ಒಗಟು ಬಿಡಿಸುವ ಹವ್ಯಾಸ ನಿಮಗೂ ಇದ್ಯಾ, ಭಾನುವಾರದ ಬೇಸರ ಕಳೆಯಲು ನಿಮಗಾಗಿ ಇಲ್ಲಿದೆ 10 ಒಗಟುಗಳ ಸಂಗ್ರಹ, ಉತ್ತರ ಹೇಳಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಒಗಟು ಬಿಡಿಸುವ ಹವ್ಯಾಸ ನಿಮಗೂ ಇದ್ಯಾ, ಭಾನುವಾರದ ಬೇಸರ ಕಳೆಯಲು ನಿಮಗಾಗಿ ಇಲ್ಲಿದೆ 10 ಒಗಟುಗಳ ಸಂಗ್ರಹ, ಉತ್ತರ ಹೇಳಿ

ಒಗಟು ಬಿಡಿಸುವ ಹವ್ಯಾಸ ನಿಮಗೂ ಇದ್ಯಾ, ಭಾನುವಾರದ ಬೇಸರ ಕಳೆಯಲು ನಿಮಗಾಗಿ ಇಲ್ಲಿದೆ 10 ಒಗಟುಗಳ ಸಂಗ್ರಹ, ಉತ್ತರ ಹೇಳಿ

  • ಭಾನುವಾರದ ಬೇಸರ ಕಳೆಯಲು ಏನಪ್ಪಾ ಮಾಡೋದು ಅಂತ ಯೋಚನೆ ಮಾಡ್ತಾ ಇದೀರಾ, ಖಂಡಿತ ಯೋಚಿಸಬೇಡಿ. ನಿಮ್ಮ ಮೆದುಳಿಗೆ ಸ್ವಲ್ಪ ಕೆಲಸ ಕೊಡಿ. ಇದ್ರಿಂದ ಮೆದುಳು ಚುರುಕಾಗುತ್ತೆ, ಮೋಜು ಸಿಗುತ್ತೆ, ಅದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ, ಇಲ್ಲಿರುವ ಒಗಟುಗಳಿಗೆ ಉತ್ತರ ಹೇಳುವುದು.

ಒಗಟು, ಪದಬಂಧದಂತಹ ಮೆದುಳಿಗೆ ಕೆಲಸ ಕೊಡುವ ಪಜಲ್‌ಗಳನ್ನು ಬಿಡಿಸೋದು ಕೆಲವರಿಗೆ ನೆಚ್ಚಿನ ಹವ್ಯಾಸವಾಗಿರುತ್ತದೆ. ಇಂದು ಭಾನುವಾರವಾಗಿದ್ದು ಇಂತಹ ಪಜಲ್‌ ಬಿಡಿಸುವ ಕೆಲಸ ಮಾಡುವ ಎಂದು ನೀವು ಯೋಚಿಸುತ್ತಿದ್ದರೆ ನಿಮಗಾಗಿ ಇಲ್ಲಿದೆ ಒಗಟುಗಳ ಗುಚ್ಛ. ಇಲ್ಲಿರುವ 10 ಒಗಟುಗಳು ಒಂದಕ್ಕಿಂತ ಒಂದು ಭಿನ್ನವಾಗಿದ್ದು, ಇದಕ್ಕೆ ಸುಲಭವಾಗಿ ಉತ್ತರ ಕಂಡುಹಿಡಿಯಲು ಸಾಧ್ಯವಿಲ್ಲ, ಇದಕ್ಕಾಗಿ ನೀವು ಮೆದುಳಿಗೆ ಸಾಕಷ್ಟು ಕೆಲಸ ಕೊಡಬೇಕಾಗುತ್ತದೆ. ಇನ್ನೇಕೆ ತಡ ಉತ್ತರ ಬಿಡಿಸಲು ಶುರು ಮಾಡಿ. 
icon

(1 / 12)

ಒಂದೇ ಕಣ್ಣು ಒಂದೇ ಬಾಲ; ಹೇಳಿ ಏನದು???
icon

(2 / 12)

ಒಂದೇ ಕಣ್ಣು ಒಂದೇ ಬಾಲ; ಹೇಳಿ ಏನದು???

