ಕ್ಯಾನ್ಸರ್ ಗೆದ್ದ ನಟಿ ಈಗ ಗೃಹಲಕ್ಷ್ಮೀ; ಹೊಸ ಫೋಟೋಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಹೀನಾ ಖಾನ್
ಕಳೆದ ವರ್ಷ ಹಿಂದಿ ಕಿರುತೆರೆ ನಟಿ ಹೀನಾ ಖಾನ್ ಭಾರೀ ಸುದ್ದಿಯಲ್ಲಿದ್ದರು. ತಾವು ಮೂರನೇ ಹಂತದ ಕ್ಯಾನ್ಸರ್‌ನಿಂದ ಬಳಲುತ್ತಿರುವುದಾಗಿ ಹೀನಾ ಖಾನ್ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಈ ವಿಚಾರ ಕೇಳಿ ಅಭಿಮಾನಿಗ ಹೃದಯ ಒಡೆದಿತ್ತು.
(1 / 7)
ಹೀನಾ ಖಾನ್, ಕ್ಯಾನ್ಸರ್‌ನಿಂದ ಬಳಲುತ್ತಿದ್ದರೂ ಉತ್ಸಾಹದ ಚಿಲುಮೆಯಂತೇ ಇದ್ದರು, ವಿಗ್ ಧರಿಸಿ ಶೂಟಿಂಗ್‌ಗೆ ಹಾಜರಾಗುತ್ತಿದ್ದರು. ನನ್ನ ಈ ಧೈರ್ಯ, ಇತರ ಮಹಿಳೆಯರಿಗೆ ಯಾವಾಗಲೂ ಸ್ಫೂರ್ತಿಯಾಗಬೇಕು ಎಂದು ಹೀನಾ ಹೇಳುತ್ತಲೇ ಇದ್ದರು. ಈಗ ಈ ನಟಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ. ಮೊದಲಿನಂತೆ ಅವರು ಚಿತ್ರೀಕರಣದಲ್ಲಿ ಕೂಡಾ ಭಾಗಿಯಾಗುತ್ತಿದ್ದಾರೆ.
(PC: Hina Khan Instagram)(2 / 7)
ಹೀನಾ ಈಗ ಗೃಹಲಕ್ಷ್ಮೀ ಎಂಬ ವೆಬ್ ಸರಣಿಯಲ್ಲಿ ನಟಿಸುತ್ತಿದ್ದು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸೀರಿಸ್‌ನ ಕೆಲವೊಂದು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಹೀನಾ ಖಾನ್, ಸರಳವಾದ ಸೀರೆ ಧರಿಸಿ ನಿಜವಾಗಲೂ ಗೃಹಿಣಿಯಂತೆ ಕಾಣುತ್ತಿದ್ದಾರೆ.
(3 / 7)
ನೀವು ಇನ್ನೂ ನಾನು ನಟಿಸಿರುವ ಗೃಹಲಕ್ಷ್ಮೀ ವೆಬ್ ಸರಣಿ ನೋಡಿಲ್ಲವೇ? ಹಾಗಿದ್ದರೆ EPIC ON ಡೌನ್‌ಲೋಡ್ ಮಾಡಿಕೊಂಡು ಅದರಲ್ಲಿ ನೋಡಿ ಎಂದು ಹೀನಾಖಾನ್, ತಮ್ಮ ವೆಬ್ ಸೀರಿಸ್ ಪ್ರಮೋಟ್ ಮಾಡಿದ್ದಾರೆ.
(4 / 7)
ಹಿಂದಿ ಕಿರುತೆರೆಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿ ಹೀನಾ ಖಾನ್ ಗುರುತಿಸಿಕೊಂಡಿದ್ದಾರೆ. ಯೇ ರಿಶ್ತಾ ಕ್ಯಾ ಕೆಹತಾ ಹೈ ಧಾರಾವಾಹಿಯ ಅಕ್ಷರಾ ಪಾತ್ರದ ಮೂಲಕ ಹಿನಾ ಖಾನ್ ಪ್ರತಿ ವೀಕ್ಷಕರ ಮನಸ್ಸಿನಲ್ಲೂ ವಿಶೇಷ ಗುರುತನ್ನು ಸೃಷ್ಟಿಸಿಕೊಂಡಿದ್ದಾರೆ.
(5 / 7)
ಗೃಹಲಕ್ಷ್ಮೀ ವೆಬ್ ಸಿರೀಸ್‌ನಲ್ಲಿ 7 ಎಪಿಸೋಡ್‌ಗಳಿದ್ದು ರುಮಾನ್ ಕಿದ್ವಾ ನಿರ್ದೇಶನ ಮಾಡಿದ್ದಾರೆ. ಹೀನಾ ಖಾನ್ ಜೊತೆ ಚಂಕಿ ಪಾಂಡೆ, ರಾಹುಲ್ ದೇವ್, ಹರೀಶ್ ಹಾಗೂ ಇನ್ನಿತರರು ನಟಿಸಿದ್ದಾರೆ.
(6 / 7)
ಗೃಹಲಕ್ಷ್ಮೀ ವೆಬ್ ಸೀರಿಸ್,ವೀಕ್ಷಕರಿಗೆ ಬಹಳ ಮೆಚ್ಚುಗೆಯಾಗಿದೆ. ಇದಕ್ಕೂ ಮುನ್ನ ಹೀನಾ ಖಾನ್, ಡ್ಯಾಮೇಜ್ಡ್, ಸೆವೆನ್ ಒನ್ ವೆಬ್ ಸೀರಿಸ್‌ಗಳಲ್ಲಿ ನಟಿಸಿದ್ದಾರೆ. ಧಾರಾವಾಹಿಗಳ ಜೊತೆ ಸಿನಿಮಾಗಳಲ್ಲೂ ನಟಿಸಿದ್ದಾರೆ.
ಇತರ ಗ್ಯಾಲರಿಗಳು