Brahmagantu Serial: ಮನೆ ಕೆಲಸದವರಿಗೆ ಊಟ ಬಡಿಸಿದ ಸೌಂದರ್ಯ; ಇದೆಲ್ಲ ನಾಟಕ ಎಂಬ ಸತ್ಯ ದೀಪಾಗೆ ಮಾತ್ರ ಗೊತ್ತು
- Brahmagantu Serial: ಬ್ರಹ್ಮಗಂಟು ಧಾರಾವಾಹಿಯಲ್ಲಿ ದೀಪಾ ಸೌಂದರ್ಯಾಳ ಎಲ್ಲ ನಾಟಕದ ಬಗ್ಗೆ ತಿಳಿದುಕೊಂಡಿದ್ದಾಳೆ. ಈ ಮನೆಯಲ್ಲಿ ಯಾರು ಹೇಗೆ ಅನ್ನೋದು ಅವಳಿಗೆ ತುಂಬಾ ಚೆನ್ನಾಗಿ ಅರಿವಿದೆ.
- Brahmagantu Serial: ಬ್ರಹ್ಮಗಂಟು ಧಾರಾವಾಹಿಯಲ್ಲಿ ದೀಪಾ ಸೌಂದರ್ಯಾಳ ಎಲ್ಲ ನಾಟಕದ ಬಗ್ಗೆ ತಿಳಿದುಕೊಂಡಿದ್ದಾಳೆ. ಈ ಮನೆಯಲ್ಲಿ ಯಾರು ಹೇಗೆ ಅನ್ನೋದು ಅವಳಿಗೆ ತುಂಬಾ ಚೆನ್ನಾಗಿ ಅರಿವಿದೆ.
(1 / 8)
“ನಿಮಗೆ ನನ್ನ ಮೇಲೆ ಪ್ರೀತಿ ಗೌರವ ಇದ್ರೆ, ಏನೂ ಮಾತಾಡ್ದೆ ಇಲ್ಲಿ ಬಂದು ಕುಳಿತುಕೊಳ್ಳಿ” ಎಂದು ಸೌಂದರ್ಯ ಎಲ್ಲ ಕೆಲಸದವರನ್ನು ಡೈನಿಂಗ್ ಟೇಬಲ್‌ಗೆ ಕರೆಯುತ್ತಾಳೆ.
(Zee Kannada)(2 / 8)
ಆದರೆ ಮೊದಲು ಯಾರೂ ಬರೋದಿಲ್ಲ. ನಂತರ ಮತ್ತೊಮ್ಮೆ ಒತ್ತಾಯ ಮಾಡಿದಾಗ ಎಲ್ಲರೂ ಬಂದು ಊಟ ಮಾಡ್ತಾರೆ.
(Zee Kannada)(3 / 8)
ದೀಪಾಳನ್ನು ಉದ್ದೇಶಿಸಿ “ಇಷ್ಟು ವರ್ಷ ಕೆಲಸ ಮಾಡಿದ ಮನೆಯಲ್ಲಿ ಯಾರದೋ ಮಾತು ಕೇಳಿ ಧರಣಿ ಕುಳಿತಿದ್ದೀರಲ್ಲ ಇದು ಸರಿನಾ?” ಎಂದು ಪ್ರಶ್ನೆ ಮಾಡುತ್ತಾಳೆ.
(Zee Kannada)(4 / 8)
ಆಗ ಯಾರೂ ಮಾತಾಡೋದಿಲ್ಲ. “ನೀವೆಲ್ಲ ನನ್ನ ಒಂದು ಮುಖ ಮಾತ್ರ ನೋಡಿದ್ದೀರಿ, ಆದ್ರೆ ನನಗೂ ಒಳ್ಳೆ ಮನಸಿದೆ” ಎಂದು ಸೌಂದರ್ಯ ಹೇಳುತ್ತಾಳೆ.
(Zee Kannada)(5 / 8)
ಅವಳ ಮಾತನ್ನು ಕೇಳಿ ಮನೆಯವರಿಗೆಲ್ಲ ಆಶ್ಚರ್ಯ ಆಗುತ್ತದೆ. ಇದೇನಿದು ಇವಳು ಹೀಗೆ ಮಾತಾಡ್ತಾ ಇದಾಳಲ್ಲ ಎಂದು ಆಶ್ಚರ್ಯದಿಂದ ನೋಡುತ್ತಾರೆ.
(Zee Kannada)(6 / 8)
ಹಿಂದೆಂದೂ ಈ ರೀತಿ ಎಲ್ಲರೊಟ್ಟಿಗೆ ಚೆನ್ನಾಗಿ ನಡೆದುಕೊಳ್ಳದ ಇವಳು ಇಂದೇಕೆ ಈ ರೀತಿ ಮಾಡ್ತಿದ್ದಾಳೆ ಎಂಬುದು ಎಲ್ಲರಿಗೂ ಮೂಡಿದ ಪ್ರಶ್ನೆಯಾಗಿತ್ತು.
(Zee Kannada)(7 / 8)
ಇನ್ನು ಚಿಕ್ಕತ್ತೆ ನೀವೆಲ್ಲ ಬೇಗ ಬೇಗ ಊಟ ಮಾಡಿ, ನಾವೂ ಊಟ ಮಾಡ್ಬೇಕು ಹಸಿವಾಗಿದೆ ಎಂದು ಗಡಿಬಿಡಿ ಮಾಡುತ್ತಾರೆ. ಆದರೆ ಸೌಂದರ್ಯ ಅವಳ ಬಾಯಿ ಮುಚ್ಚಿಸುತ್ತಾಳೆ.
(Zee Kannada)ಇತರ ಗ್ಯಾಲರಿಗಳು