2010ರಲ್ಲಿ ಬಿಡುಗಡೆಯಾದ ಈ ಸಿನಿಮಾ ಹಲವು ದೇಶಗಳಲ್ಲಿ ಬ್ಯಾನ್ ಆಗಿದೆ, ಎದೆ ನಡುಗಿಸುವ ದೃಶ್ಯಗಳಿರುವ ವಿವಾದಾತ್ಮಕ ಚಿತ್ರವಿದು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  2010ರಲ್ಲಿ ಬಿಡುಗಡೆಯಾದ ಈ ಸಿನಿಮಾ ಹಲವು ದೇಶಗಳಲ್ಲಿ ಬ್ಯಾನ್ ಆಗಿದೆ, ಎದೆ ನಡುಗಿಸುವ ದೃಶ್ಯಗಳಿರುವ ವಿವಾದಾತ್ಮಕ ಚಿತ್ರವಿದು

2010ರಲ್ಲಿ ಬಿಡುಗಡೆಯಾದ ಈ ಸಿನಿಮಾ ಹಲವು ದೇಶಗಳಲ್ಲಿ ಬ್ಯಾನ್ ಆಗಿದೆ, ಎದೆ ನಡುಗಿಸುವ ದೃಶ್ಯಗಳಿರುವ ವಿವಾದಾತ್ಮಕ ಚಿತ್ರವಿದು

  • 2010ರಲ್ಲಿ ಬಿಡುಗಡೆಯಾದ ಈ ಹಾಲಿವುಡ್ ಸಿನಿಮಾವನ್ನು ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಬ್ಯಾನ್ ಮಾಡಲಾಗಿತ್ತು. ಇದೊಂದು ಕ್ರೈಮ್ ಥ್ರಿಲ್ಲರ್ ಸಿನಿಮಾವಾಗಿದ್ದು, ಭಯಾನಕ ದೃಶ್ಯಗಳನ್ನು ಹೊಂದಿರುವ ಕಾರಣಕ್ಕೆ ಪ್ರದರ್ಶನ ರದ್ದು ಮಾಡಲಾಗಿತ್ತು ಎನ್ನಲಾಗುತ್ತದೆ.

ಹಾಲಿವುಡ್‌ನಲ್ಲಿ ಸಾಕಷ್ಟು ಹಾರರ್‌, ಕ್ರೈ ಥ್ರಿಲ್ಲರ್ ಸಿನಿಮಾಗಳು ಬಿಡುಗಡೆಯಾಗುತ್ತವೆ. ಈ ಸಿನಿಮಾಗಳು ಒಂದಕ್ಕಿಂತ ಒಂದು ರೋಚಕ ಕಥಾ ಹಿನ್ನೆಲೆಯನ್ನು ಹೊಂದಿರುತ್ತವೆ. ಕೆಲವು ನೈಜ ಘಟನೆ ಆಧಾರಿತ ಸಿನಿಮಾಗಳೂ ಇರುತ್ತವೆ. 2010ರಲ್ಲಿ ಬಿಡುಗಡೆಯಾದ ಈ ಹಾಲಿವುಡ್ ಸಿನಿಮಾವನ್ನು ಹಲವು ದೇಶಗಳಲ್ಲಿ ಬ್ಯಾನ್ ಮಾಡಲಾಗಿತ್ತು. ಹಾಗಾದರೆ ಯಾವುದು ಈ ಸಿನಿಮಾ ನೋಡಿ.
icon

(1 / 9)

ಈ ಚಿತ್ರದಲ್ಲಿ ಜನರ ಎದೆ ನಡುಗುವಂತೆ ಮಾಡುವ ಹಲವು ಭಯಾನಕ ದೃಶ್ಯಗಳಿದ್ದವು. ಇದನ್ನು ಅತ್ಯಂತ ಭಯ ಹುಟ್ಟಿಸುವ ಸಿನಿಮಾ ಎಂದು ಕೂಡ ಕರೆಯಲಾಗಿತ್ತು. ಇದರಲ್ಲಿ ಖ್ಯಾತ ಹಾಲಿವುಡ್ ನಟಿ ಸಾರಾ ಬಟ್ಲರ್ ಮುಖ್ಯಪಾತ್ರದಲ್ಲಿ ನಟಿಸಿದ್ದರು.
icon

(2 / 9)

ಈ ಚಿತ್ರದ ಹೆಸರು ಐ ಸ್ಪಿಟ್ ಆನ್ ಯುವರ್ ಗ್ರೇವ್ (2010 ಫಿಲ್ಮಂ). ಈ ಚಿತ್ರಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿ ಆರ್ ಪ್ರಮಾಣ ಪತ್ರ ನೀಡಿತ್ತು. ಅಂದರೆ ನಿರ್ಬಂಧಿತ ಪ್ರಮಾಣ ಪತ್ರ. ಸ್ಟೀವನ್ ಆರ್. ಮನ್ರೋ  ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದರು.
icon

(3 / 9)

