ಬೌಲ್ ಔಟ್ನಿಂದ ಸೂಪರ್ ಓವರ್ವರೆಗೆ; ಟೈ ಬ್ರೇಕರ್ ಪಂದ್ಯಗಳಲ್ಲಿ ಭಾರತ ಸೋತ ಇತಿಹಾಸವೇ ಇಲ್ಲ
- Indian Cricket Team: ಏಕದಿನ ಮತ್ತು ಟಿ20 ಮಹಿಳಾ ಮತ್ತು ಪುರುಷರ ಕ್ರಿಕೆಟ್‌ನಲ್ಲಿ ಭಾರತ ತಂಡ ಒಟ್ಟು 6 ಬಾರಿ ಟೈ ಬ್ರೇಕರ್ ಪಂದ್ಯಗಳಲ್ಲಿ ಆಡಿದ್ದು, ಎಲ್ಲಾ ಪಂದ್ಯಗಳಲ್ಲೂ ಗೆದ್ದು ಬೀಗಿದೆ. ಆ ಟೈ ಬ್ರೇಕರ್ ಪಂದ್ಯಗಳು ಯಾವುವು? ಇಲ್ಲಿದೆ ವಿವರ ನೋಡಿ.
- Indian Cricket Team: ಏಕದಿನ ಮತ್ತು ಟಿ20 ಮಹಿಳಾ ಮತ್ತು ಪುರುಷರ ಕ್ರಿಕೆಟ್‌ನಲ್ಲಿ ಭಾರತ ತಂಡ ಒಟ್ಟು 6 ಬಾರಿ ಟೈ ಬ್ರೇಕರ್ ಪಂದ್ಯಗಳಲ್ಲಿ ಆಡಿದ್ದು, ಎಲ್ಲಾ ಪಂದ್ಯಗಳಲ್ಲೂ ಗೆದ್ದು ಬೀಗಿದೆ. ಆ ಟೈ ಬ್ರೇಕರ್ ಪಂದ್ಯಗಳು ಯಾವುವು? ಇಲ್ಲಿದೆ ವಿವರ ನೋಡಿ.
(1 / 7)
1987ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸರಣಿಯ 3ನೇ ಏಕದಿನ ಪಂದ್ಯ ಹೈದರಾಬಾದ್‌ನಲ್ಲಿ ಟೈ ಆಗಿತ್ತು. ಪ್ರತಿಕೂಲ ಹವಾಮಾನದಿಂದ 44 ಓವರ್ಸ್ಗೆ ಕಡಿತಗೊಳಿಸಿದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 6 ವಿಕೆಟ್‌ಗೆ 212 ರನ್ ಗಳಿಸಿತು. ಚೇಸಿಂಗ್ ನಡೆಸಿದ ಪಾಕಿಸ್ತಾನ 44 ಓವರ್‌ಗಳಲ್ಲಿ 7 ವಿಕೆಟ್‌ಗೆ 212 ರನ್ಗಳನ್ನೇ ಗಳಿಸಿತು. ಆದರೆ, ಪಾಕ್ಗಿಂತ ಒಂದು ವಿಕೆಟ್ ಕಡಿಮೆ ಕಳೆದುಕೊಂಡಿದ್ದ ಕಾರಣ ಭಾರತ ತಂಡಕ್ಕೆ ಗೆಲುವು ನೀಡಲಾಯಿತು.
(2 / 7)
2007ರಲ್ಲಿ ಡರ್ಬನ್‌ನಲ್ಲಿ ನಡೆದ ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯ ಟೈ ಆಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 9 ವಿಕೆಟ್‌ಗೆ 141 ರನ್ ಗಳಿಸಿತು. ಪಾಕಿಸ್ತಾನ 7 ವಿಕೆಟ್‌ಗೆ 141 ರನ್‌ಗಳಿಗೆ ಸಿಲುಕಿತು. ಅಂದು ಬೌಲ್ಡ್ ಔಟ್ ಮೂಲಕ ಭಾರತ ಪಂದ್ಯವನ್ನು ಗೆದ್ದುಕೊಂಡಿತು. ಸೆಹ್ವಾಗ್, ಹರ್ಭಜನ್ ಮತ್ತು ಉತ್ತಪ್ಪ ಬೌಲ್ ಮಾಡುವ ಮೂಲಕ ಚೆಂಡನ್ನು ಸ್ಟಂಪ್ಗೆ ಹಾಕಿದರು. ಆದರೆ, ಪಾಕಿಸ್ತಾನದ ಅರಾಫತ್, ಗುಲ್ ಮತ್ತು ಅಫ್ರಿದಿ ಚೆಂಡನ್ನು ಸ್ಟಂಪ್ಗೆ ಹಾಕಲು ವಿಫಲರಾದರು.
