ಕನ್ನಡ ಸುದ್ದಿ  /  Photo Gallery  /  Bro Show Some Respect To The World Cup Trophy Bollywood Actress Urvashi Rautela To Mitchell Marsh Wc 2023 Mgb

'ಬ್ರೋ, ವಿಶ್ವಕಪ್ ಟ್ರೋಫಿಗೆ ಸ್ವಲ್ಪನಾದ್ರು ಗೌರವ ಕೊಡಿ': ಮಿಚೆಲ್ ಮಾರ್ಷ್​ ವಿರುದ್ಧ ನಟಿ ಊರ್ವಶಿ ರೌಟೇಲಾ ಗರಂ

  • 6ನೇ ಬಾರಿಗೆ ವಿಶ್ವಕಪ್​ ಗೆದ್ದ ಖುಷಿಯಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್​ ತಂಡ ತೇಲಾಡುತ್ತಿದ್ದ ವೇಳೆ ಆಲ್​ರೌಂಡರ್ ಮಿಚೆಲ್ ಮಾರ್ಷ್ ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟು ಪ್ರಶಸ್ತಿಗೆ ಅವಮಾನ ಮಾಡಿದ ಫೋಟೋ ವೈರಲ್​ ಆಗಿತ್ತು. ಭಾರತದೆಲ್ಲೆಡೆ ಈತನ ವಿರುದ್ಧ ಟೀಕೆ ವ್ಯಕ್ತವಾಗಿದ್ದು, ಇದೀಗ ಬಾಲಿವುಡ್​ ನಟಿ ಊರ್ವಶಿ ರೌಟೇಲಾ ಕೂಡ ಕ್ರಿಕೆಟಿಗನ ವಿರುದ್ಧ ಕಿಡಿಕಾರಿದ್ದಾರೆ.

ಆಸ್ಟ್ರೇಲಿಯಾದ ಆಲ್​ರೌಂಡರ್ ಮಿಚೆಲ್ ಮಾರ್ಷ್ ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟು, ಆ ಪ್ರಶಸ್ತಿಗೆ ಅವಮಾನ ಮಾಡಿದ್ದಾರೆ ಎನ್ನಲಾದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಈ ಬಗ್ಗೆ ಪರ-ವಿರೋಧ ಚರ್ಚೆಗಳು ಆರಂಭವಾಗಿತ್ತು. ಆದರೆ ಆತನ ವಿರುದ್ಧ ಟೀಕೆಗಳೇ ಹೆಚ್ಚಾಗಿದ್ದವು. ಗೆಲುವಿಗೆ ಗೌರವ ಕೊಡದವನು ಗೆದ್ದೂ ಸೋತಂತೆ. ಗೆದ್ದ ಖುಷಿಯಲ್ಲಿ ದರ್ಪ ತೋರಬಾರದು ಎಂದು ನೆಟ್ಟಿಗರು ಕಾಮೆಂಟ್​ ಮಾಡಿದ್ದರು. 
icon

(1 / 6)

ಇದೀಗ ಬಾಲಿವುಡ್​ ನಟಿ ಊರ್ವಶಿ ರೌಟೇಲಾ ಕೂಡ ಮಿಚೆಲ್ ಮಾರ್ಷ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇನ್​ಸ್ಟಾಗ್ರಾಮ್​ ಸ್ಟೇಟಸ್​ನಲ್ಲಿ ಮಿಚೆಲ್ ಮಾರ್ಷ್ ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟಿರುವ ಫೋಟೋ ಹಾಗೂ ವಿಶ್ವಕಪ್​ ಟ್ರೋಫಿಗೆ ತಾವು ಮುತ್ತಿಡುತ್ತಿರುವ ಫೋಟೋ ಶೇರ್ ಮಾಡಿದ್ದಾರೆ. 
icon

(2 / 6)

“ಬ್ರೋ, ವಿಶ್ವಕಪ್ ಟ್ರೋಫಿಗೆ ಸ್ವಲ್ಪ ಗೌರವ ಕೊಡಿ. ಮಿಚೆಲ್ ಮಾರ್ಷ್ ಕೂಲ್ ಆಗಿ ಕಾಣಲು ತನ್ನ ಪಾದಗಳನ್ನು ಅದರ ಮೇಲ್ಭಾಗದಲ್ಲಿ ಇಟ್ಟಿದ್ದಾನೆ” ಎಂದು ಊರ್ವಶಿ ಬರೆದುಕೊಂಡಿದ್ದಾರೆ.  
icon

(3 / 6)

ಕಪಿಲ್​​ ದೇವ್​​ 1983 ವಿಶ್ವಕಪ್​​ ಟ್ರೋಫಿ ಹಾಗೂ ಎಂಎಸ್​​ ಧೋನಿ 2011ರ ವಿಶ್ವಕಪ್​​ ಟ್ರೋಫಿಗೆ ನೀಡಿದ ಗೌರವದ ಫೋಟೋಗಳನ್ನು ಹಂಚಿಕೊಂಡು ಇದೇ ವ್ಯತ್ಯಾಸ ಎಂದು ಬರೆದಿದ್ದಾರೆ. 
icon

(4 / 6)

ಪ್ಯಾರಿಸ್​ನ ಐಫಿಲ್​​ ಟವರ್​ನಲ್ಲಿ ನಡೆದ 2023ರ ವಿಶ್ವಕಪ್​​ ಟ್ರೋಫಿಯನ್ನು ಅನಾವರಣ ಕಾರ್ಯಕ್ರಮದಲ್ಲಿ ನಟಿ ಊರ್ವಶಿ ರೌಟೇಲಾ ಪಾಲ್ಗೊಂಡಿದ್ದರು.  
icon

(5 / 6)

ಕ್ರಿಕೆಟ್​ ಪ್ರೇಮಿಯೂ ಆಗಿರುವ ಊರ್ವಶಿ ಆಗಾಗ್ಗ ಪಂದ್ಯಗಳನ್ನು ನೋಡಲು ಸ್ಟೇಡಿಯಂಗೆ ಬರುತ್ತಾರೆ. ಟೀಂ ಇಂಡಿಯಾ ಕ್ರಿಕೆಟಿಗ ರಿಷಬ್ ಪಂತ್ ಜೊತೆ ಡೇಟಿಂಗ್​​ನಲ್ಲಿದ್ದಾರೆ ಎಂಬ ವದಂತಿಯೂ ಇದೆ.  
icon

(6 / 6)

ಇತರ ಗ್ಯಾಲರಿಗಳು