ದೀಪಿಕಾ ಪಡುಕೋಣೆ, ಅಕ್ಷಯ್ ಕುಮಾರ್ ಸೇರಿದಂತೆ ಬಾಲಿವುಡ್‌ನಲ್ಲಿ ಕೆರಿಯರ್ ಆರಂಭಿಸುವ ಮುನ್ನ ಕ್ರೀಡಾಪಟುಗಳಾಗಿದ್ದ ತಾರೆಗಳಿವರು
Bollywood Celebrities: ಸಿನಿಮಾಗೆ ಬರುವ ಮುನ್ನ ಬಹಳಷ್ಟು ನಟ-ನಟಿಯರು ಒಂದಲ್ಲಾ ಒಂದು ಕೆಲಸ ಮಾಡಿರುತ್ತಾರೆ. ಕೆಲವರು ಕಂಪನಿಗಳಲ್ಲಿ ಕೆಲಸ ಮಾಡಿರುತ್ತಾರೆ. ಇನ್ನೂ ಕೆಲವರು ಕ್ರೀಡೆಯಲ್ಲಿ ತೊಡಗಿಸಿಕೊಂಡಿರುತ್ತಾರೆ.
(1 / 10)
ಬಾಲಿವುಡ್‌ನಲ್ಲಿ ಕೂಡಾ ಕೆಲವರು ನಟ-ನಟಿಯರು ನಟನೆಗೆ ಬರುವ ಮುನ್ನ ಕ್ರೀಡೆಯಲ್ಲಿ ಹೆಸರು ಮಾಡಿದ್ದರು. ಅದರಲ್ಲಿ ಕೆಲವರು ರಾಷ್ಟ್ರಮಟ್ಟದಲ್ಲೂ ಆಡಿದ್ದರು.
(instagram)(2 / 10)
ಬಾಲಿವುಡ್ ಕಿಲಾಡಿ ಆಟಗಾರ ಅಕ್ಷಯ್ ಕುಮಾರ್ ಮಾರ್ಷಲ್ ಆರ್ಟ್‌ನಲ್ಲಿ ಪರಿಣಿತರು. ಇದಲ್ಲದೆ ಟೇಕ್ವಾಂಡೋದಲ್ಲಿ ಬ್ಲಾಕ್ ಬೆಲ್ಟ್ ಕೂಡಾ ಪಡೆದಿದ್ದಾರೆ.
(instagram)(3 / 10)
ಸಿನಿಮಾಗೆ ಬರುವ ಮುನ್ನ ದೀಪಿಕಾ ಪಡುಕೋಣೆ ಬ್ಯಾಡ್ಮಿಂಟನ್ ಆಡಿದ್ದರು. ರಾಷ್ಟಮಟ್ಟದಲ್ಲೂ ಹೆಸರು ಮಾಡಿದ್ದರು. ಇವರ ತಂದೆ ಪ್ರಕಾಶ್ ಪಡುಕೋಣೆ ಕೂಡಾ ಖ್ಯಾತ ಬ್ಯಾಡ್ಮಿಂಟನ್ ಆಟಗಾರರು
(instagram)(4 / 10)
ಅಮೀರ್ ಖಾನ್ ಟೆನಿಸ್ ಆಟಗಾರನಾಗಿ ಗುರುತಿಸಿಕೊಂಡಿದ್ದರು. ಮಹಾರಾಷ್ಟ್ರದ ರಾಜ್ಯ ಚಾಂಪಿಯನ್‌ಶಿಪ್ ಆಡಿದ್ದಾರೆ.
(instagram)(5 / 10)
ರಾಹುಲ್ ಬೋಸ್ ಉತ್ತಮ ನಟ ಮಾತ್ರವಲ್ಲ, ರಗ್ಬಿ ಆಟಗಾರ ಕೂಡಾ. ಅವರು ರಗ್ಬಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. 2009 ರಲ್ಲಿ ರಗ್ಬಿ ಆಡುವುದನ್ನು ನಿಲ್ಲಿಸಿದರು.
(instagram)(6 / 10)
ನೀತು ಚಂದ್ರ ಟೇಕ್ವಾಂಡೋದಲ್ಲಿ 5 ಬಾರಿ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದಾರೆ. ಅಲ್ಲದೆ, ಬಿಹಾರದ ಬೇಸ್‌ಬಾಲ್, ಸಾಫ್ಟ್‌ಬಾಲ್, ನೆಟ್‌ಬಾಲ್ ಆಡಿದ್ದಾರೆ ಮತ್ತು ಬಿಹಾರ ಸರ್ಕಾರದ ಖೇಲ್ ಸಮ್ಮಾನ್ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ.
(instagram)(7 / 10)
ಸಾಕಿಬ್ ಸಲೀಂ, ಚಲನಚಿತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿಸುವ ಮೊದಲು ರಾಜ್ಯ ಮಟ್ಟದ ಕ್ರಿಕೆಟ್ ಆಟಗಾರನಾಗಿ ಗುರುತಿಸಿಕೊಂಡಿದ್ದರು.
(instagram)(9 / 10)
ಘೂಮರ್ ಚಿತ್ರದಲ್ಲಿ ನಟಿಸಿರುವ ಸೈಯಾಮಿ ಖೇರ್, ಅಥ್ಲೀಟ್ ಆಗಿ ಗುರುತಿಸಿಕೊಂಡಿದ್ದಾರೆ. ಬ್ಯಾಡ್ಮಿಂಟನ್ ಮತ್ತು ಟೆನಿಸ್ ಕೂಡಾ ಆಡಿದ್ದಾರೆ.
(instagram)ಇತರ ಗ್ಯಾಲರಿಗಳು