ಸೀತಾರೆ ಜಮೀನ್ ಪರ್ ನಿಷೇಧಿಸಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಆಗ್ರಹ, ಅಮೀರ್ ಖಾನ್ ಏನು ತಪ್ಪು ಮಾಡಿದ್ರು
ಅಮೀರ್ ಖಾನ್ ನಟನೆಯ ಸೀತಾರೆ ಜಮೀನ್ ಪರ್ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಅಭಿಮಾನಿಗಳು ಖುಷಿಗೊಂಡಿದ್ದಾರೆ. ಇದೇ ಸಮಯದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಒಂದಿಷ್ಟು ಜನರು ಈ ಸಿನಿಮಾ ಬೈಕಾಟ್ ಮಾಡಿ ಎಂದು ಹೇಳುತ್ತಿದ್ದಾರೆ. ಇದರಿಂದ #BoycottSitaareZameenPar ಟ್ರೆಂಡಿಂಗ್‌ನಲ್ಲಿದೆ.
(1 / 10)
ಅಮೀರ್ ಖಾನ್ ಅವರ '3 ಈಡಿಯಟ್ಸ್' ಮತ್ತು 'ತಾರೆ ಜಮೀನ್ ಪರ್'ನಂತಹ ಚಿತ್ರಗಳನ್ನು ಈ ಟ್ರೈಲರ್ ನೆನಪಿಸುತ್ತದೆ. ಅಮೀರ್ ಖಾನ್ ಬ್ಯಾಕ್, ಬಾಕ್ಸ್ ಆಫೀಸ್‌ನಲ್ಲಿ ನೂರು ಕೋಟಿ ರೂಪಾಯಿ ಗಳಿಕೆ ಗ್ಯಾರಂಟಿ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಇದೇ ಸಮಯದಲ್ಲಿ ಬೈಕಾಟ್ ಸೀತಾರೆ ಜಮೀನ್ ಪರ್ ಕೂಡ ಟ್ರೆಂಡಿಂಗ್‌ನಲ್ಲಿದೆ.
(2 / 10)
ಭಾರತವು ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂದೂರ ಕಾರ್ಯಾಚರಣೆ ಕೈಗೊಂಡ ಸಮಯದಲ್ಲಿ ಅಮೀರ್ ಖಾನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನುವುದು ಸಾಕಷ್ಟು ಜನರ ಕೋಪಕ್ಕೆ ಕಾರಣವಾಗಿದೆ. ಇವರು ಪಾಕಿಸ್ತಾನದ ಬಗ್ಗೆ ಮಾತನಾಡುವುದಿಲ್ಲ, ಪಾಕ್‌ನಲ್ಲಿರುವ ಅಭಿಮಾನಿಗಳ ದ್ವೇಷ ಕಟ್ಟಿಕೊಳ್ಳಲು ರೆಡಿ ಇಲ್ಲ ಎಂದೆಲ್ಲ ಪ್ರತಿಕ್ರಿಯಿಸಿದ್ದರು.
(3 / 10)
ಅಮೀರ್ ಖಾನ್ ಕಡೆಯಿಂದ ನಿನ್ನೆಯಷ್ಟೇ ಈ ಕಾರ್ಯಾಚರಣೆ ಬಗ್ಗೆ ಪ್ರತಿಕ್ರಿಯೆ ಬಂದಿದೆ. ಅಂದರೆ, ಸೀತಾರೆ ಜಮೀನ್ ಪರ್ ಟ್ರೈಲರ್ ರಿಲೀಸ್ ಸಮಯದಲ್ಲಿ ಇವರು ಪ್ರತಿಕ್ರಿಯೆ ನೀಡಿದ್ದಾರೆ. ಅಮೀರ್ ಖಾನ್ ಪ್ರೊಡಕ್ಷನ್ಸ್ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಆಪರೇಷನ್ ಸಿಂದೂರ ಕಾರ್ಯಚರಣೆಯ ಕುರಿತು ಬರೆಯಲಾಗಿದೆ.
(4 / 10)
‘ಆಪರೇಷನ್ ಸಿಂಧೂರ’ ಹೀರೋಗಳಿಗೆ ನನ್ನ ನಮಸ್ಕಾರಗಳು. ನಮ್ಮ ದೇಶದ ಭದ್ರತೆಗಾಗಿ ಹೋರಾಡುತ್ತಿರುವ ಸಶಸ್ತ್ರ ಪಡೆಗಳ ಧೈರ್ಯ, ಶೌರ್ಯ ಮತ್ತು ಅಚಲ ಬದ್ಧತೆಗೆ ನನ್ನ ಕೃತಜ್ಞತೆಯನ್ನು ಈ ಮೂಲಕ ವ್ಯಕ್ತಪಡಿಸುತ್ತೇನೆ. ಗೌರವಾನ್ವಿತ ಪ್ರಧಾನ ಮಂತ್ರಿಯವರ ನಾಯಕತ್ವ ಮತ್ತು ಭದ್ರತೆಗಾಗಿ ಧನ್ಯವಾದಗಳು. ‘ಜೈ ಹಿಂದ್ ಎಂದು ಅಮೀರ್ ಖಾನ್ ಪ್ರೊಡಕ್ಷನ್ಸ್ ಬರೆಯಲಾಗಿದೆ.
