ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಾತ್ರವಲ್ಲ, ಕೇಂದ್ರ ಬಜೆಟ್ 2025ರ ಪಂಚ ರೂವಾರಿಗಳಿವರು, ಒಬ್ಬರು ಕರ್ನಾಟಕ ಬ್ಯಾಚ್‌ನ ಅಧಿಕಾರಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಾತ್ರವಲ್ಲ, ಕೇಂದ್ರ ಬಜೆಟ್ 2025ರ ಪಂಚ ರೂವಾರಿಗಳಿವರು, ಒಬ್ಬರು ಕರ್ನಾಟಕ ಬ್ಯಾಚ್‌ನ ಅಧಿಕಾರಿ

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಾತ್ರವಲ್ಲ, ಕೇಂದ್ರ ಬಜೆಟ್ 2025ರ ಪಂಚ ರೂವಾರಿಗಳಿವರು, ಒಬ್ಬರು ಕರ್ನಾಟಕ ಬ್ಯಾಚ್‌ನ ಅಧಿಕಾರಿ

Union Budget 2025: ಕೇಂದ್ರ ಬಜೆಟ್ 2025 ಮಂಡನೆಗೆ ಇನ್ನೇನು ಬೆರಳೆಣಿಕೆ ದಿನಗಳಷ್ಟೆ ಬಾಕಿ. ಕೇಂದ್ರ ಬಜೆಟ್ ಪ್ರತಿ ಅಂತಿಮಗೊಳಿಸುವ ಕೆಲಸ ಶುರುವಾಗಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈಗಾಗಲೇ ಪಾಲುದಾರರೊಂದಿಗೆ ಸಮಾಲೋಚನೆ ಮುಗಿಸಿದ್ದಾರೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಪಂಚ ರೂವಾರಿಗಳು ಕೇಂದ್ರ ಬಜೆಟ್ 2025 ರೂಪಿಸುತ್ತಾರೆ.  

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ದಾಖಲೆಯ 8ನೇ ಸಲ ಕೇಂದ್ರ ಬಜೆಟ್ ಮಂಡಿಸುತ್ತಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೂರನೇ ಅವಧಿಯ ಸರ್ಕಾರದ ಮೊದಲ ಪೂರ್ಣ ಪ್ರಮಾಣದ ಬಜೆಟ್ ಇದು. ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಟ್ವೀಟ್ ಮಾಡಿದ ಪ್ರಕಾರ, ನಿರ್ಮಲಾ ಸೀತಾರಾಮನ್ ಅವರು ಫೆ 1 ರಂದು ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಕೇಂದ್ರ ಬಜೆಟ್ 2025 ಅನ್ನು ರೂಪಿಸುವಲ್ಲಿ ಮುಖ್ಯಭೂಮಿಕೆಯಲ್ಲಿ ಇರುವವರು ಐವರು. ಅವರ ಪರಿಚಯ ಇಲ್ಲಿದೆ.
icon

(1 / 10)

ಭಾರತ ಸರ್ಕಾರದ ಹಣಕಾಸು ಸಚಿವರಾಗಿ ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾಗಿ  ನಿರ್ಮಲಾ ಸೀತಾರಾಮನ್‌ 2019 ರಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅವರು 2016 ರಿಂದ ರಾಜ್ಯಸಭೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದಾರೆ. ಅದಕ್ಕೂ ಮೊದಲು 2014-16ರ ತನಕ ಆಂಧ್ರ ಪ್ರದೇಶವನ್ನು ಪ್ರತಿನಿಧಿಸಿದ್ದರು. ಭಾರತದ ಎರಡನೆ ರಕ್ಷಣಾ ಸಚಿವೆ ಮತ್ತು ಎರಡನೇ ಹಣಕಾಸು ಸಚಿವೆ ಎಂಬ ದಾಖಲೆ ಬರೆದಿದ್ದಾರೆ. ಎರಡೂ ಖಾತೆಗಳ ಪೂರ್ಣಕಾಲಿಕ ಸಚಿವೆ ಎಂಬುದು ಅವರ ಗರಿಮೆ. 
icon

(2 / 10)

ಕೇಂದ್ರ ಬಜೆಟ್ ರೂಪಿಸುವಲ್ಲಿ ವಿತ್ತ ಸಚಿವರಿಗೆ ಹೆಗಲು ನೀಡುವವರು ಮುಖ್ಯ ಹಣಕಾಸು ಸಲಹೆಗಾರ. ಪ್ರಸ್ತುತ ವಿ ಅನಂತ ನಾಗೇಶ್ವರನ್ ಅವರು ಮುಖ್ಯ ಹಣಕಾಸು ಸಲಹೆಗಾರರಾಗಿದ್ದಾರೆ. ತಮಿಳುನಾಡು ಮೂಲದ ವಿ ಅನಂತ ನಾಗೇಶ್ವರನ್ ಅವರು 17 ವರ್ಷ ಕಾಲ ಕಾರ್ಪೊರೇಟ್ ಜಗತ್ತಿನಲ್ಲಿ ತಮ್ಮದೇ ಛಾಪು ಮೂಡಿಸಿದವರು. ಅವರು 2019 ರಿಂದ 2021 ರವರೆಗೆ ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ ಅರೆಕಾಲಿಕ ಸದಸ್ಯರಾಗಿದ್ದರು.
icon

