ಆತ್ಮಚರಿತ್ರೆ ಬರೆಯುವ ಮೂಲಕ ತಮ್ಮ ಬದುಕಿನ ಪುಟಗಳನ್ನು ತೆರೆದಿಟ್ಟ ಬಾಲಿವುಡ್ ಸೆಲೆಬ್ರಿಟಿಗಳು
- Bollywood Actors Autobiography: ಸೆಲೆಬ್ರಿಟಿಗಳಿಗೂ ಜೀವನದಲ್ಲಿ ಹೋರಾಟ, ಸಂಕಷ್ಟಗಳು ತಪ್ಪಿದ್ದಲ್ಲ. ಅವರು ಒಂದು ಸ್ಥಾನಕ್ಕೆ ಬರಬೇಕು ಎಂದರೆ ಸಾಕಷ್ಟು ಶ್ರಮ ಪಟ್ಟಿರುತ್ತಾರೆ. ಬದುಕಿನಲ್ಲಿ ಯಶಸ್ಸಿನ ಮೆಟ್ಟಿಲು ಹತ್ತಲು ತಾವು ನಡೆದು ಬಂದ ಹಾದಿಯನ್ನು ಆತ್ಮಚರಿತ್ರೆ ಬರೆಯುವ ಮೂಲಕ ತಿಳಿಸಿದ ಬಾಲಿವುಡ್ ಸೆಲೆಬ್ರಿಟಿಗಳು.
- Bollywood Actors Autobiography: ಸೆಲೆಬ್ರಿಟಿಗಳಿಗೂ ಜೀವನದಲ್ಲಿ ಹೋರಾಟ, ಸಂಕಷ್ಟಗಳು ತಪ್ಪಿದ್ದಲ್ಲ. ಅವರು ಒಂದು ಸ್ಥಾನಕ್ಕೆ ಬರಬೇಕು ಎಂದರೆ ಸಾಕಷ್ಟು ಶ್ರಮ ಪಟ್ಟಿರುತ್ತಾರೆ. ಬದುಕಿನಲ್ಲಿ ಯಶಸ್ಸಿನ ಮೆಟ್ಟಿಲು ಹತ್ತಲು ತಾವು ನಡೆದು ಬಂದ ಹಾದಿಯನ್ನು ಆತ್ಮಚರಿತ್ರೆ ಬರೆಯುವ ಮೂಲಕ ತಿಳಿಸಿದ ಬಾಲಿವುಡ್ ಸೆಲೆಬ್ರಿಟಿಗಳು.
(1 / 11)
ಹಲವು ಬಾಲಿವುಡ್ ನಟ–ನಟಿಯರು ಆತ್ಮಚರಿತ್ರೆ ಬರೆಯುವ ಮೂಲಕ ತಮ್ಮ ಬದುಕಿನ ಪುಟಗಳನ್ನು ಬಿಚ್ಚಿಟ್ಟಿದ್ದಾರೆ. ಅವರು ಬರೆದ ಪುಸ್ತಕಗಳನ್ನು ನಾವು ಕೂಡ ಖರೀದಿ ಮಾಡಿ ಓದಬಹುದು. ಹಾಗಾದರೆ ಯಾವೆಲ್ಲಾ ಬಾಲಿವುಡ್ ಸೆಲೆಬ್ರಿಟಿಗಳು ಆತ್ಮಚರಿತ್ರೆ ಬರೆದಿದ್ದಾರೆ, ಅವರ ಪುಸ್ತಕದ ಹೆಸರೇನು ಎಂಬುದನ್ನು ನೋಡೋಣ.
(2 / 11)
ಹಿರಿಯ ನಟ ನಾಸಿರುದ್ದೀನ್ ಶಾ ತಮ್ಮ ಆತ್ಮಚರಿತ್ರೆ ‘ಆಂಡ್ ದೆನ್ ಒನ್ ಡೇ‘ ತಮ್ಮ ಬದುಕಿಗೆ ಸಂಬಂಧಿಸಿದ ಹಲವು ಆಘಾತಕಾರಿ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.
(3 / 11)
ರಿಷಿ ಕಪೂರ್ ತಮ್ಮ ಜೀವನಚರಿತ್ರೆ ‘ಖುಲ್ಲಮ್ ಖುಲ್ಲಾ: ರಿಷಿ ಕಪೂರ್ ಅನ್‌ಸೆನ್ಸಾರ್ಡ್‘ ನಲ್ಲಿ ತಮ್ಮ ಕುರಿತ ಅನೇಕ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.
(4 / 11)
ಅನುಪಮ್ ಖೇರ್ ಅವರ ಆತ್ಮಚರಿತ್ರೆಯ ಹೆಸರು ‘ಲೆಸನ್ಸ್ ಲೈಫ್ ಟಾಟ್ ಮಿ ಅನ್‌ನೋಯಿಂಗ್ಲಿ‘. ಅವರು ಈ ಪುಸ್ತಕದಲ್ಲಿ ತಮ್ಮ ಜೀವನ ಅನುಭವಗಳನ್ನು ಹಂಚಿಕೊಂಡಿದ್ದಾರೆ.
(5 / 11)
ದಿಲೀಪ್ ಕುಮಾರ್ ಅವರ ಆತ್ಮಚರಿತ್ರೆಯ ಹೆಸರು ‘ದಿಲೀಪ್ ಕುಮಾರ್: ದಿ ಸಬ್‌ಸ್ಟೆನ್ಸ್ ಅಂಡ್ ದಿ ಶ್ಯಾಡೋ‘. ಇದನ್ನು ಉದಯ ತಾರಾ ನಾಯರ್ ಬರೆದಿದ್ದಾರೆ.
(6 / 11)
ಟ್ವಿಂಕಲ್ ಖನ್ನಾ ಅವರ ಆತ್ಮಚರಿತ್ರೆಯ ಹೆಸರು ‘ಮಿಸೆಸ್ ಫನ್ನಿಬೋನ್ಸ್‘. ಇದರಲ್ಲಿ ಅವರು ತಮ್ಮ ಜೀವನ ಮತ್ತು ವೃತ್ತಿಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಹೇಳಿದ್ದಾರೆ.
(7 / 11)
ಪ್ರಿಯಾಂಕಾ ಚೋಪ್ರಾ ತಮ್ಮ ಆತ್ಮಚರಿತ್ರೆ ‘ಅನ್‌ಫಿನಿಶ್ಡ್‘ ಪುಸ್ತಕದಲ್ಲಿ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಕುರಿತ ಹಲವು ವಿಚಾರ ಬಹಿರಂಗಪಡಿಸಿದ್ದಾರೆ. ಈ ಪುಸ್ತಕದ ಮೂಲಕ ಪ್ರಿಯಾಂಕಾ ತನ್ನ ಜೀವನದ ಸತ್ಯವನ್ನು ಎಲ್ಲರ ಮುಂದೆ ತೆರೆದಿಡಲು ಪ್ರಯತ್ನಿಸಿದ್ದಾರೆ.
(instagram)(8 / 11)
ಕರಣ್ ಜೋಹರ್ ತಮ್ಮ ಆತ್ಮಚರಿತ್ರೆ ‘ಆನ್ ಅನ್‌ಸೂಟಬಲ್ ಬಾಯ್‘ನಲ್ಲಿ ತಮ್ಮ ಜೀವನಕ್ಕೆ ಸಂಬಂಧಿಸಿದ ಹಲವು ಅಂಶಗಳನ್ನು ಹಂಚಿಕೊಂಡಿದ್ದಾರೆ.
(instagram)(9 / 11)
ಕಬೀರ್ ಬೇಡಿ ತಮ್ಮ ಆತ್ಮಚರಿತ್ರೆ ‘ಸ್ಟೋರಿಸ್ ಐ ಮಸ್ಟ್ ಟೆಲ್: ದಿ ಇಮೋಷನಲ್ ಲೈಫ್ ಆಫ್ ಆನ್ ಆ್ಯಕ್ಟರ್‘ ನಲ್ಲಿ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
(10 / 11)
ದೀಪ್ತಿ ನವಲ್ ಹಿಂದಿ ಚಿತ್ರರಂಗದ ಅನೇಕ ಅತ್ಯುತ್ತಮ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ದೀಪ್ತಿ ನವಲ್ ಒಬ್ಬ ನಟಿಯಲ್ಲದೆ, ಬರಹಗಾರ್ತಿಯೂ ಹೌದು. ಅವರ ಆತ್ಮಚರಿತ್ರೆಯ ಹೆಸರು ‘ಎ ಕಂಟ್ರಿ ಕಾಲ್ಡ್ ಚೈಲ್ಡ್ ಹುಡ್‘.
ಇತರ ಗ್ಯಾಲರಿಗಳು