ಕೋಟೆ, ಒಳಗೆ ಕೊಳ; ಹೇಳಿ ಏನದು???
icon

(3 / 12)

ಕೋಟೆ, ಒಳಗೆ ಕೊಳ; ಹೇಳಿ ಏನದು???

ಮುಳ್ಳು ಮುಳ್ಳಿನ ಚಕ್ರ, ಆ ಚಕ್ರದೊಳಗೆ ಮುಳ್ಳಿನ ಚಕ್ರ; ಹೇಳಿ ಏನದು???
icon

(4 / 12)

ಮುಳ್ಳು ಮುಳ್ಳಿನ ಚಕ್ರ, ಆ ಚಕ್ರದೊಳಗೆ ಮುಳ್ಳಿನ ಚಕ್ರ; ಹೇಳಿ ಏನದು???

ಮುಸುಕಿನ ಗಡಿಗೆಯಲ್ಲಿ ಕೆಂಪು ರತ್ನಗಳು ತುಂಬಿವೆ; ಹೇಳಿ ಏನದು???
icon

(5 / 12)

ಮುಸುಕಿನ ಗಡಿಗೆಯಲ್ಲಿ ಕೆಂಪು ರತ್ನಗಳು ತುಂಬಿವೆ; ಹೇಳಿ ಏನದು???

ಗಿಡ್ಡ ಗಿಡದಲ್ಲಿ ಗಿಳಿಗಳು ತುಂಬಿವೆ; ಹೇಳಿ ಏನದು???
icon

(6 / 12)

ಗಿಡ್ಡ ಗಿಡದಲ್ಲಿ ಗಿಳಿಗಳು ತುಂಬಿವೆ; ಹೇಳಿ ಏನದು???

ಉಂಡೆ ಒಡೆದರೆ ಮನೆ ತುಂಬಾ ಚಿಟ್ಟೆಗಳು; ಹೇಳಿ ಏನದು???
icon

(7 / 12)

ಉಂಡೆ ಒಡೆದರೆ ಮನೆ ತುಂಬಾ ಚಿಟ್ಟೆಗಳು; ಹೇಳಿ ಏನದು???

ನೀರಲ್ಲೇ ಹುಟ್ಟಿ, ನೀರಲ್ಲೇ ಬೆಳೆದು, ನೀರಲ್ಲೇ ಸಾಯುತ್ತೆ; ಹೇಳಿ ಏನದು???
icon

(8 / 12)

ನೀರಲ್ಲೇ ಹುಟ್ಟಿ, ನೀರಲ್ಲೇ ಬೆಳೆದು, ನೀರಲ್ಲೇ ಸಾಯುತ್ತೆ; ಹೇಳಿ ಏನದು???

ಬಿಂಕದ ಸಿಂಗಾರಿಗೆ ಮೈಯೆಲ್ಲಾ ಉರಿ; ಹೇಳಿ ಏನದು???
icon

(9 / 12)

ಬಿಂಕದ ಸಿಂಗಾರಿಗೆ ಮೈಯೆಲ್ಲಾ ಉರಿ; ಹೇಳಿ ಏನದು???

ಕರಿ ಹೊಲದ ಮಧ್ಯದಲ್ಲಿ ಬಿಳಿದಾರ; ಹೇಳಿ ಏನದು???
icon

(10 / 12)

ಕರಿ ಹೊಲದ ಮಧ್ಯದಲ್ಲಿ ಬಿಳಿದಾರ; ಹೇಳಿ ಏನದು???

ಸೂಜಿಗಿಂತಲೂ ಸಣ್ಣ, ಕಾಗೆಗಿಂತಲೂ ಕಪ್ಪು; ಹೇಳಿ ಏನದು???
icon

(11 / 12)

ಸೂಜಿಗಿಂತಲೂ ಸಣ್ಣ, ಕಾಗೆಗಿಂತಲೂ ಕಪ್ಪು; ಹೇಳಿ ಏನದು???

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(12 / 12)

ಇತರ ಗ್ಯಾಲರಿಗಳು