(3 / 10)

2022ರ ಜನವರಿ 28 ರಂದು ಕೃಷ್ಣಮೂರ್ತಿ ಸುಬ್ರಮಣಿಯನ್ ಅವರ ಉತ್ತರಾಧಿಕಾರಿಯಾಗಿ ಭಾರತ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿ ನೇಮಕಗೊಂಡರು, ಕೇಂದ್ರ ಬಜೆಟ್‌ ಮಂಡನೆಯಾಗುವ ಮುನ್ನಾದಿನ ಭಾರತದ ಆರ್ಥಿಕ ಸಮೀಕ್ಷೆ ಸಿದ್ಧಪಡಿಸುವಲ್ಲಿ ಇವರ ಪಾತ್ರ ಮುಖ್ಯವಾದುದು.
icon

(4 / 10)

ಕೇಂದ್ರ ಹಣಕಾಸು ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಅವರು 2025ರ ಜನವರಿ 9 ರಂದು  ಹಣಕಾಸು ಸಚಿವಾಲಯದ ಕಂದಾಯ ಇಲಾಖೆ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡರು. ಒಡಿಶಾ ಕೇಡರ್‌ನ 1987-ಬ್ಯಾಚ್‌ನ ಭಾರತೀಯ ನಾಗರಿಕ ಸೇವಾ ಅಧಿಕಾರಿ ಪಾಂಡೆ, 2019ರ ಅಕ್ಟೋಬರ್ 24 ರಿಂದ ಮೂರು ಇಲಾಖೆಗಳ ಕಾರ್ಯದರ್ಶಿಯಾಗಿ, ಅಂದರೆ, ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆ, ಸಾರ್ವಜನಿಕ ಉದ್ಯಮಗಳ ಇಲಾಖೆ, ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕೇಂದ್ರ ಬಜೆಟ್ 2025 ರೂಪಿಸುವಲ್ಲಿ ಇವರದ್ದು ಕೂಡ ಮಹತ್ವದ ಪಾತ್ರವಿದೆ. 
icon

(5 / 10)

ಡಿಐಪಿಎಎಂನಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುವ ಮೊದಲು,  ಪಾಂಡೆ ಅವರು ವಿಶ್ವಸಂಸ್ಥೆಯ ಕೈಗಾರಿಕಾ ಅಭಿವೃದ್ಧಿ ಸಂಸ್ಥೆಯ ಪ್ರಾದೇಶಿಕ ಕಚೇರಿಯಲ್ಲಿ ಸೇವೆ ಸಲ್ಲಿಸುವುದರ ಜೊತೆಗೆ ಕೇಂದ್ರ ಸರ್ಕಾರ ಮತ್ತು ಒಡಿಶಾ ರಾಜ್ಯ ಸರ್ಕಾರದಲ್ಲಿ ಅನೇಕ ಮಹತ್ವದ ಹುದ್ದೆಗಳನ್ನು ನಿಭಾಯಿಸಿದ್ದರು.. ಅವರ ಹಿಂದಿನ ಸ್ಥಾನಗಳಲ್ಲಿ ಜಂಟಿ ಕಾರ್ಯದರ್ಶಿ, ಯೋಜನಾ ಆಯೋಗ (ಈಗ ನೀತಿ ಆಯೋಗ), ಜಂಟಿ ಕಾರ್ಯದರ್ಶಿ, ಕ್ಯಾಬಿನೆಟ್ ಸೆಕ್ರೆಟರಿಯೇಟ್ ಮತ್ತು ವಾಣಿಜ್ಯ ಸಚಿವಾಲಯದ ಉಪ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದರು.
icon

(6 / 10)

