Gold; ಬಂಗಾರದ ಬಗ್ಗೆ ತಿಳ್ಕೊಂಡಿರಬೇಕಾದ 12 ಅಚ್ಚರಿಯ ಅಂಶಗಳು; ಚಿನ್ನಕ್ಕಿಂತಲೂ ದುಬಾರಿಯಾಗಿರುವ ಎರಡು ಲೋಹಗಳಿವೆ
Gold; ಚಿನ್ನ ಅಂದ್ರೆ ಸುಮ್ನೇನಾ.., ಬಹುತೇಕರು ಚಿನ್ನ ಅಂದರೆ ಸಾಕು ಅದರ ಆಕರ್ಷಣೆಗೆ ಒಳಗಾಗುತ್ತಾರೆ. ಆದರೆ, ಚಿನ್ನಕ್ಕಿಂತಲೂ ದುಬಾರಿಯಾಗಿರುವ ಎರಡು ಲೋಹಗಳಿವೆ. ಅದೂ ಸೇರಿ ಬಂಗಾರದ ಬಗ್ಗೆ ತಿಳ್ಕೊಂಡಿರಬೇಕಾದ 12 ಅಚ್ಚರಿಯ ಅಂಶಗಳ ವಿವರ ಇಲ್ಲಿದೆ.
(1 / 12)
ಪ್ರಸ್ತುತ ಜಗತ್ತಿನಲ್ಲಿ ದುಬಾರಿ ಎನಿಸಿರುವ ಚಿನ್ನದ ಮೂಲ ಭೂಮಿಯಲ್ಲ ಎಂಬ ನಂಬಿಕೆ ಇತ್ತು. 200 ದಶಲಕ್ಷ ವರ್ಷಗಳ ಹಿಂದ ಖಗೋಳದಿಂದ ಉಲ್ಕಾಪಾತವಾದಾಗ ಚಿನ್ನ ಭೂಮಿ ಸೇರಿತು ಎಂಬ ನಿರೂಪಣೆ ಚಿನ್ನದ ಇತಿಹಾಸ ಕೆದಕಿದರೆ ಕಂಡುಬರುತ್ತದೆ. (canva)
(2 / 12)
ಮನುಷ್ಯನ ಶರೀರದಲ್ಲೂ ಚಿನ್ನ ಇದೆ. ಅಂದರೆ 70 ಕಿಲೋ ಸರಾಸರಿ ತೂಕದ ಮನುಷ್ಯನ ಶರೀರದಲ್ಲಿ 0.2 ಮಿಗ್ರಾಂ ಚಿನ್ನ ಇರುತ್ತದೆ. ಹೃದಯದ ಬಳಿ ಮತ್ತು ಉಗುರುಗಳ ಕೆಳಗೆ ಚಿನ್ನದ ಜಾಡಿನ ಪ್ರಮಾಣ ಕಂಡುಬರುತ್ತದೆ ಎಂದು ಅಧ್ಯಯನ ವರದಿ ಹೇಳಿದ್ದನ್ನು ಅನೇಕ ಕಡೆ ಉಲ್ಲೇಖಿಸಲಾಗಿದೆ.
(3 / 12)
ಚಿನ್ನದ ತೆಳುವಾದ ಪದರ ಅಥವಾ ಹೊಳಪಿನ ರೂಪದಲ್ಲಿ ಚಿನ್ನವನ್ನು ಸುರಕ್ಷಿತವಾಗಿ ತಿನ್ನಬಹುದು. ಶುದ್ಧ ಚಿನ್ನವು ವಿಷಕಾರಿಯಲ್ಲ. ಜೀರ್ಣಾಂಗ ವ್ಯವಸ್ಥೆಯ ಮೂಲಕ ನೇರವಾಗಿ ಹಾದುಹೋಗಿ ಜೀರ್ಣವಾಗುತ್ತದೆ ಎಂಬುದು ನಿರೂಪಿಸಲ್ಪಟ್ಟಿದೆ. ಬೆಂಗಳೂರು, ತುಮಕೂರು ಮತ್ತು ಇತರೆ ಕಡೆ ಚಿನ್ನದ ಲೇಪ ಇರುವ ದೋಸೆಯನ್ನು ಗ್ರಾಹಕರಿಗೆ ಒದಗಿಸುತ್ತಿರುವುದು ಇತ್ತೀಚೆಗೆ ಗಮನಸೆಳೆದಿತ್ತು.
(4 / 12)
ಚಿನ್ನ ಸುಲಭಕ್ಕೆ ಕೆಡುವುದಿಲ್ಲ. ಅದು ಹೊರಗಿನ ವಾತಾವರಣಕ್ಕೆ ಬೇಗ ಅಥವಾ ಸುಲಭವಾಗಿ ಕ್ಷೀಣಿಸುವುದೂ ಇಲ್ಲ. ಕಬ್ಬಿಣಕ್ಕೆ ತುಕ್ಕು ಹಿಡಿದಂತೆ ಚಿನ್ನಕ್ಕೆ ಹಿಡಿಯಲ್ಲ. ಹೆಚ್ಚಿನ ಆಮ್ಲಗಳಿಗೂ ಸ್ಪಂದಿಸವುದಿಲ್ಲ. ಗಣಿಗಾರಿಕೆ ಮಾಡಿದ ಹೆಚ್ಚಿನ ಚಿನ್ನ ಇಂದಿಗೂ ಅಸ್ತಿತ್ವದಲ್ಲಿದೆ.
