದು ವೇಳೆ ನೀವೂ ಕೂಡಾ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳನ್ನು ಇಷ್ಟಪಡುವವರಾಗಿದ್ದರೆ, ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಅಭಿಮಾನಿಯಾಗಿದ್ದರೆ ಇಂಟ್ರೆಸ್ಟಿಂಗ್ ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾಗಳ ಬಗ್ಗೆ ಇಲ್ಲಿ ಮಾಹಿತಿ ಇದೆ
(2 / 8)
ಬದ್ಲಾ ಸಿನಿಮಾ: ಅಮಿತಾಬ್ ಬಚ್ಚನ್ ಅಭಿನಯದ ಈ ಸಿನಿಮಾ 2019 ರಲ್ಲಿ ಬಿಡುಗಡೆ ಆಗಿತ್ತು. ಈ ಚಿತ್ರಕ್ಕೆ ಐಎಂಡಿಬಿ 7.7 ರೇಟಿಂಗ್ ಕೊಟ್ಟಿದೆ. ಈ ಸಿನಿಮಾವನ್ನು ನೆಟ್‌ಫ್ಲಿಕ್ಸ್‌ನಲ್ಲಿ ನೋಡಬಹುದು. ಚಿತ್ರದಲ್ಲಿ ಅಮಿತಾಬ್ ಜೊತೆ ತಾಪ್ಸಿ ಪನ್ನು, ಅಮೃತಾ ಸಿಂಗ್ ಹಾಗೂ ಇನ್ನಿತರರು ನಟಿಸಿದ್ದಾರೆ.
(3 / 8)
ಪಿಂಕ್ ಸಿನಿಮಾ: ಈ ಚಿತ್ರ 2016 ರಲ್ಲಿ ರಿಲೀಸ್ ಆಗಿತ್ತು. ಚಿತ್ರಕ್ಕೆ ಐಎಂಡಿಬಿ 8 ರೇಟಿಂಗ್ ಕೊಟ್ಟಿದೆ, ಈ ಚಿತ್ರ ಈಗ ಹಾಟ್‌ಸ್ಟಾರ್‌ನಲ್ಲಿ ಲಭ್ಯವಿದೆ. ಯುವಕರಿಂದ ಮೋಸ ಹೋದ ಯುವತಿಯರಿಗೆ ನ್ಯಾಯ ಕೊಡಿಸುವ ಲಾಯರ್ ಆಗಿ ಅಮಿತಾಬ್ ಬಚ್ಚನ್ ಈ ಚಿತ್ರದಲ್ಲಿ ನಟಿಸಿದ್ದಾರೆ.
(4 / 8)
ತೀನ್ ಸಿನಿಮಾ: 2016 ರಲ್ಲಿ ತೆರೆ ಕಂಡಿದ್ದ ತೀನ್ ಸಿನಿಮಾಗೆ ಐಎಂಡಿಬಿಯಲ್ಲಿ 7.2 ರೇಟಿಂಗ್ ಇದೆ. ಈ ಸಿನಿಮಾ ಈಗ ಸೋನಿ ಲಿವ್‌ನಲ್ಲಿ ನೋಡಬಹುದು. ಚಿತ್ರದಲ್ಲಿ ಅಮಿತಾಬ್ ಜೊತೆ ನವಾಜುದ್ದೀನ್ ಸಿದ್ದಿಕಿ, ವಿದ್ಯಾ ಬಾಲನ್ ಹಾಗೂ ಇನ್ನಿತರರು ನಟಿಸಿದ್ದಾರೆ.
(5 / 8)
ವಜೀರ್ ಸಿನಿಮಾ: ಐಎಂಡಿಬಿಯಲ್ಲಿ 7.1 ರೇಟಿಂಗ್ ಪಡೆದಿರುವ ವಜೀರ್ ಸಿನಿಮಾ 2016ರಲ್ಲಿ ತೆರೆ ಕಂಡಿತ್ತು. ನೀವು ಈ ಚಿತ್ರವನ್ನು ಸೋನಿ ಲಿವ್‌ನಲ್ಲಿ ನೋಡಬಹುದು. ಚಿತ್ರದಲ್ಲಿ ಫರ್ಹಾನ್ ಅಖ್ತರ್, ಅದಿತಿ ರಾವ್ ಹೈದರಿ, ಜಾನ್ ಅಬ್ರಾಹಂ ಹಾಗೂ ಇನ್ನಿತರರು ನಟಿಸಿದ್ದಾರೆ.
(6 / 8)
ಕಾಂಟೇ ಸಿನಿಮಾ: 2002ರಲ್ಲಿ ತೆರೆ ಕಂಡ ಕಾಂಟೇ ಸಿನಿಮಾವನ್ನು ಜಿಯೋದಲ್ಲಿ ನೋಡಬಹುದು, ಈ ಚಿತ್ರಕ್ಕೆ ಐಎಂಡಿಬಿ 6.6 ರೇಟಿಂಗ್ ಕೊಟ್ಟಿದೆ. ಚಿತ್ರದಲ್ಲಿ ಸಂಜಯ್ ದತ್, ಸುನಿಲ್ ಶೆಟ್ಟಿ, ಲಕಿ ಅಲಿ ಹಾಗೂ ಇನ್ನಿತರರು ಇದ್ದಾರೆ.
(7 / 8)
ಆಂಖೇ ಸಿನಿಮಾ: ಅಮಿತಾಬ್ ಬಚ್ಚನ್ ಜೊತೆ ಅಕ್ಷಯ್ ಕುಮಾರ್,ಅರ್ಜುನ್ ರಾಮ್‌ಪಾಲ್, ಸುಷ್ಮಿತಾ ಸೆನ್ ನಟಿಸಿರುವ ಈ ಸಿನಿಮಾ 2002ರಲ್ಲಿ ತೆರೆ ಕಂಡಿದೆ, ಇದಕ್ಕೆ ಐಎಂಡಿಬಿಯಲ್ಲಿ 7.4 ರೇಟಿಂಗ್ ಇದೆ. ಈ ಸಿನಿಮಾ ಪ್ರೈಂ ವಿಡಿಯೋದಲ್ಲಿ ಲಭ್ಯವಿದೆ
ಇತರ ಗ್ಯಾಲರಿಗಳು