ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಒಗಟು ಬಿಡಿಸೋದು ನಿಮ್ಮ ನೆಚ್ಚಿನ ಹವ್ಯಾಸವಾದ್ರೆ ನಿಮಗಾಗಿ ಇಲ್ಲಿದೆ ಒಗಟುಗಳ ಗುಚ್ಛ, ಉತ್ತರ ಹೇಳಿ ಜಾಣತನ ತೋರಿ

ಒಗಟು ಬಿಡಿಸೋದು ನಿಮ್ಮ ನೆಚ್ಚಿನ ಹವ್ಯಾಸವಾದ್ರೆ ನಿಮಗಾಗಿ ಇಲ್ಲಿದೆ ಒಗಟುಗಳ ಗುಚ್ಛ, ಉತ್ತರ ಹೇಳಿ ಜಾಣತನ ತೋರಿ

  • ಒಗಟು ಬಿಡಿಸೋದ್ರಲ್ಲಿ ನೀವು ಪಂಟರು ಅಂತಾದ್ರೆ ನಿಮಗಾಗಿ ಇಲ್ಲಿದೆ 10 ಒಗಟುಗಳ ಗುಚ್ಛ. ಈ ಒಗಟುಗಳಿಗೆ ನೀವು ಉತ್ತರ ಕಂಡುಕೊಳ್ಳಿ, ನಿಮ್ಮ ಆತ್ಮೀಯರು, ಸ್ನೇಹಿತರೊಂದಿಗೆ ಇದನ್ನು ಹಂಚಿಕೊಂಡು ಅವರಿಗೆ ಉತ್ತರ ಹೇಳುವ ಸವಾಲು ಹಾಕಿ. ಇದು ನಿಮ್ಮ ಮೆದುಳನ್ನು ಚುರುಕಾಗಿಸುವ ಆಟವೂ ಹೌದು.

ಶಾಲಾ ದಿನಗಳಲ್ಲಿ ಒಗಟಿಗೆ ಉತ್ತರ ಹೇಳುವ ಸ್ಪರ್ಧೆ ಇರುತ್ತಿತ್ತು, ಆಗೆಲ್ಲಾ ಒಗಟಿಗೆ ಉತ್ತರ ಹೇಳೋದು ದೊಡ್ಡ ಚಾಲೆಂಜ್‌ ಅನ್ನಿಸುತ್ತಿದ್ದದ್ದು ಸುಳ್ಳಲ್ಲ. ಈಗಲೂ ನೀವು ಶಾಲಾ ದಿನಗಳನ್ನು ನೆನಪಿಸಿಕೊಳ್ಳುವಂತೆ ಒಗಟುಗಳಿಗೆ ಉತ್ತರ ಹೇಳಬಹುದು. ನಾವು ನಿಮಗಾಗಿ ಇಲ್ಲಿ 10 ಒಗಟುಗಳನ್ನು ನೀಡಿದ್ದೇವೆ. ಭಾನುವಾರದ ಹೊತ್ತು ಇದು ನಿಮಗೆ ಮೋಜು ನೀಡುವ ಆಟವಾಗಬಹುದು.
icon

(1 / 12)

ಹೊರಗೆ ಮುಳ್ಳು, ಒಳಗೆ ಮೇಣ, ಸೇಡೆ ಸೇಡೆ ಮಾಡೋ ಜಾಣ, ಚೂಳಿ ಉತ್ರ ಬಿಡಿಸೋ ಜಾಣ, ತೊಳೇ ಎತ್ತಿ ನುಂಗೋ ಜಾಣ; ಹೇಳಿ ಏನದು???
icon

(2 / 12)

ಹಾರಿ ಹಾರಿ ಬಂದ ನೋಡಿ, ಕಾಲೂರಿನಿಂದ ಖೋಡಿ, ರಸ ಕಸ ಏಕ ಮಾಡಿ, ಗಲೀಜು ಖಾನ ಹೋದ ಓಡಿ; ಹೇಳಿ ಏನದು???
icon

(3 / 12)

ಕಪ್ಪನೆ ಹುತ್ತದ ಮೇಲೆ, ಬೆಳ್ಳನೆ ಹಾವಿನ ಮಾಲೆ; ಹೇಳಿ ಏನದು???
icon

(4 / 12)

ಕಪ್ಪನೆ ಹುತ್ತದ ಮೇಲೆ, ಬೆಳ್ಳನೆ ಹಾವಿನ ಮಾಲೆ; ಹೇಳಿ ಏನದು???

ಮುಟ್ಟಲಾಗದ ಹೂವು, ಮುಡಿಯಲಾಗದ ಹೂವು, ಅಟ್ಟಿಸಿಕೊಂಡು ಹೋದರೆ ಹಾರಿ ಹೋಗುವ ಹೂವು; ಹೇಳಿ ಏನದು???
icon

(5 / 12)

ಹಾಡಿ ಬಂದ, ಕಡಿದು ಹೋದ; ಹೇಳಿ ಏನದು???
icon

(6 / 12)

ಹಾಡಿ ಬಂದ, ಕಡಿದು ಹೋದ; ಹೇಳಿ ಏನದು???

ಗಿಡ್ಡನೇ ಗೋಡೆ ಮೇಲೆ ಬೆಳ್ಳನೇ ದೀಪ; ಹೇಳಿ ಏನದು???
icon

(7 / 12)

ಗಿಡ್ಡನೇ ಗೋಡೆ ಮೇಲೆ ಬೆಳ್ಳನೇ ದೀಪ; ಹೇಳಿ ಏನದು???

ತುಳೀತಿದ್ದರೆ ಓಡೋ ಕುದುರೆ, ತುಳೀದಿದ್ದರೆ ಬೀಳೋ ಕುದುರೆ; ಹೇಳಿ ಏನದು???
icon

(8 / 12)

ತುಳೀತಿದ್ದರೆ ಓಡೋ ಕುದುರೆ, ತುಳೀದಿದ್ದರೆ ಬೀಳೋ ಕುದುರೆ; ಹೇಳಿ ಏನದು???

ಹೆತ್ತ ಮಗ ಜಲಗಾರ, ಸಾಕು ಮಗ ಸಂಗೀತಗಾರ; ಹೇಳಿ ಏನದು???
icon

(9 / 12)

ಹೆತ್ತ ಮಗ ಜಲಗಾರ, ಸಾಕು ಮಗ ಸಂಗೀತಗಾರ; ಹೇಳಿ ಏನದು???

ಮಳೆಗೂ ಅರಳುತ್ತೆ, ಬಿಸಿಲಿಗೂ ಅರಳುತ್ತೆ; ಹೇಳಿ ಏನದು???
icon

(10 / 12)

ಮಳೆಗೂ ಅರಳುತ್ತೆ, ಬಿಸಿಲಿಗೂ ಅರಳುತ್ತೆ; ಹೇಳಿ ಏನದು???

ಇಬ್ಬರ ಪಾಲಿಗೂ ಒಂದೇ ರೊಟ್ಟಿ, ಎಷ್ಟು ತಿಂದರೂ ಮುಗಿಯದ ರೊಟ್ಟಿ; ಹೇಳಿ ಏನದು???
icon

(11 / 12)

ಇಬ್ಬರ ಪಾಲಿಗೂ ಒಂದೇ ರೊಟ್ಟಿ, ಎಷ್ಟು ತಿಂದರೂ ಮುಗಿಯದ ರೊಟ್ಟಿ; ಹೇಳಿ ಏನದು???

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(12 / 12)

ಇತರ ಗ್ಯಾಲರಿಗಳು