(3 / 7)
2020ರಲ್ಲಿ ಹ್ಯಾಮಿಲ್ಟನ್‌ನಲ್ಲಿ ನಡೆದ ಭಾರತ-ನ್ಯೂಜಿಲೆಂಡ್ ಸರಣಿಯ 3ನೇ ಟಿ20 ಪಂದ್ಯ ಟೈ ಆಗಿತ್ತು. ಮೊದಲು ಬ್ಯಾಟಿಂಗ್ ನಡೆಸಿದ ಭಾರತ 5 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು. ಇದಕ್ಕುತ್ತರವಾಗಿ ಕಿವೀಸ್ 6 ವಿಕೆಟ್‌ಗೆ 179 ರನ್ ಕಲೆಹಾಕಿತು. ಸೂಪರ್ ಓವರ್‌ನಲ್ಲಿ ನ್ಯೂಜಿಲೆಂಡ್ ವಿಕೆಟ್ ಇಲ್ಲದೆ 17 ರನ್ ಗಳಿಸಿತು. ಭಾರತ 5 ಎಸೆತಗಳಲ್ಲಿ 20 ರನ್ ಗಳಿಸಿ ಗೆದ್ದು ಬೀಗಿತು.
(4 / 7)
2020ರಲ್ಲಿ ವೆಲ್ಲಿಂಗ್ಟನ್‌ನಲ್ಲಿ ನಡೆದ ಭಾರತ-ನ್ಯೂಜಿಲೆಂಡ್ ದ್ವಿಪಕ್ಷೀಯ ಸರಣಿಯ 4ನೇ ಟಿ20 ಪಂದ್ಯ ಕೂಡ ಟೈ ಆಗಿತ್ತು. ಮೊದಲು ಬ್ಯಾಟ್ ಮಾಡಿದ ಭಾರತ 8 ವಿಕೆಟ್‌ಗೆ 165 ರನ್ ಗಳಿಸಿತು. ಕಿವೀಸ್ 7 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು. ಸೂಪರ್ ಓವರ್‌ನಲ್ಲಿ ಕಿವೀಸ್ 1 ವಿಕೆಟ್‌ಗೆ 13 ರನ್ ಗಳಿಸಿತು. ಭಾರತ 5 ಎಸೆತಗಳಲ್ಲಿ 1 ವಿಕೆಟ್‌ಗೆ 16 ರನ್ ಗಳಿಸುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿತು.
(5 / 7)
ಭಾರತ-ಅಫ್ಘಾನಿಸ್ತಾನ ದ್ವಿಪಕ್ಷೀಯ ಸರಣಿಯ 3ನೇ ಟಿ20 ಪಂದ್ಯ 2024ರಲ್ಲಿ ಬೆಂಗಳೂರಿನಲ್ಲಿ ನಡೆಯಿತು. ಮೊದಲು ಬ್ಯಾಟ್ ಮಾಡಿದ ಭಾರತ 4 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿತು. ಮತ್ತೆ ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 6 ವಿಕೆಟ್‌ಗೆ 212 ರನ್ ಕಲೆಹಾಕಿತು. ಆದರೆ ಮೊದಲ ಸೂಪರ್ ಓವರ್ ಕೂಡ ಟೈ ಆಯಿತು. ಬಳಿಕ ನಡೆದ ಎರಡನೇ ಸೂಪರ್ ಓವರ್‌ನಲ್ಲಿ ಭಾರತ 5 ಎಸೆತಗಳಲ್ಲಿ 2 ವಿಕೆಟ್‌ಗೆ 11 ರನ್ ಕಲೆಹಾಕಿತು. ಆದರೆ ಅಫ್ಘಾನಿಸ್ತಾನ 3 ಎಸೆತಗಳಲ್ಲಿ 1 ರನ್ ಗಳಿಸಿ 2 ವಿಕೆಟ್ ಕಳೆದುಕೊಂಡು ಸೋಲನುಭವಿಸಿತು.
(6 / 7)
ಮಹಿಳಾ ಕ್ರಿಕೆಟ್‌ನಲ್ಲಿ ಭಾರತ 1 ಮ್ಯಾಚ್ ಟೈ ಬ್ರೇಕರ್‌ನಿಂದ ಗೆದ್ದಿದೆ. 2022ರಲ್ಲಿ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಭಾರತ-ಆಸ್ಟ್ರೇಲಿಯಾ ಸರಣಿಯ 2ನೇ ಟಿ20 ಪಂದ್ಯ ಟೈ ಆಗಿತ್ತು. ಆಸ್ಟ್ರೇಲಿಯಾ ನಿಗದಿತ 20 ಓವರ್‌ಗಳಲ್ಲಿ 1 ವಿಕೆಟ್‌ಗೆ 187 ರನ್ ಗಳಿಸಿತು. ಭಾರತ 5 ವಿಕೆಟ್‌ಗೆ 187 ರನ್ ಕಲೆಹಾಕಿತು. ಸೂಪರ್ ಓವರ್‌ನಲ್ಲಿ ಭಾರತದ ಹುಡುಗಿಯರು 1 ವಿಕೆಟ್‌ಗೆ 20 ರನ್ ಗಳಿಸಿದರು. ಆಸ್ಟ್ರೇಲಿಯಾ 1 ವಿಕೆಟ್‌ಗೆ 16 ರನ್ ಗಳಿಸಲಷ್ಟೇ ಶಕ್ತವಾಗಿತ್ತು.
ಇತರ ಗ್ಯಾಲರಿಗಳು