(5 / 10)
"ಹೋ ತುಂಬಾ ತಡವಾಗಿ ಪ್ರತಿಕ್ರಿಯೆ ನೀಡಿದ್ದೀರಿ", "ಪ್ರತಿಕ್ರಿಯೆ ನೀಡದೆ ಇರುವುದಕ್ಕಿಂತ ತಡವಾಗಿ ಪೋಸ್ಟ್ ಮಾಡುವುದು ಒಳ್ಳೆಯದು", "ಸಿನಿಮಾ ಟ್ರೈಲರ್ ರಿಲೀಸ್ ಸಮಯದಲ್ಲಿ ದೇಶ ನೆನಪಾಯ್ತ" ಎಂದೆಲ್ಲ ಜನರು ಪ್ರತಿಕ್ರಿಯೆ ನೀಡಿದ್ದಾರೆ.
(6 / 10)
'ಸೀತಾರೆ ಜಮೀನ್ ಪರ್' ಟ್ರೇಲರ್ ಕೊನೆಗೂ ಬಿಡುಗಡೆಯಾಗಿದೆ. ಈ ಚಿತ್ರದ ಟ್ರೈಲರ್ ನೋಡಿದರೆ ತಾರೆ ಜಮೀನ್ ಪರ್ ನೆನಪಿಗೆ ಬರಬಹುದು. ತಾರೇ ಜಮೀನ್ ಪರ್‌ನಲ್ಲಿ ಡಿಸ್ಲೆಕ್ಸಿಯಾ ತೊಂದರೆ ಇರುವ ಮಗುವಿನ ಜತೆ ಅಮೀರ್ ಖಾನ್‌ರ ಭಾವುಕ ಪ್ರಯಾಣ ಇತ್ತು. ಇದರಲ್ಲಿ ಮಾನಸಿಕವಾಗಿ ತೊಂದರೆಯಲ್ಲಿರುವ ವ್ಯಕ್ತಿಗಳಿಗೆ ಬಾಸ್ಕೆಟ್ ಬಾಲ್ ತರಬೇತಿ ನೀಡುವ ತರಬೇತುದಾರನ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ.
(7 / 10)
ತನ್ನ ತಾಯಿ ಮತ್ತು ಹೆಂಡತಿಯ ಪ್ರೀತಿಯೊಂದಿಗೆ ಮುಗ್ಧನಂತೆ ಕಾಣುವ ಒಬ್ಬ ತರಬೇತುದಾರನ ಕಥೆಯನ್ನು ಸೀತಾರೆ ಜಮೀನ್ ಪರ್ ಟ್ರೈಲರ್ ತೋರಿಸಿದೆ. ಮಾನಸಿಕ ಸವಾಲು ಎದುರಿಸುತ್ತಿರುವ ಈ ಟ್ರೈನರ್ ತನ್ನಂತೆಯೇ ತೊಂದರೆಯಲ್ಲಿರುವ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಕೆಲಸ ಮಾಡುತ್ತಾನೆ. ಅಮೀರ್ ಖಾನ್ ಅವರ '3 ಈಡಿಯಟ್ಸ್' ಮತ್ತು 'ತಾರೆ ಜಮೀನ್ ಪರ್'ನಂತಹ ಚಿತ್ರಗಳನ್ನು ಈ ಟ್ರೈಲರ್ ನೆನಪಿಸುತ್ತದೆ.
(9 / 10)
ಈ ಚಿತ್ರದಲ್ಲಿ ತಾರೆ ಜಮೀನ್ ಪರ್ ಚಿತ್ರದ ದರ್ಶೀಲ್ ಸಫಾರಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಟ್ರೈಲರ್‌ನಲ್ಲಿ ಅವರ ಪಾತ್ರವನ್ನು ತೋರಿಸಿಲ್ಲ. ಅರೋಶ್ ದತ್ತಾ, ಗೋಪಿ ಕೃಷ್ಣ ವರ್ಮಾ, ಸಂವಿತ್ ದೇಸಾಯಿ, ವೇದಾಂತ್ ವರ್ಮಾಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಇತರ ಗ್ಯಾಲರಿಗಳು