ಅರುಣೀಶ್ ಚಾವ್ಲಾ ಅವರು ಹಣಕಾಸು ಸಚಿವಾಲಯದ ಕಂದಾಯ ಕಾರ್ಯದರ್ಶಿಯಾಗಿ ಡಿಸೆಂಬರ್ 25ರಂದು ಅಧಿಕಾರ ಸ್ವೀಕರಿಸಿದರು. ಚಾವ್ಲಾ ಅವರು ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವಾಲಯದ ಅಧೀನ ಫಾರ್ಮಾಸ್ಯುಟಿಕಲ್ಸ್ ಇಲಾಖೆಯ ಕಾರ್ಯದರ್ಶಿಯಾಗಿ ಭಾರತಕ್ಕೆ ಸೇವೆ ಸಲ್ಲಿಸಿದ್ದರು. ಚಾವ್ಲಾ ಅವರು ಸಂಸ್ಕೃತಿ ಸಚಿವಾಲಯದ ಅಡಿಯಲ್ಲಿ ಸಂಸ್ಕೃತಿ ಕಾರ್ಯದರ್ಶಿಯ ಹೆಚ್ಚುವರಿ ಪ್ರಭಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೇಂದ್ರ ಬಜೆಟ್ ರೂಪಿಸುವಲ್ಲಿ ಕಂದಾಯ ಕಾರ್ಯದರ್ಶಿಯಾಗಿ ಪ್ರಮುಖ ಪಾತ್ರವಹಿಸಿದ್ದಾರೆ. 
icon

(7 / 10)

ಅರುಣೀಶ್ ಚಾವ್ಲಾ ಅವರು ಬಿಹಾರ ಕೇಡರ್‌ 1992 ರ ಬ್ಯಾಚ್‌ನ ಭಾರತೀಯ ಆಡಳಿತ ಸೇವೆ ಅಧಿಕಾರಿ. ಚಾವ್ಲಾ ಅವರು ಯೋಜನೆ ಮತ್ತು ಅಭಿವೃದ್ಧಿಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ದೇಶಕ್ಕೆ ಸೇವೆ ಸಲ್ಲಿಸುತ್ತಿರುವ ಸುದೀರ್ಘ ಮತ್ತು ವಿಶಿಷ್ಟ ವೃತ್ತಿಜೀವನವನ್ನು ಹೊಂದಿದ್ದಾರೆ. ಅವರು ಬಿಹಾರ ರಾಜ್ಯ ಯೋಜನಾ ಮಂಡಳಿಯ ಕಾರ್ಯದರ್ಶಿ ಮತ್ತು ಬಿಹಾರ ವಿಪತ್ತು ಪುನರ್ವಸತಿ ಮತ್ತು ಪುನರ್ನಿರ್ಮಾಣ ಸೊಸೈಟಿಯ ಯೋಜನಾ ನಿರ್ದೇಶಕರಾಗಿದ್ದರು.
icon

(8 / 10)

ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅಜಯ್ ಸೇಠ್ ಅವರಿಗೆ ಡಿಸೆಂಬರ್ ತಿಂಗಳಿಂದ ಕಂದಾಯ ಇಲಾಖೆಯ ಹೆಚ್ಚುವರಿ ಹೊಣೆ ನೀಡಲಾಗಿದೆ. ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯಾಗಿರುವ ಕಾರಣ ಕೇಂದ್ರ ಬಜೆಟ್ ರೂಪಿಸುವಲ್ಲಿ ಪ್ರಮುಖ ಹೊಣೆಗಾರಿಕೆ ಇದೆ. ಅವರ ಅನುಭವವು ಬಜೆಟ್, ತೆರಿಗೆ ನೀತಿ, ವಿದೇಶಿ ಹೂಡಿಕೆಗಳು, ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಹಣಕಾಸು ಸಹಕಾರ, ಅಭಿವೃದ್ಧಿ ಹಣಕಾಸು ಮತ್ತು ಸಾರ್ವಜನಿಕ-ಖಾಸಗಿ ಪಾಲುದಾರಿಕೆಗಳಿಗೆ ಸಂಬಂಧಿಸಿದ್ದಾಗಿದೆ.
icon

(9 / 10)

ಅಜಯ್‌ ಸೇಠ್ ಕರ್ನಾಟಕ ಕೇಡರ್‌ನ 1987 ಬ್ಯಾಚ್ ಐಎಎಸ್ ಅಧಿಕಾರಿ. 2021ರ ಏಪ್ರಿಲ್‌ನಿಂದ ಆರ್ಥಿಕ ವ್ಯವಹಾರಗಳ ಇಲಾಖೆಯಲ್ಲಿ ಕಾರ್ಯದರ್ಶಿಯಾಗಿದ್ದಾರೆ. ಎಂಬಿಎ ಜೊತೆಗೆ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಪದವೀಧರರಾಗಿರುವ ಸೇಠ್‌, ಸಾರ್ವಜನಿಕ ಹಣಕಾಸು ಮತ್ತು ಸಾಮಾಜಿಕ ವಲಯದ ಆಡಳಿತದಲ್ಲಿ ಮೂರು ದಶಕಗಳ ಪರಿಣತಿ ಹೊಂದಿದವರು.
icon

(10 / 10)

ಇತರ ಗ್ಯಾಲರಿಗಳು