(5 / 12)
ಭೂಕಂಪಗಳ ಸಮಯದಲ್ಲಿ ಭೂಮಿಯ ಒಳಪದರದ ನೀರು ಬತ್ತಿ ಹೋಗಿ ಸ್ಫಟಿಕ ಶಿಲೆಯೊಂದಿಗೆ ಚಿನ್ನದ ಹರಳುಗಳನ್ನು ಸೃಷ್ಟಿಸಿದೆ ಎಂಬುದು ವಿಜ್ಞಾನಿಗಳ ನಿರೂಪಣೆ.
(6 / 12)
ಜಗತ್ತಿನಲ್ಲಿ ಸದ್ಯ ಕೇವಲ 50,000 ಟನ್‌ಗಳಷ್ಟು ಚಿನ್ನದ ನೆಲದಡಿಯಲ್ಲಿ ಉಳಿದಿದೆ. ಈಗಾಗಲೇ ಸುಮಾರು 190,000 ಟನ್‌ಗಳಷ್ಟು ಚಿನ್ನವನ್ನು ಈಗಾಗಲೇ ಗಣಿಗಾರಿಕೆ ಮಾಡಿ ಹೊರತೆಗೆಯಲಾಗಿದೆ.(canva)
(7 / 12)
ಚಿನ್ನವು ಅತ್ಯಂತ ಮೆದುವಾದ ಲೋಹ. 28.3 ಗ್ರಾಂ ಚಿನ್ನ ತಗೊಂಡು ಅದನ್ನು 8 ಕಿಮೀ ಉದ್ದದ ದಾರವನ್ನಾಗಿ ಮಾಡಬಹುದು. ಅಥವಾ 100 ಚದರ ಅಡಿ ಹಾಳೆಯನ್ನಾಗಿ ಕೂಡ ಪರಿವರ್ತಿಸಬಹುದು.
(8 / 12)
ಸಾಗರದ ನೀರು ಚಿನ್ನದಿಂದ ತುಂಬಿದೆ. ಸಾಗರಗಳಲ್ಲಿ ಸುಮಾರು 771 ಲಕ್ಷಕೋಟಿ ಡಾಲರ್ ಮೌಲ್ಯದ ಸುಮಾರು 20 ಮಿಲಿಯನ್ ಟನ್‌ಗಳಷ್ಟು ಚಿನ್ನವಿದೆ. ಆದರೆ ಸಾಗರದಲ್ಲಿರುವ ಚಿನ್ನ ಹೊರತೆಗೆಯುವುದು ಬಹಳ ಕಷ್ಟ.(canva)
(9 / 12)
ಚಿನ್ನ ಅಪರೂಪ ಮತ್ತು ದುಬಾರಿಯಾಗಿದ್ದರೂ, ಅದರ ಗುಣಲಕ್ಷಣಗಳಿಂದಾಗಿ ಇದು ಹೆಚ್ಚಿನ ಎಲೆಕ್ಟ್ರಾನಿಕ್ಸ್ ಉಪಕರಣಗಳಲ್ಲಿ ಕಂಡುಬರುತ್ತದೆ. ಕಂಪ್ಯೂಟರ್‌ಗಳು, ಟೆಲಿವಿಷನ್‌ಗಳು, ಕ್ಯಾಮೆರಾಗಳು, ರೇಡಿಯೋಗಳು ಮತ್ತು ಮೀಡಿಯಾ ಪ್ಲೇಯರ್‌ಗಳು ಚಿನ್ನವನ್ನು ಒಳಗೊಂಡಿರುತ್ತವೆ(canva)
(10 / 12)
ಆಧುನಿಕ ಬಲ್ಗೇರಿಯಾದಲ್ಲಿ ಕ್ರಿಸ್ತ ಪೂರ್ವ 4,500 ಮತ್ತು 4,000 ವರ್ಷಕ್ಕೂ ಹಳೆಯ ಚಿನ್ನದ ಕಲಾಕೃತಿಗಳು ಕಂಡುಬಂದಿವೆ. ಅದು ಆ ಕಲಾಕೃತಿಗಳು 6,000 ವರ್ಷಗಳಷ್ಟು ಹಳೆಯದು ಎಂಬ ಉಲ್ಲೇಖ ಅನೇಕ ವರದಿಗಳಲ್ಲಿ ಕಾಣಬಹುದು.(canva)
(11 / 12)
ಯಾರು ಹೆಚ್ಚು ಚಿನ್ನವನ್ನು ಉತ್ಪಾದಿಸುತ್ತಾರೆ ಎಂದು ನೋಡುವುದಾದರೆ, ಚೀನಾದಲ್ಲಿ ಅತಿ ಹೆಚ್ಚು 370 ಟನ್ ವಾರ್ಷಿಕ ಉತ್ಪಾದನೆ ಇದೆ. ಚಿನ್ನದ ಅತಿದೊಡ್ಡ ಗ್ರಾಹಕ ದೇಶವೂ ಚೀನಾವೇ ಆಗಿದೆ. (canva)
ಇತರ ಗ್ಯಾಲರಿಗಳು