ಈ ಚಿತ್ರದಲ್ಲಿ ಹಲವು ನಗ್ನ, ಹಿಂಸಾತ್ಮಾಕ ದೃಶ್ಯಗಳಿವೆ. ಕೆಲವು ದೃಶ್ಯಗಳನ್ನು ನೋಡಿದರೆ ಖಂಡಿತ ತಲೆ ತಿರುಗತ್ತೆ, ಎದೆ ನಡುಗುತ್ತೆ. ಆ ಕಾರಣಕ್ಕೆ ಈ ಸಿನಿಮಾವನ್ನು ಹಲವು ದೇಶಗಳಲ್ಲಿ ಬ್ಯಾನ್ ಮಾಡಲಾಯಿತು. ಭಾರತದಲ್ಲೂ ಕೂಡ ಈ ಸಿನಿಮಾವನ್ನು ಬ್ಯಾನ್ ಮಾಡಲಾಗಿತ್ತು.
icon

(4 / 9)

ಮಾಧ್ಯಮ ವರದಿಗಳ ಪ್ರಕಾರ ಭಾರತದ ಜೊತೆಗೆ ಐರ್ಲೆಂಡ್, ಕೆನಡಾ, ಪಶ್ಚಿಮ ಜರ್ಮನಿ, ಐಸ್ಲ್ಯಾಂಡ್, ನಾರ್ವೆ ಮತ್ತು ಆಸ್ಟ್ರೇಲಿಯಾದಲ್ಲಿಯೂ ಈ ಚಿತ್ರವನ್ನು ನಿಷೇಧಿಸಲಾಗಿದೆ. ಚಿತ್ರದಲ್ಲಿ ನೋಡುತ್ತಿರುವಂತೆ ಇಂತಹ ಸಾಕಷ್ಟು ಹಿಂಸಾತ್ಮಕ ದೃಶ್ಯಗಳನ್ನು ಒಳಗೊಂಡಿದೆ ಈ ಚಿತ್ರ.
icon

(5 / 9)

ಈ ಚಿತ್ರದ ಕಥೆಯು ಒಬ್ಬ ಲೇಖಕಿಯ ಕುರಿತಾದದ್ದು. ಆ ಲೇಖಕಿ ಒಬ್ಬಳೇ ಅರಣ್ಯಕ್ಕೆ ಹೋಗುತ್ತಾಳೆ. ಆಕೆ ಒಂಟಿಯಾಗಿ ಇರುವುದನ್ನು ಕಂಡ ಒಂದು ಗುಂಪು ಆಕೆಯ ಮೇಲೆ ಭೀಕರ ಅತ್ಯಾಚಾರ ಮಾಡುತ್ತದೆ.
icon

(6 / 9)

ನಂತರ ಆ ಹುಡುಗಿ ತನ್ನ ಮೇಲೆ ಅತ್ಯಾಚಾರ ಮಾಡಿದವರ ಮೇಲೆ ಹೇಗೆ ಸೇಡು ತೀರಿಸಿಕೊಳ್ಳುತ್ತಾಳೆ ಎಂಬುದರ ಕುರಿತಾಗಿದೆ ಚಿತ್ರ. ಚಿತ್ರದಲ್ಲಿನ ಅತ್ಯಾಚಾರದ ದೃಶ್ಯವು ಅತ್ಯಂತ ಭಯಾನಕವಾಗಿತ್ತು ಮತ್ತು ಹುಡುಗಿಯ ಸೇಡಿನ ದೃಶ್ಯವು ಜನರನ್ನು ಬೆಚ್ಚಿಬೀಳಿಸಿತು.
icon

(7 / 9)

ಈ ಚಿತ್ರಕ್ಕೆ ಐಎಂಡಿಬಿ 6.2 ರೇಟಿಂಗ್ ನೀಡಿದೆ. ಇದು 108 ನಿಮಿಷಗಳ ಸಿನಿಮಾವಾಗಿದ್ದು, ಇದರಲ್ಲಿ ಬಹುತೇಕ ಭೀಕರ ದೃಶ್ಯಗಳಿವೆ.
icon

(8 / 9)

ಇದು 1978ರಲ್ಲಿ ಬಿಡುಗಡೆಯಾದ ಐ ಸ್ಪಿಟ್ ಆನ್ ಯುವರ್ ಗ್ರೇವ್ ಎನ್ನುವ ಅದೇ ಹೆಸರಿನ ಸಿನಿಮಾದ ರಿಮೇಕ್ ಆಗಿದೆ. ಈ ಚಿತ್ರ ಡೇ ಆಫ್ ದಿ ವುಮನ್ ಎನ್ನುವ ಹೆಸರು ಕೂಡ ಇತ್ತು. 2013 ಹಾಗೂ 2015ರಲ್ಲಿ ಈ ಚಿತ್ರದ ಸೀಕ್ವೆಲ್ ಕೂಡ ಬಂದಿತ್ತು.
icon

(9 / 9)

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು