ಐಶ್ವರ್ಯಾ ರೈ ಅದ್ಭುತ ಭಾಷಣ ಮಾಡುವಾಗ ಜಯಾ ಬಚ್ಚನ್ ಹೀಗೆ ಮಾಡಬಹುದೇ? ಮ್ಯಾನರ್ಸ್ ಇಲ್ಲ ಎಂದು ಬೈದ ನೆಟ್ಟಿಗರು
ಸೋಷಿಯಲ್ ಮೀಡಿಯಾದಲ್ಲಿ ಐಶ್ವರ್ಯಾ ರೈಗೆ ಸಂಬಂಧಪಟ್ಟ ಹಳೆಯ ವಿಡಿಯೋವೊಂದು ಮತ್ತೆ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ನಟಿ ಐಶ್ವರ್ಯಾ ರೈ ಅದ್ಭುತವಾಗಿ ಭಾಷಣ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಜಯಾ ಬಚ್ಚನ್ ಮತ್ತು ಪ್ರೀತಿ ಜಿಂಟಾರ ವರ್ತನೆ ನೆಟ್ಟಿಗರ ಕೋಪಕ್ಕೆ ಕಾರಣವಾಗಿದೆ.
(1 / 11)
ಸೋಷಿಯಲ್ ಮೀಡಿಯಾದಲ್ಲಿ ತಮ್ಮ ನೆಚ್ಚಿನ ನಟಿಯರ ಕುರಿತು ಅಭಿಮಾನಿಗಳು ಆಗಾಗ ಹಳೆಯ ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಇದೀಗ 2003ರ ಫಿಲ್ಮ್ ಫೇರ್ ಪ್ರಶಸ್ತಿಗೆ ಸಂಬಂಧಪಟ್ಟ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲಿ ಐಶ್ವರ್ಯಾ ರೈ ಅದ್ಭುತವಾಗಿ ಭಾಷಣ ಮಾಡುತ್ತಿದ್ದಾರೆ. ಪಕ್ಕದಲ್ಲಿ ನಿಂತ ಪ್ರೀತಿ ಜಿಂಟಾ ಮತ್ತು ಜಯಾ ಬಚ್ಚನ್ ಕೀಟಲೆ ಮಾಡುತ್ತಾ, ನಗುತ್ತಾ ಇದ್ದಾರೆ.
(2 / 11)
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ, ಶಾರೂಖ್ ಖಾನ್ ನಟನೆಯ ದೇವದಾಸ್ ಸಿನಿಮಾದಲ್ಲಿ ನಟಿಸಿರುವ ಐಶ್ವರ್ಯಾ ರೈಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರಕಿತ್ತು. ಈ ಸಂದರ್ಭದಲ್ಲಿ ಐಶ್ವರ್ಯಾ ರೈ ಅದ್ಭುತವಾಗಿ ಭಾಷಣ ಮಾಡಿದ್ದಾರೆ. ಈ ಕಾರ್ಯಕ್ರಮದ ವಿಡಿಯೋ ವೈರಲ್ ಆಗಿದೆ.
(3 / 11)
"ಈ ಪ್ರಶಸ್ತಿ ಇಂದು ನಾನು ಪಡೆಯಲು ಕಾರಣರಾದ ಎಲ್ಲರಿಗೂ ಧನ್ಯವಾದಗಳು. ಇದು ನಿಜಕ್ಕೂ ಅದ್ಭುತ ಗೌರವ. ಸಿನಿಮಾ ಉದ್ಯಮಕ್ಕೆ ಮೊದಲಿಗೆ ಧನ್ಯವಾದ. ನಿಮ್ಮ ಪ್ರೀತಿಗೆ ಶರಣು. ಈ ಕ್ಲಾಸಿಕ್ ಸಿನಿಮಾ ಸಿದ್ಧಪಡಿಸಲು ಕಾರಣೀಭೂತರಾದ ಎಲ್ಲರಿಗೂ ಈ ಪ್ರಶಸ್ತಿಯನ್ನು ಅರ್ಪಿಸುವೆ" ಎಂದು ಐಶ್ವರ್ಯಾ ರೈ ಅದ್ಭುತವಾಗಿ ಭಾಷಣ ಮಾಡುತ್ತಿದ್ದರು.
(4 / 11)
"ಈ ಸಿನಿಮಾದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಅಭಿನಂದನೆಗಳು. ಈ ಸಿನಿಮಾದ ನಿರ್ಮಾಣ, ಸಹಾಯಕರು, ಸಂಜಯ್ ಅವರ ಆಜ್ಞೆಯಂತೆ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದ ಅರ್ಪಿಸುವೆ" ಎಂದೆಲ್ಲ ಐಶ್ವರ್ಯಾ ರೈ ಅದ್ಭುತವಾಗಿ ಮತ್ತು ನಿರರ್ಗಳವಾಗಿ ಮಾತನಾಡುತ್ತಿದ್ದರು.
(5 / 11)
ಐಶ್ವರ್ಯಾ ರೈ ಈ ರೀತಿ ವಿನ್ನಿಂಗ್ ಸ್ಪೀಚ್ ನೀಡುತ್ತಿರಬೇಕಾದರೆ ಆ ವಿಡಿಯೋದಲ್ಲಿ ತಮ್ಮ ಮುಖ ಕಾಣಿಸುವಂತೆ ಐಶ್ವರ್ಯಾ ರೈ ಪಕ್ಕದಲ್ಲಿ ಜಯಾ ಬಚ್ಚನ್ ಮತ್ತು ಪ್ರೀತಿ ಜಿಂಟಾ ನಿಂತಿದ್ದರು.
(6 / 11)
ಇವರಿಬ್ಬರು ಸುಮ್ಮನೆ ನಿಂತಿದ್ದರೆ ಪರವಾಗಿರಲಿಲ್ಲ. ಇವರಿಬ್ಬರು ಭಾಷಣ ಮಾಡುತ್ತಿದ್ದ ಐಶ್ವರ್ಯಾ ರೈ ಅವರನ್ನು ಕುಚೋದ್ಯ ಮಾಡುತ್ತಿದ್ದರು. ಇದು ನೆಟ್ಟಿಗರಿಗೆ ಕೋಪತರಿಸಿದೆ.
(7 / 11)
"ಇವರಿಬ್ಬರಿಗೂ ಚೂರು ತಲೆ ಸರಿ ಇಲ್ಲ. ಸಾಮಾನ್ಯ ಜ್ಞಾನವಂತೂ ಇಲ್ಲವೇ ಇಲ್ಲ. ಸಭೆಯಲ್ಲಿ ಯಾರಾದರೂ ಮಾತನಾಡುವಾಗ ಸುಮ್ಮನಿರಬೇಕೆಂಬ ಕಾಮನ್ ಸೆನ್ಸ್ ಇಬ್ಬರಿಗೂ ಇಲ್ಲ" ಎಂದು ನೆಟ್ಟಿಗರು ಜಯಾ ಬಚ್ಚನ್ ಮತ್ತು ಪ್ರೀತಿ ಜಿಂಟಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
(8 / 11)
" ಜಯಾ ಬಚ್ಚನ್ ಮತ್ತು ಪ್ರೀತಿ ಜಿಂಟಾರಿಗೆ ಐಶ್ವರ್ಯಾ ರೈ ಮೇಲೆ ಅಸೂಯೆ. ಅದಕ್ಕೆ ಹೀಗೆ ಮಾಡುತ್ತಿರಬಹುದು" ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
(9 / 11)
ಈ ರೀತಿ ಜಯಾ ಬಚ್ಚನ್ ಮತ್ತು ಪ್ರೀತಿ ಜಿಂಟಾ ಮಾತನಾಡುವಾಗ ಐಶ್ವರ್ಯಾ ರೈ ಅವರಿಗೆ ಡಿಸ್‌ಟರ್ಬ್ ಆಗಿದೆ. ಭಾಷಣದ ನಡುವೆಯೇ ಇವರಿಬ್ಬರನ್ನು ನೋಡಿ ಮಾತು ಮುಂದುವರೆಸಿದ್ದಾರೆ.
(10 / 11)
ಈ ವಿಡಿಯೋವನ್ನು aishwaryamylight ಎಂಬ ಇನ್‌ಸ್ಟಾಗ್ರಾಂನಲ್ಲಿ ನೋಡಬಹುದು. ಈ ವಿಡಿಯೋಗೆ ಅಭಿಮಾನಿಗಳು ತಮಗೆ ತೋಚಿದಂತೆ ಕಾಮೆಂಟ್ ಮಾಡುತ್ತಿದ್ದಾರೆ. ಜಯಾ ಬಚ್ಚನ್ ಮತ್ತು ಪ್ರೀತಿ ಜಿಂಟಾರಿಗೆ ಬೈಗುಳಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ.
ಇತರ ಗ್ಯಾಲರಿಗಳು